ಆರೋಗ್ಯ

ತ್ವಚೆಯಾ ಆರೈಕೆಗೆ ಪಾಪಾಸ್ ಕಳ್ಳಿ ತುಂಬಾ ಒಳ್ಳೆಯದು ಗೋತ್ತಾ..?

Pinterest LinkedIn Tumblr

ಪ್ರತಿ ಒಬ್ಬರೂ ಪ್ರಸ್ತುತ ದಿನದಲ್ಲಿ ಏನಾದರೂ ಒಂದು ಸಂಶೋಧನೆಯಲ್ಲಿ ತೊಡಗಿ ಕೊಂಡಿರುತ್ತಾರೆ ಇದರಿಂದ ಹೊಸ ಹೊಸ ಸಾಮಗ್ರಿಗಳು ನಮ್ಮ ದೇಹದ ಆರೈಕೆಗೆ ನಮಗೆ ಲಭ್ಯವಾಗುತ್ತದೆ ಅಲೋವೆರಾವು ಒಂದು ವಿಶ್ವದೆಲ್ಲೆಡೆ ತುಂಬಾ ಜನಪ್ರಿಯವಾಗಿದೆ. ಅಲೋವೆರಾದಿಂದ ದೇಹದಲ್ಲಿ ಆರೈಕೆ ಮಾಡುವುದು ಮಾತ್ರವಲ್ಲದೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಇನ್ನು ಅಲೋವೆರಾ ಜ್ಯೂಸ್ ಕೂಡಾ ಮಾರುಕಟ್ಟೆಗೆ ಬಂದೇ ಬಿಟ್ಟಿದೆ ಆದರೆ ಪಾಪಾಸ್ ಕಳ್ಳಿಯನ್ನು ತ್ವಚೆಯ ಆರೈಕೆಗೆ ಬಳಸುವ ಬಗ್ಗೆ ನೀವು ಕೇಳಿದ್ದೀರಾ ಇಲ್ಲ ತಾನೆ ಆದರೆ ಅಲೋವೆರಾ ಕುಟುಂಬಕ್ಕೆ ಸೇರಿರುವ ಪಾಪಾಸ್ ಕಳ್ಳಿ ಕೂಡ ತ್ವಜೆಯಾ ಆರೈಕೆಗೆ ತುಂಬಾ ಒಳ್ಳೆಯದು ಇದನ್ನು ಕೇಳಿ ನಿಮಗೆ ಅಚ್ಚರಿ ಆಗಬಹುದು ಆದರೆ ಇದು ನಿಜ ಮೊಡವೆಗಳಿಂದ ಉಂಟಾಗುವ ಕಲೆಗಳ ನಿವಾರಣೆ ಮಾಡುವಲ್ಲಿ ಪಾಪಾಸ್ ಕಳ್ಳಿಯ ಲೋಳೆಯ ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ.

ಇನ್ನು ಮುಳ್ಳುಗಳಿಂದ ತುಂಬಿರುವ ಪಾಪಾಸ್ ಕಳ್ಳಿಯ ಲೋಳೆ ತೆಗೆಯುವುದು ತುಂಬಾ ಕಠಿಣ ಕೆಲಸ ಆದರೆ ಜಾಗೃತಿ ವಹಿಸಿ ಇದರ ಲೋಳೆ ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಆಗಲಿದೆ ಇನ್ನು ಮನೆ ಮದ್ದುಗಳು ತುಂಬಾ ನಿಧಾನವಾಗಿ ಫಲಿತಾಂಶ ನೀಡುವ ಕಾರಣದಿಂದ ಒಂದು ಸಲ ಬಳಸಿಕೊಂಡರೆ ಅದರಿಂದ ಯಾವುದೇ ಪರಿಣಾಮ ಸಿಗಲ್ಲ ಇದನ್ನು ನಿಯಮಿತವಾಗಿ ಬಳಸಿದರೆ ಫಲಿತಾಂಶ ಖಚಿತ. ಪಾಪಾಸ್ ಕಳ್ಳಿಯ ಲೋಳೆಯನ್ನು ತಿಂಗಳಲ್ಲಿ 8 ರಿಂದ 10 ಸಲ ಬಳಸಿದರೆ ಅದು ಫಲಿತಾಂಶ ನೀಡುವುದು ತ್ವಚೆ ಬಣ್ಣದಲ್ಲಿ ಬದಲಾವಣೆಯಾಗಿ ಕಲೆಗಳು ನಿವಾರಣೆ ಆಗುವುದು ಪಾಪಾಸ್ ಕಳ್ಳಿಯ ಲೋಳೆಯನ್ನು ನೇರವಾಗಿ ತ್ವಚೆಗೆ ಹಚ್ಚಿಕೊಳ್ಳಬೇಡಿ ಇದರಿಂದ ಮಾಸ್ಕ್ ತಯಾರಿಸಿ ಬಳಸಿಕೊಳ್ಳಿ. ಮಾಸ್ಕ್ ಹೇಗೆ ತಯಾರಿಸುವುದು ಎಂದು ತಿಳಿಯೋಣ ಬನ್ನಿ.

ಪಾಪಾಸ್ ಕಳ್ಳಿ ಮಾಸ್ಕ್ ಗೆ ಬೇಕಾಗುವ ಸಾಮಗ್ರಿಗಳು ಒಂದು ಪಾಪಾಸ್ ಕಳ್ಳಿ ಎಲೆ ಕತ್ತರಿ ಒಂದು ಚಮಚ ಹಸಿ ಜೇನುತುಪ್ಪ ಒಂದು ನಿಂಬೆ ಹಣ್ಣಿನ ರಸ. ತಯಾರಿಸುವುದು ವಿಧಾನ ಪಾಪಾಸ್ ಕಳ್ಳಿ ಅನ್ನು ತುಂಬಾ ಎಚ್ಚರಿಕೆ ಇಂದ ಹಿಡಿದು ಚೆನ್ನಾಗಿ ತೊಳೆದುಕೊಳ್ಳಿ ಹಾಗೆಯೇ ಜಾಗೃತಿ ವಹಿಸಿ ಇದನ್ನು ಕತ್ತರಿಸಿ ಲೋಳೆ ತೆಗೆಯಿರಿ ಇದು ಹಸಿರು ಬಣ್ಣದಿಂದ ಕೂಡಿರುತ್ತದೆ ಒಂದು ಚಮಚದಷ್ಟು ಕಳ್ಳಿಯ ಲೋಳೆ ತೆಗೆದುಕೊಳ್ಳಿ ಒಂದು ಎಲೆಯಿಂದ ಬೇಕಾಗುವಷ್ಟು ಜೆಲ್ ಸಿಗದೆ ಇದ್ದರೆ ಮತ್ತೊಂದು ಎಲೆಯನ್ನು ತೆಗೆದುಕೊಳ್ಳಿ ಮತ್ತೊಂದು ಚಮಚ ಜೆಲ್ ತೆಗೆದ ನಂತರ ಇದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಈಗ ಪಾಪಾಸ್ ಕಳ್ಳಿಯ ಮಾಸ್ಕ್ ತಯಾರಾಗುತ್ತದೆ ಮೊದಲು ದೇಹದ ಬೇರೆ ಭಾಗಕ್ಕೆ ಹಚ್ಚಿಕೊಂಡು ಅಲರ್ಜಿ ಆಗುತ್ತದೆಯೇ ಎಂದು ತಿಳಿಯಿತು ಮೊಡವೆ ಹಾಗೂ ಇತರ ಜಾಗಕ್ಕೆ ಹಚ್ಚಿಕೊಳ್ಳಿ ಸುಮಾರು 20 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ತೊಳೆದುಕೊಳ್ಳಿ ನಿಯಮಿತವಾಗಿ ಇದನ್ನು ಬಳಸುತ್ತಾ ಇದ್ದರೆ ಮುಖದಲ್ಲಿ ಇರುವ ಮೊಡವೆ ಹಾಗೂ ಬೊಕ್ಕೆಯ ಕಲೆಗಳು ನಿವಾರಣೆ ಆಗಿ ಉತ್ತಮ ಫಲಿತಾಂಶಗಳು ಪಡೆಯಬಹುದು.

Comments are closed.