ಆರೋಗ್ಯ

ಅನ್ನಕ್ಕೆ ತುಪ್ಪವನ್ನು ಹಾಕಿ ಸೇವಿಸುವುದರಿಂದ ಸಿಗುವ ಲಾಭಗಳು.

Pinterest LinkedIn Tumblr

ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಗೂ ಉಪ್ಪನ್ನು ಬೆರೆಸಿ ತಿನ್ನುವುದರಿಂದ ಏನೆಲ್ಲ ಆಗುತ್ತದೆ ಗೊತ್ತೇ. ತುಪ್ಪ ಇದನ್ನು ಬೆಣ್ಣೆಯಿಂದ ಮಾಡುವ ಪದಾರ್ಥ ಮೊಸರನ್ನು ಕಡೆದಾಗ ಅದರಲ್ಲಿ ಬೆಣ್ಣೆ ಆಗುತ್ತದೆ ಆ ಬೆಣ್ಣೆಯನ್ನು ಕಾಯಿಸಿ ಅದಕ್ಕೆ ಜೀರಿಗೆ. ಕೊತ್ತಂಬರಿ ಸೊಪ್ಪು. ಕರಿಬೇವು. ಮೆಂತ್ಯ. ಅರಿಶಿನ.ಬೆಳ್ಳುಳ್ಳಿ. ವೀಳ್ಯದೆಲೆ ಇವೆಲ್ಲವನ್ನು ಕೂಡ ಅದರ ಒಳಗೆ ಹಾಕಿ ಚೆನ್ನಾಗಿ ಕಾಯಿಸಿದಾಗ ಅದು ತುಪ್ಪ ಆಗಿ ಮಾರ್ಪ ಡುತ್ತದೆ ಈ ಎಲ್ಲ ವಸ್ತುಗಳನ್ನು ಏಕೆ ಹಾಕುತ್ತಾರೆ ಎಂದರೆ ತುಪ್ಪದ ಸುವಾಸನೆ ಹೆಚ್ಚಲಿ ಹಾಗೂ ತುಪ್ಪದ ರುಚಿ ಹೆಚ್ಚಲಿ ಎಂಬ ಉದ್ದೇಶದಿಂದ ಹಾಕುತ್ತಾರೆ. ಈ ತುಪ್ಪ ಎಲ್ಲರಿಗೂ ಕೂಡ ಇಷ್ಟ ಅದರಲ್ಲೂ ಮಕ್ಕಳಿಗೆ ತುಂಬಾ ಹೆಚ್ಚಾಗಿ ಬಳಸುತ್ತಾರೆ ಈ ತುಪ್ಪದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ. ಕಾರ್ಬೋಹೈಡ್ರೇಟ್ ಖನಿಜಗಳು. ಕೊಲೆಸ್ಟರಾಲ್ . ಫಿಟೋಸ್ಟೆರಾಲ್ಸ ವಿಟಮಿನ್ . ವಿಟಮಿನ್ ಬಿ, ಸಿ, ಡಿ ವಿಟಮಿನ್ ಇ .ವಿಟಮಿನ್ ಕೆ. ಒಮೆಗಾ ಆಮ್ಲಗಳು. ಇವುಗಳೆಲ್ಲವನ್ನು ಕೂಡ ತುಪ್ಪವು ಒಳಗೊಂಡಿರುತ್ತದೆ.

ಆದರೆ ತುಪ್ಪವನ್ನು ಸೇವಿಸುವುದರಿಂದ ತೂಕ ಹೆಚ್ಚುತ್ತದೆ. ಬೊಜ್ಜು ಬೆಳೆಯುತ್ತದೆ. ಆರೋಗ್ಯ ಕೆಡುತ್ತದೆ ಎಂದೆಲ್ಲ ಭಯ ಪಡುವವರ ಸಂಖ್ಯೆಯೇ ಹೆಚ್ಚು ಆದರೆ ನಿಯಮಿತವಾಗಿ ತುಪ್ಪವನ್ನು ಸೇವಿಸುವುದರಿಂದ ಏನೆಲ್ಲ ಲಾಭಗಳು ಇವೆ ಎಂದು ನೋಡೋಣ ಬನ್ನಿ. ತುಪ್ಪವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ತುಂಬಾ ಒಳ್ಳೆಯದು ನಿತ್ಯ ಸೇವಿಸುವ ಆಹಾರದಲ್ಲಿ ತುಪ್ಪ ಇದ್ದರೆ ಸೇವಿಸಿದ ಆಹಾರ ಸುಲಭವಾಗಿ ಜೀರ್ಣ ಆಗಲು ಸಹಾಯ ಮಾಡುತ್ತದೆ. ಜೊತೆಗೆ ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ವಿಟಮಿನ್ ಅಂಶ ಇದೆ ಹಾಗಾಗಿ ಇದು ದೇಹದ ಹಾಗೂ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದಲ್ಲದೆ ಹೊಟ್ಟೆ ಉರಿ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ತುಪ್ಪ ಪರಿಹಾರ ನೀಡುತ್ತದೆ. ಇದು ತಂಪು ಗುಣವನ್ನು ಕೂಡ ಹೊಂದಿದೆ.

ಆದರೆ ಯಾವುದೇ ಕಾರಣಕ್ಕೂ ಕೂಡ ಕೆಲವು ವ್ಯಕ್ತಿಗಳು ತುಪ್ಪವನ್ನು ತಿನ್ನಬಾರದು ಹಾಗಾದರೆ ಅವರು ಯಾರು ಎಂದು ತಿಳಿಯೋಣ. ಹೃದಯದ ತೊಂದರೆ ಇರುವವರು, ಅಧಿಕ ತೂಕವನ್ನು ಹೊಂದಿರುವವರು. ಒಬೆಸಿಟಿ ಸಮಸ್ಯೆ ಇರುವವರು ತುಪ್ಪವನ್ನು ತಿನ್ನಬಾರದು. ಕೆಲವರು ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಗೂ ಉಪ್ಪನ್ನು ಹಾಕಿಕೊಂಡು ಸೇವಿಸುತ್ತಾರೆ ಈ ತುಪ್ಪದ ಅನ್ನದ ರುಚಿಯೇ ಬೇರೆ ಅದರಲ್ಲೂ ಮಕ್ಕಳು ಇದನ್ನು ತುಂಬಾ ಇಷ್ಟ ಪಡುತ್ತಾರೆ ಹಾಗೆಯೇ ತುಪ್ಪವನ್ನು ಕಾಯಿಸಿದ ನಂತರ ತುಪ್ಪವನ್ನು ಒಂದು ಬಟ್ಟಲಿಗೆ ಹಾಕಿಕೊಂಡ ನಂತರ ಅದರಲ್ಲಿ ಉಳಿದಿರುವ ಗಸಿಗೆ ಕೂಡ ಬಿಸಿ ಅನ್ನ ಹಾಗೂ ಉಪ್ಪನ್ನು ಹಾಕಿಕೊಂಡು ತಿಂದರೆ ಅದು ಬಾಯಿಗೂ ರುಚಿ ಕೊಡುತ್ತದೆ ಹಾಗೆಯೇ ಆರೋಗ್ಯಕ್ಕೂ ಕೂಡ ಒಳ್ಳೆಯದು.

ತುಪ್ಪ ತಿನ್ನುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ತುಪ್ಪವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಆದರೆ ಅತಿಯಾದರೆ ಅಮೃತ ಕೂಡ ವಿಷ ಎನ್ನುವಂತೆ ತುಪ್ಪವನ್ನು ಸೇವಿಸುವಾಗಲು ಮಿತಿ ಆಗಿ ಸೇವಿಸಬೇಕು. ಹಾಗಿದ್ದರೆ ಮಾತ್ರ ಆರೋಗ್ಯಕ್ಕೂ ಕೂಡ ಒಳ್ಳೆಯದು. ಹಾಗಾಗಿ ತುಪ್ಪ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.

Comments are closed.