ಕರ್ನಾಟಕ

ಚುನವಾಣೋತ್ತರ ಸಮೀಕ್ಷೆಯಲ್ಲಿ ಮತ್ತೆ ಅರಳಲಿದೆ ಕಮಲ ! ಬಿಜೆಪಿ ಸರಕಾರ ಸೇಫ್ ! ಯಡಿಯೂರಪ್ಪ ಮುಖದಲ್ಲಿ ಸಂತಸ

Pinterest LinkedIn Tumblr

ಬೆಂಗಳೂರು: ಗುರುವಾರ ನಡೆದ 15 ವಿದಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆದಿದೆ, ಶೇ.66.4 ರಷ್ಟು ಪ್ರಮಾಣದಲ್ಲಿ ಮತದಾನವಾಗಿದೆ. ಅತಿ ಹೆಚ್ಚು ಮತದಾರರಿರುವ ಕ್ಷೇತ್ರಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ, ಸದ್ಯ ಎಲ್ಲರ ಚಿತ್ತ ಸೋಮವಾರದ ಮತಎಣಿಕೆ ಕಾರ್ಯದ ಮೇಲೆ ನಿಂತಿದೆ. ಚುನವಾಣೋತ್ತರ ಸಮೀಕ್ಷೆ ಬಿಜೆಪಿ ಪರ ಇರುವುದರಿಂದ ಸದ್ಯಕ್ಕೆ ಬಿಎಸ್ ವೈ ಸರ್ಕಾರ ಸೇಫ್ ಆಗಿದೆ ಎಂದು ಹೇಳಲಾಗುತ್ತಿದೆ.

ಸರಳ ಬಹುಮತಕ್ಕೆ ಬಿಜೆಪಿಗೆ ಕನಿಷ್ಠ ಆರು ಸೀಟುಗಳನ್ನು ಗೆಲ್ಲಬೇಕಿದೆ, ಆದರೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ 8ರಿಂದ 12 ಸೀಟು ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ 10-12 ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇನ್ನೂ ಮೂರು ಪ್ರಾದೇಶಿಕ ಚಾನೆಲ್ ಗಳು ಕೈಗೊಂಡ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಹೇಳಲಾಗುತ್ತಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ಮುಖಂಡರು 15 ಕ್ಷೇತ್ರಗಳಲ್ಲಿಯೂ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ, ಕಾಂಗ್ರೆಸ್ 7 ಸೀಟು ಹಾಗೂ ಜೆಡಿಎಸ್ ಎರಡರಿಂದ ಮೂರು ಸೀಟು ಗೆಲ್ಲುವ ವಿಶ್ವಾಸದಲ್ಲಿದೆ.

ಸಂಜೆ 4 ಗಂಟೆವರೆಗೂ ನಡೆ ಮತದಾನ ಪ್ರಕ್ರಿಯೆ ಆಧರಿಸಿ ಎಕ್ಸಿಟ್ ಪೋಲ್ ವರದಿ ತಯಾರಾಗಿದೆ, ಸಂಜೆ 6 ಗಂಟೆ ಸುಮಾರಿಗೆ ಮತದಾನ ಪ್ರಕ್ರಿಯೆ ತೀವ್ರವಾಯಿತು. ಹೆಚ್ಚಿನ ಪ್ರಮಾಣದ ಮತದಾನವಾಗುವುದರಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ, ಕಾಂಗ್ರೆಸ್ ಮತ ಬ್ಯಾಂಕ್ ಆಗಿರುವ ಶಿವಾಜಿನಗರದಲ್ಲಿ ಅತಿ ಹೆಚ್ಚು ಮತದಾನವಾಗಿದೆ, ಆದರೆ ಶೇಕಡಾವರು ಪ್ರಮಾಣದಲ್ಲಿ ಕಡಿಮೆಯಾಗಿದೆ

Comments are closed.