ಆರೋಗ್ಯ

ದಿನಕ್ಕೊಂದು ಎಳನೀರು ಸೇವನೆ, ಈ ಸಮಸ್ಯೆಗಳಿಗೆ ಉತ್ತಮ ಪರಿಹಾರ

Pinterest LinkedIn Tumblr

ಹೌದು ಒಂದು ಎಳನೀರು ಒಂದು ಇಂಜೆಕ್ಷನ್ ಗೆ ಸಮ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಕೆಳಗೆ ಇರುವ ಸಮಸ್ಯೆಗಳಿಗೆ ಪರಿಹಾರ ಅಂದ್ರೆ ಅದು ಎಳನೀರು ಮಾತ್ರ ಪ್ರತಿದಿನ ಒಂದು ಎಳನೀರು ಸೇವನೆ ಮಾಡಿ ಈ ಸಮಸ್ಯೆಗಳಿಂದ ದೂರವಿರಿ.

ಹೃದಯದ ಆರೋಗ್ಯಕ್ಕೆ ಎಳನೀರು
ಇದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟಾಲ್ ಹೆಚ್ಚು ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ಹ್ಯಾಂಗೋವರ್‌?
ವೀಕೆಂಡ್‌ ಪಾರ್ಟಿ ಮುಗಿಸಿ ಬೆಳಗ್ಗೆ ಏಳುವಾಗ ಹ್ಯಾಂಗೋವರ್‌ ಕಾಡುತ್ತಿದೆಯೇ? ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿದರೆ ಸಾಕು, ರಿಫ್ರೆಶ್‌ ಆಗುವಿರಿ.

ಬೊಜ್ಜು ಕರಗಲು
ಬೊಜ್ಜು ಕರಗಲು ದಿನಾ ಅರ್ಧ ಗಂಟೆ ವ್ಯಾಯಾಮ ಹಾಗೂ ಒಂದು ಎಳನೀರು ಕುಡಿಯಿರಿ, ಬೊಜ್ಜು ಕರಗುವುದು, ಮುಖದ ಕಾಂತಿ ಕೂಡ ಹೆಚ್ಚುವುದು.

ಮೈಗ್ರೇನ್‌
ದೇಹದಲ್ಲಿ ಮೆಗ್ನಿಷಿಯಂ ಅಂಶ ಕಡಿಮೆಯಾದರೆ ಮೈಗ್ರೇನ್‌ ಕಾಣಿಸುವುದು. ಮೈಗ್ರೇನ್‌ಗೆ ಎಳನೀರಿನಲ್ಲಿರುವ ಮೆಗ್ನಿಷಿಯಂ ಒಳ್ಳೆಯದೆಂದು ಎಕ್ಸ್‌ಪರ್ಟ್ಸ್‌ ಕೂಡ ಸಲಹೆ ನೀಡುತ್ತಾರೆ.

ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ
ಇದರಲ್ಲಿ ಅಮೈನೋ ಆ್ಯಸಿಡ್‌ ಇದ್ದು ಸಕ್ಕರೆಯಂಶವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಯೌವನದ ಲುಕ್ ಬೇಕೆ?
ವಯಸ್ಸಾದಂತೆ ಸುಕ್ಕಾಗುವುದು ನೈಸರ್ಗಿಕ ನಿಯಮವಾದರೂ ಯೌವನ ಕಳೆ ಬೇಗನೆ ಮಾಸದಿರಲು ಎಳನೀರು ಸಹಾಯ ಮಾಡುತ್ತದೆ.

ಬಿಪಿ ನಿಯಂತ್ರಣ
ವೆಸ್ಟ್‌ ಇಂಡಿಯಾ ಮೆಡಿಕಲ್ ಜರ್ನಲ್‌ ಮಾಡಿರುವ ಅಧ್ಯಯನದಲ್ಲಿ ಎಳನೀರಿನಲ್ಲಿರುವ ಪೊಟಾಷ್ಯಿಯಂ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ ಎಂದು ಸಾಬೀತಾಗಿದೆ.

ನ್ಯಾಚುರಲ್‌ ಎನರ್ಜಿ ಡ್ರಿಂಕ್ಸ್‌
ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತುಂಬಾ ಸುಸ್ತು ಅನಿಸುವುದು. ಒಂದು ಎಳನೀರು ದಿನಪೂರ್ತಿ ಚಟುವಟಿಕೆಯಿಂದ ಇರಲು ಚೈತನ್ಯ ನೋಡುವುದು.

Comments are closed.