ಆರೋಗ್ಯ

ತುಂಬಾ ಹುಳಿಯಾಗಿರುವಂತಹ ಲಿಂಬೆ ನೀರನ್ನು ಮುಂಜಾನೆ ಸೇವಿಸಬಾರದು,ಯಾಕೆ.?

Pinterest LinkedIn Tumblr

ಹಣ್ಣುಗಳ ಸಾಲಿನಲ್ಲಿ ಲಿಂಬೆ ಗಾತ್ರದಲ್ಲಿ ಸಣ್ಣದಾಗಿದ್ದರೂ ಹೆಚ್ಚು ಉಪಯುಕ್ತ. ಲಿಂಬೆಯು ದೇಹದ ತೂಕ ಹಾಗೂ ಕೊಬ್ಬು ಕಡಿಮೆ ಮಾಡಲು ಇದು ಅತ್ಯಂತ ಪರಿಣಾಮಕಾರಿಯೂ ಹೌದು. ಈ ಹಣ್ಣಿನಲ್ಲಿ ಇರುವ ಉನ್ನತ ಮಟ್ಟದ ಆಮ್ಲೀಯ ಗುಣ ಮತ್ತು ವಿಟಮಿನ್ ಸಿಯು ಚಯಾ ಪಚಯವನ್ನು ಉತ್ತೇಜಿಸಿ, ಜೀರ್ಣ ಪ್ರಕ್ರಿಯೆ ಸುಧಾರಿಸುವುದಲ್ಲದೆ, ಕೊಬ್ಬು ಮತ್ತು ವಿಷಕಾರಿ ಸಕ್ಕರೆ ಹೀರುವಿಕೆ ಕಡಿಮೆ ಮಾಡಲಿದೆ. ಹೀಗೆ ಮಾಡಿದೆ ಒಂದೇ ವಾರದಲ್ಲಿ ನೀವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿ, ಬೊಜ್ಜು ಇಳಿಸಲು ಸಹಾಯವಾಗುತ್ತದೆ.

ಇದು ದೀರ್ಘಕಾಲ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು ಮತ್ತು ಆಹಾರ ಸೇವನೆ ಮಿತಿ ಕಡಿಮೆ ಮಾಡುವುದರೊಂದಿಗೆ ಲಿಂಬೆಯ ಅತಿಯಾಗಿರುವ ಕೊಬ್ಬು ಕರಗಿಸುವುದು. ಜೇನುತುಪ್ಪ ಮತ್ತು ಲಿಂಬೆಯ ಮಿಶ್ರಣವು ಬೊಜ್ಜು ಇಳಿಸುವ ನಿಮ್ಮ ಗುರಿಯನ್ನು ಬೇಗನೆ ಸಾಧಿಸಲು ನೆರವಾಗಲಿದೆ. ತುಂಬಾ ರುಚಿಕರವಾಗಿರುವ ಜೇನುತುಪ್ಪದ ಲಿಂಬೆನೀರನ್ನು ಕುಡಿಯುವುದು ಕಷ್ಟ ಅಲ್ಲವೆ ಅಲ್ಲ.

3೦೦ ಮಿ.ಲೀ. ಬಿಸಿ ನೀರಿಗೆ ಒಂದು ಚಮಚ ಲಿಂಬೆರಸ ಮತ್ತು 2 ಚಮಚ ಜೇನುತುಪ್ಪ ಹಾಕಿ ಮತ್ತು ಸರಿಯಾಗಿ ಕಲಸಿಕೊಳ್ಳಿ. ಬೆಳಗಿನ ಉಪಾಹಾರಕ್ಕೆ 3೦ ನಿಮಿಷ ಮುಂಚಿತವಾಗಿ ಮತ್ತು ರಾತ್ರಿ ಮಲಗುವ 3೦ ನಿಮಿಷ ಮೊದಲು ಸೇವಿಸುತ್ತಾ ಬಂದರೆ ಒಂದು ವಾರದಲ್ಲಿ ಕೊಬ್ಬು ಕರಗಿರುವುದು ತಿಳಿಯಲಿದೆ.

ನೀರಿನ ಬದಲಿಗೆ ಲಿಂಬೆ ರಸ ಸೇವಿಸಬಹುದು. ಒಂದು ತಾಜಾ ಲಿಂಬೆಯನ್ನು ತುಂಡು ಮಾಡಿಕೊಂಡು ಅದರ ರಸವನ್ನು ಕುಡಿಯು ನೀರಿಗೆ ಹಾಕಿ ಅದನ್ನು ಮಿಶ್ರಣ ಮಾಡಿಕೊಳ್ಳಬೇಕು. ಈ ರಸವನ್ನು ನೀರಿನ ಬದಲಿಗೆ ಕುಡಿಯಬಹುದು. ಬೇಸಿಗೆಯಲ್ಲಿ ತಂಪಾಗಿಸಿ ಕುಡಿದರೆ ಉಲ್ಲಾಸದ ಜೊತೆಗೆ ಹೊಟ್ಟೆಯ ಕೊಬ್ಬು ಕರಗಿಸಬಹುದು. ಆದರೆ ನಿಮ್ಮ ಆರೋಗ್ಯದ ಮೇಲೆ ಯಾವುದೇ ಪರಿಣಾಮವಾಗದಂತೆ ಎಚ್ಚರ ವಹಿಸುವುದು ಅಗತ್ಯ.

ಬೆಳಗಿನ ವೇಳೆ ನೀವು ತುಂಬಾ ಹುಳಿಯಾಗಿರುವಂತಹ ಲಿಂಬೆ ನೀರು ಸೇವಿಸಬಾರದು. ಏಕೆಂದರೆ ಬೆಳಗಿನ ಸಮಯದಲ್ಲಿ ಹೊಟ್ಟೆ ಖಾಲಿಯಾಗಿರುತ್ತದೆ. ತುಂಬಾ ಆಮ್ಲೀಯವಾಗಿರುವುದನ್ನು ದೀರ್ಘಕಾಲ ಖಾಲಿ ಹೊಟ್ಟೆಗೆ ಸೇವಿಸಿದರೆ ಆಗ ಇದು ಅಲ್ಸರ್ ನ ಉರಿಯೂತ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಉಪ್ಪು ಮತ್ತು ಲಿಂಬೆರಸವನ್ನು ನೀರಿಗೆ ಹಾಕಿ ಕುಡಿಯುವುದು ತುಂಬಾ ಹುಳಿಯಾಗಿ ಅದನ್ನು ಸೇವಿಸಲು ಕಷ್ಟವಾಗುತ್ತದೆ ಎಂದು ಅನಿಸಿದರೆ ಆಗ ನೀವು ಲಿಂಬೆರಸಕ್ಕೆ ಉಪ್ಪು ಹಾಕಿಕೊಂಡು ಸೇವಿಸಬಹುದು. 25೦ ಮಿ.ಲೀ. ಬಿಸಿನೀರಿಗೆ ಅರ್ಧ ಲಿಂಬೆರಸ ಹಾಕಿ ಮತ್ತು ಬಿಳಿಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ ಸೇವಿಸಿರಿ. ಈ ರೀತಿಯ ಉಪ್ಪು ಬೆರೆಸಿದ ಲಿಂಬೆ ನೀರು ಜೀರ್ಣಕ್ರಿಯೆ ಹೆಚ್ಚಿಸುವುದು ಮತ್ತು ಕೊಬ್ಬು ಕಡಿಮೆ ಮಾಡಲು ಅನುಕೂಲವಾಗುತ್ತದೆ.

ಲಿಂಬೆ ಸಿಪ್ಪೆಯ ನೀರು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಲಿಂಬೆರಸವು ಮಾತ್ರ ಪರಿಣಾಮಕಾರಿಯಲ್ಲ. ಅದರ ಸಿಪ್ಪೆಯು ಬಲು ಉಪಯುಕ್ತ. ಲಿಂಬೆಯ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ಅಂಶವಿದೆ. ಇದು ಸಕ್ಕರೆ ಹೀರಿಕೊಳ್ಳುವಿಕೆ ಕಡಿಮೆ ಮಾಡಿ ಮತ್ತು ತೂಕವನ್ನು ನಿಯಂತ್ರಣದಲ್ಲಿ ಇದು ನೆರವಾಗಲಿದೆ.

ವಾರದಲ್ಲೇ ಹೊಟ್ಟೆ ಬೊಜ್ಜು ಕರಗುವಂತೆ ಮಾಡಲು ನೀವು 10 ಲಿಂಬೆಯ ಸಿಪ್ಪೆಯನ್ನು 2೦೦ಮಿ.ಲೀ. ನೀರಿನಲ್ಲಿ ಬೇಯಿಸಬೇಕು ಈ ರೀತಿ ಬೇಯಿಸಿದ ನೀರು ಹತ್ತು ನಿಮಿಷ ಕಾಲ ಕುದಿಸಬೇಕು. ಇದು ತಣ್ಣಗಾದ ಬಳಿಕ ಇದನ್ನು ಸೇವಿಸಬಹುದು.

ಈ ನೀರು ಸ್ವಲ್ಪ ಕಹಿಯಾಗಿರುತ್ತದೆ.ಮೊದಲ ಸಲ ಸೇವನೆ ಮಾಡುವಾಗ ನಿಮಗೆ ಅಸಾಮಾನ್ಯವೆನಿಸಬಹುದು. ನೀರು ಕುಡಿದ ಬಳಿಕ ಒಂದು ತುಂಡು ಸೇಬು ಸೇವಿಸಿದರೆ ಇದು ಕಹಿ ಕಡಿಮೆ ಮಾಡುತ್ತದೆ. ಲಿಂಬೆ ಹಣ್ಣು- ಹುಳಿಯಾದರೂ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಇದು ಪೂರಕವಾಗಿದೆ.

Comments are closed.