ಆರೋಗ್ಯ

ದೇಹದಲ್ಲಿ ಕ್ಯಾಲ್ಶಿಯಂ ಖನಿಜಗಳ ಅಂಶ ಕಡಿಮೆಯಾಗುವುದೂ ಈ ಸಮಸ್ಯೆಗೆ ಕಾರಣ..?ಗೋತ್ತೆ.

Pinterest LinkedIn Tumblr

ಇಂದಿನ ಕಾರ್ಪೋರೇಟ್ ಜೀವನ ಬಹಳಷ್ಟು ಯುವಜನತೆಯನ್ನು ಇಡೀ ದಿನ ಡೆಸ್ಕ್‌ನಲ್ಲಿ ಕುಳಿತೇ ಕಳೆಯುವಂತೆ ಮಾಡಿಬಿಟ್ಟಿದೆ. ಹೀಗೆ ಚಲಲಶೀಲತೆ ಇಲ್ಲದ ಬದುಕು ತೂಕ, ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗಬಹುದಲ್ಲದೆ, ನಮ್ಮ ಮೂಳೆಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಪೋಸ್ಚರ್ ಸರಿಯಿಲ್ಲದೆ ಬೆನ್ನು ಬಾಗಿಸಿ ಕುಳಿತುಕೊಳ್ಳುವ ಅಭ್ಯಾಸ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೂಳೆಗಳು ಗಟ್ಟಿಮುಟ್ಟಾಗಿ ಇದ್ದರೆ ಮಾತ್ರ ದೇಹ ಗಟ್ಟಿಮುಟ್ಟಾಗಿರಲು ಸಾಧ್ಯ. ದೇಹದಲ್ಲಿ ಕ್ಯಾಲ್ಶಿಯಂ ಖನಿಜಗಳ ಅಂಶ ಕಡಿಮೆಯಾಗುವುದೂ ಈ ಸಮಸ್ಯೆಗೆ ಕಾರಣವಾಗಿದೆ. ಇಂಥ ಉದ್ಯೋಗದಲ್ಲಿದ್ದೂ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ?

ನಿಮ್ಮ ಪೋಸ್ಚರ್ ನಿಭಾಯಿಸಿ
ನೇರವಾಗಿ ಕೂರಬೇಕೆಂದು ನಮಗೆ ತಿಳಿದಿದೆ. ಆದರೆ, ಕೆಲಸ ಮಾಡುತ್ತಾ ಮಾಡುತ್ತಾ ಬೆನ್ನು ಬಗ್ಗಿ ಹೋಗುವುದು ಗೊತ್ತೇ ಆಗುವುದಿಲ್ಲ. ಈ ಸಮಸ್ಯೆ ಸರಿಯಾಗಿಸಿಕೊಳ್ಳಲು ನಿಮ್ಮ ಚೇರ್ ಹಾಗೂ ಕಂಪ್ಯೂಟರನ್ನು ಅಡ್ಜಸ್ಟ್ ಮಾಡಿಕೊಳ್ಳಿ. ನೇರ ಬೆನ್ನಿರಲು ಸರಿಯಾಗುವಂತೆ ಚೇರನ್ನು ನಿಮ್ಮ ಡೆಸ್ಕ್ ಟೇಬಲ್, ಮಾನಿಟರ್ ಹಾಗೂ ಕಂಪ್ಯೂಟರನ್ನು ಅಡ್ಜಸ್ಟ್ ಮಾಡಿಕೊಳ್ಳಿ.

ಮಾನಿಟರ್ ಕಣ್ಣಿನ ನೇರಕ್ಕೆ ಬರುವಂತೆ ಕೆಳಗೆ ಬೇಕಿದ್ದರೆ ಒಂದೆರಡು ಮ್ಯಾಗಜೀನ್‌ಗಳನ್ನಿಡಿ. ಬ್ಲೂಟೂತ್ ಕೀಬೋರ್ಡ್ ಹಾಗೂ ಮೌಸ್ ಬಳಸಿದರೆ ಬೇಕೆಂದಂತೆ ಇಟ್ಟುಕೊಳ್ಳಬಹುದು. ಆಗ ಕಷ್ಟ ಪಡದೆಯೇ ಬೆನ್ನು ಹುರಿ ನೇರವಾಗಿರುತ್ತದೆ. ಈಗೀಗ ಆಫೀಸ್‌ಗಳಲ್ಲಿ ಸ್ಟ್ಯಾಂಡಿಂಗ್ ಡೆಸ್ಕ್‌ಗಳು ಜನಪ್ರಿಯತೆ ಗಳಿಸುತ್ತಿವೆ. ಅವನ್ನು ನಿಮ್ಮ ಕಚೇರಿಯಲ್ಲೂ ಅಳವಡಿಸುವಂತೆ ಮ್ಯಾನೇಜ್‌ಮೆಂಟ್‌ಗೆ ಕೋರಿ ನೋಡಿ.

ಡೆಸ್ಕ್‌ನಲ್ಲೇ ವ್ಯಾಯಾಮ
ಹೆಚ್ಚು ಹೊತ್ತು ಒಂದೇ ಜಾಗದಲ್ಲಿ ಕುಳಿತಿದ್ದರೆ ಗಂಟುಗಳು ಸೆಟೆಯುವ, ಟಿಶ್ಯೂಗಳು ವೀಕ್ ಆಗುವ ಸಂಭವಗಳಿರುತ್ತವೆ. ಅದಕ್ಕಾಗಿ ಪ್ರತಿ ಗಂಟೆಗೊಮ್ಮೆ ಎದ್ದು ಓಡಾಡಿ. ನಿಮ್ಮ ಕಾಲುಗಳನ್ನು ಫ್ರೀಯಾಗಿಡಲು 20 ನಿಮಿಷಕ್ಕೊಮ್ಮೆ ಅವುಗಳ ಪೊಸಿಶನ್ ಬದಲಿಸಿ. ಕುಳಿತಲ್ಲೇ ಭುಜ, ಕೈಗಳನ್ನು 10 ಬಾರಿ ಹಿಂದೆ ಮುಂದೆ ತಿರುಗಿಸಿ. ಕೈಗಳನ್ನು ಬೆಂಡ್ ಮಾಡಿ ಬಿಚ್ಚಿ. ನೇರವಾಗಿ ಕುಳಿತು ಕಾಲುಗಳನ್ನು ಒಂದಾದ ಮೇಲೊಂದರಂತೆ ಸಾಧ್ಯವಾದಷ್ಟು ಎತ್ತಿ ನಿಧಾನವಾಗಿ ಇಳಿಸಿ. ಇವುಗಳ ಹೊರತಾಗಿ ವಾರಕ್ಕೆ ಕನಿಷ್ಠ ಎರಡು ದಿನ ವಾಕ್ ಹೋಗಿ, ರನ್ನಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್ ಯಾವುದಾದರೂ ಅಭ್ಯಾಸ ರೂಢಿಸಿಕೊಳ್ಳಿ.

ಆಹಾರದ ಕಡೆ ಗಮನ
ನ್ಯೂಟ್ರಿಶನ್‌ಯುಕ್ತ ಆಹಾರವಿಲ್ಲದೆ ದೈಹಿಕ ಶಕ್ತಿ ಗಳಿಸುವುದು ಅಸಾಧ್ಯ. ಮೂಳೆಗಳ ಆರೋಗ್ಯ ಕಾಪಾಡಲು ಕ್ಯಾಲ್ಶಿಯಂ, ವಿಟಮಿನ್, ಪ್ರೋಟೀನ್, ಕಾರ್ಬೋಹೈಡ್ರೇಟ್ಸ್ ಅಗತ್ಯ. ದಿನಕ್ಕೆ ಕನಿಷ್ಠ 100 ಎಂಜಿ ಕ್ಯಾಲ್ಶಿಯಂ ದೇಹ ಸೇರುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಗಾಢ ಹಸಿರು ಬಣ್ಣದ ತರಕಾರಿಗಳಲ್ಲಿ ವಿಟಮಿನ್ ಡಿ ಅಂಶವಿರುವುದರಿಂದ ಇವುಗಳನ್ನು ಪ್ರತಿನಿತ್ಯದ ಆಹಾರದಲ್ಲಿ ಸೇರಿಸಿದರೆ ಮೂಳೆಯ ಆರೋಗ್ಯ ಹೆಚ್ಚಿಸಿಕೊಳ್ಳಬಹುದು. ಇನ್ನು, ಮೂಳೆಗಳ ಆರೋಗ್ಯಕ್ಕೆ ಸಲ್ಫರ್ ಕೂಡ ಅವಶ್ಯಕ. ಈ ಸಲ್ಫರ್ ಅಂಶ ಈರುಳ್ಳಿ ಹಾಗೂ ಬೆಳ್ಳುಳ್ಳಿಯಲ್ಲಿ ಹೆಚ್ಚು ಇರುವುದರಿಂದ ಆಹಾರದಲ್ಲಿ ಈರುಳ್ಳಿ ಬೆಳ್ಳುಳ್ಳಿ ಬಳಕೆ ಹೆಚ್ಚಿಸಿ. ಹಾಲಿನಲ್ಲಿ ಮೂಳೆಗಳಿಗೆ ಬೇಕಾದ ಪೊಟಾಶಿಯಂ, ರಂಜಕ ಹಾಗೂ ಕ್ಯಾಲ್ಸಿಯಂ ಇದೆ. ಹಾಗಾಗಿ, ಪ್ರತಿದಿನ 3 ಲೋಟ ಹಾಲು ಕುಡಿಯಿರಿ. ಪನೀರ್, ಮೊಸರು, ಸೋಯಾ ಬೀನ್ಸ್, ಟೊಫು, ಡ್ರೈ ಫ್ರೂಟ್ಸ್ ಸೇವನೆ ಹೆಚ್ಚಿಸಿ.

ಫೋನ್ ಬಳಕೆ ತಗ್ಗಿಸಿ
ಕಚೇರಿಯಲ್ಲಿ ಫೋನ್ ಬಳಕೆ ತಗ್ಗಿಸಿ. ಫೋನ್ ಬಳಕೆಗಾಗಿ ಕತ್ತು ಹಾಗೂ ಬೆನ್ನು ಬಗ್ಗಿಸಿ ಕೂರುವವರು ಹಲವರು. ಇದರಿಂದ ಕತ್ತು, ಬೆನ್ನು ನೋವು ಬರುವುದರ ಜೊತೆಗೆ, ಸುಧೀರ್ಘಕಾಲದಲ್ಲಿ ಮೂಳೆಗಳೂ ಸವೆದು, ಬ್ರೇಕ್ ಆಗುವ ಅಪಾಯಗಳೂ ಇವೆ. ಹೀಗಾಗಿ, ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ ಇಮೇಲ್ ಚೆಕ್ ಮಾಡುವುದನ್ನು ಡೆಸ್ಕ್‌ಟಾಪ್ ಅಥವಾ ಲ್ಯಾ‌ಪ್‌ಟಾಪ್‌ನಲ್ಲೇ ಮಾಡಿ.

Comments are closed.