ಕರ್ನಾಟಕ

ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಬಿಜೆಪಿ ಸೇರುವ ಬಗ್ಗೆ ಹೇಳಿದ್ದೇನು…..?

Pinterest LinkedIn Tumblr

ಬೆಂಗಳೂರು: ಜೆಡಿಎಸ್‌ನಿಂದ ಬಿಜೆಪಿಗೆ ಮುಖ ಮಾಡಿರುವ ಜಿ.ಟಿ.ದೇವೇಗೌಡ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.ಅನಾರೋಗ್ಯ ಕಾರಣ ಮಲ್ಲೇಶ್ವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಉಳಿಸುವ ಬಗ್ಗೆ ನಮ್ಮ ನಾಯಕರೇ ಹೇಳುತ್ತಿದ್ದರು‌‌. ಆದರೂ ಜನ ಬಿಜೆಪಿ ಪರ ಮತ ಹಾಕಿದ್ದಾರೆ. ಒಂದೇ ಪಕ್ಷದ ಅಧಿಕಾರದಿಂದ ಅಭಿವೃದ್ಧಿ ಆಗುವುದಿಲ್ಲ. ಮೂರೂವರೆ ವರ್ಷ ಆಡಳಿತ ಪಕ್ಷಕ್ಕೆ ಬೆಂಬಲ ಕೊಡಬೇಕು ಎಂದರು.

ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಭ್ಯರ್ಥಿ ಹಾಕುವ ಅಗತ್ಯ ಇರಲಿಲ್ಲ. ಬೇರೆ ಪಕ್ಷಕ್ಕೆ ಹೋಗುವವರು ಹೋಗುತ್ತಾರೆ. ಇವರು ಆರಾಮಾಗಿ ಇರಬೇಕಿತ್ತು‌. ಏನು ಆಗುತ್ತಿರಲಿಲ್ಲ. ಕರ್ನಾಟಕದಲ್ಲಿ ಜನ ಬುದ್ಧಿವಂತರು ಇದ್ದಾರೆ‌. ಸುಭದ್ರ ಸರ್ಕಾರವನ್ನು ಜನರು ಬಯಸಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕುವ ಅವಶ್ಯಕತೆ ಇರಲಿಲ್ಲ. ಯಡಿಯೂರಪ್ಪ ರಾಜ್ಯದಲ್ಲಿ ಅಭಿವೃದ್ಧಿ ಪರ ಕೆಲಸ ಮಾಡುತ್ತಾರೆ. ಹೀಗಾಗಿ ಅವರೇ ಮುಂದಿನ ಮೂರುವರೆ ವರ್ಷ ಅಧಿಕಾರ ನಡೆಸಲಿ ಎಂದರು‌

ಹುಣಸೂರು ಉಪ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ತಮ್ಮ ಪುತ್ರ ಹರೀಶ್ ಯಾವ ಪಕ್ಷಕ್ಕೂ ಸೇರಿದವರು ಅಲ್ಲ. ಯೋಗೇಶ್ ಅವರು ಏಕವಚನದಲ್ಲಿ ಮಾತನಾಡಿದ್ದಾರೆ. ಒಕ್ಕಲಿಗರು ಹೆಚ್ಚಾಗಿರುವ ಊರಿಗೆ ಹೋಗಿ ಯಾರವನು ಜಿ.ಟಿ. ದೇವೇಗೌಡ ಎಂದು ಮಾತಾಡಿದ್ದಾರೆ ಅಲ್ಲಿಯ ಜನ ಅವರು ಕೊಟ್ಟ ಸೀರೆ ಬೀದಿಗೆ ಎಸೆದು ಸಿಡಿದೆದ್ದಿದ್ದಾರೆ ಎಂದರು.

ಬಿಜೆಪಿಗೆ ಸೇರುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ವರ್ಷದ ನಂತರ ಮುಂದಿನ ಚುನಾವಣೆಯಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ಮುಂದಿನ ಮೂರು ವರ್ಷ ಯಾರು ಯಾವ ಪಕ್ಷದಲ್ಲಿ ಇರುತ್ತಾರೆ ಎಲ್ಲಿಗೆ ಹೋಗುತ್ತಾರೆ ಎನ್ನುವುದು ಗೊತ್ತಾಗಲಿದೆ. ಈಗ ಜೆಡಿಎಸ್ ಪಕ್ಷದಲ್ಲಿ ಇದ್ದೇನೆ. ಮೂರು ವರ್ಷಗಳ ನಂತರ ರಾಜಕೀಯ ಯಾವ ದಿಕ್ಕಿಗೆ ತಿರುಗುತ್ತೆ ಆಗ ನಿರ್ಧಾರ ಮಾಡೋಣ ಎಂದು ಮಾರ್ಮಿಕವಾಗಿ ನುಡಿದರು.

Comments are closed.