ಆರೋಗ್ಯ

ದಟ್ಟವಾದ ಕಪ್ಪಾದ ಕೂದಲಿಗಾಗಿ ನೈಸರ್ಗಿಕ ವಸ್ತುಗಳ ಬಳಕೆ

Pinterest LinkedIn Tumblr

ಕೂದಲು ಬಿಳಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ಸಮಸ್ಯೆಯಾಗಿದೆ. ಇದನ್ನು ಸುಲಭವಾಗಿ ನಿವಾರಣೆ ಮಾಡಲು ಮನೆಯಲ್ಲಿಯೇ ನೀವು ಈ ವಿಧಾನವನ್ನು ಬಳಕೆ ಮಾಡಬಹುದು. ಮನೆಯಲ್ಲಿಯೇ ಸಿಗುವಂತಹ ಪ್ರಾಕೃತಕ ವಸ್ತುಗಳನ್ನು ಬಳಕೆ ಮಾಡಿ ಆರೋಗ್ಯಕರ ಕಪ್ಪಾದ ಕೂದಲನ್ನು ನೀವು ಪಡೆಯಬಹುದು.

ಬೇಕಾಗುವ ಸಾಮಗ್ರಿಗಳು : ದಾಸವಾಳ ಎಲೆ, ಮೆಂತೆ, ಲಿಂಬೆ ರಸ, ತೆಂಗಿನ ಎಣ್ಣೆ,

ತಯಾರಿಸುವ ವಿಧಾನ
ದಾಸವಾಳದ 20ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಕ್ಲೀನ್ ಮಾಡಿ
ಮೆಂತೆಯನ್ನು ಎರಡು ದಿನ ನೀರಿನಲ್ಲಿ ನೆನೆಸಿ ಇಡಬೇಕು
ಮೆಂತೆ ನೆನೆಸಿದ ನೀರಿನಲ್ಲಿ ಮೆಂತೆ ಮತ್ತು ದಾಸವಾಳದ ಎಲೆಯನ್ನು ಜೊತೆಯಾಗಿ ಸೇರಿಸಿ ಮಿಕ್ಸಿಯಲ್ಲಿ ಸರಿಯಾಗಿ ಮಿಕ್ಸ್ ಮಾಡಿ. ಈಗ ಒಂದು ನಿಂಬೆ ಹಣ್ಣಿನ ರಸಕ್ಕೆ , ಎರಡು ಚಮಚ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮೊದಲಿಗೆ ತಲೆಗೆ ಹಚ್ಚಿ.
ನಂತರ ಮೆಂತೆ ಮತ್ತು ದಾಸವಾಳ ಎಳೆಯ ಮಿಶ್ರಣವನ್ನು ತಲೆಗೆ ಹಚ್ಚಿ. ಎಲ್ಲಾ ಕೂದಲು ಪೂರ್ತಿಯಾಗಿ ಕವರ್ ಆಗುವಂತೆ ಮಾಡಿ.

ಅರ್ಧ ಗಂಟೆ ನಂತರ ಕೂದಲನ್ನು ವಾಷ್ ಮಾಡಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡಿದರೆ ಕೂದಲು ಕಪ್ಪಾಗುತ್ತದೆ, ದಟ್ಟವಾಗಿ ಬೆಳೆಯುತ್ತದೆ ಹಾಗೂ ಕೂದಲು ದಪ್ಪವಾಗಿ ಬೆಳೆಯುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡುವ ಈ ವಿಧಾನವನ್ನು ನೀವು ತಪ್ಪದೆ ಮಾಡಿ.

Comments are closed.