ಆರೋಗ್ಯ

ಸತ್ತ ಮೇಲೆ ಪುಣ್ಯ ಬೇಕೆ ಈ ರೀತಿ ಮಾಡಿ.

Pinterest LinkedIn Tumblr

ಮನುಷ್ಯ ಎಂದು ಹುಟ್ಟಿದ ಮೇಲೆ ಅವನ ದೇಹದ ಪ್ರತಿಯೊಂದು ಅಂಗಗಳು ಕೂಡ ಆರೋಗ್ಯವಾಗಿ ಇರಬೇಕು ಒಂದೇ ಒಂದು ಅಂಗದ ಆರೋಗ್ಯ ಕೆಟ್ಟರು ಕೂಡ ಅವನ ಆರೋಗ್ಯ ಸರಿ ಮಾಡಿಕೊಳ್ಳುವುದು ತುಂಬಾ ಕಷ್ಟ. ಹಾಗೆಯೇ ಕೆಲವರು ತಮ್ಮ ಜೀವಿತಾವಧಿಯಲ್ಲಿ ಏನಾದರೂ ಸಮಸ್ಯೆ ಆದರೆ ಅವರ ಅಂಗಗಳನ್ನು ಬೇರೆಯವರಿಗೆ ದಾನ ಮಾಡಲು ಇಷ್ಟ ಪಡುತ್ತಾರೆ, ಕೆಲವರು ಇಚ್ಚಾ ಮರಣ ಹೊಂದುತ್ತಾರೆ. ನಾವು ಕೇಳಿರಬಹುದು ರಕ್ತದಾನ ಮಹಾ ದಾನ ಎಂದು ಮೂರು ತಿಂಗಳಿಗೆ ಅಥವಾ ಐದು ತಿಂಗಳಿಗೆ ಒಮ್ಮೆ ರಕ್ತ ದಾನ ಮಾಡುವುದರಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ.

ಹಾಗೆಯೇ ಯಾವುದಾದರೂ ಅಪಘಾತ ಉಂಟಾದಾಗ ಅವರ ಪ್ರಾಣ ಉಳಿಯುವುದಿಲ್ಲ ಎಂದು ಗೊತ್ತಾದಾಗ ಎಷ್ಟೋ ಮಂದಿ ನಮ್ಮ ಕಣ್ಣು. ಕಿಡ್ನಿ .ಹೃದಯವನ್ನು. ದಾನ ಮಾಡಲು ಇಷ್ಟ ಪಡುತ್ತಾರೆ. ಹಾಗೆಯೇ ತಮ್ಮ ಜೀವಿತಾವಧಿಯಲ್ಲೆ ಸ್ವ ಇಚ್ಛೆಯಿಂದ ಅಂಗದಾನ ಮಾಡುವುದಾಗಿ ಹೇಳಿ ನೊಂದಾಯಿಸಿದ್ದ ಅಥವಾ ನೊಂದಾಯಿಸದೆ ಇದ್ದ ವ್ಯಕ್ತಿಯೊಬ್ಬ ಕಾರಣಾಂತರಗಳಿಂದ ಮಸ್ತಿಷ್ಕ ಮೃತ ಸ್ಥಿತಿ ಯಲ್ಲಿರುವಾಗ ಇವರ ಕುಟುಂಬದ ಸದಸ್ಯರು ಇವರ ಅಂಗಾಂಗಗಳನ್ನು ಮತ್ತೊಬ್ಬ ವ್ಯಕ್ತಿಗೆ ಜೋಡಿಸುವ ಸಲುವಾಗಿ ಅನುಮತಿಯನ್ನು ನೀಡಿದ ಬಳಿಕ, ದಾನಿಯ ಅಂಗಗಳನ್ನು ನೀಡುವುದನ್ನು ಅಂಗದಾನ ಎನ್ನುತ್ತಾರೆ.

ಅಪಘಾತದಿಂದಾಗಿ ಅಥವಾ ಅನಿರೀಕ್ಷಿತವಾಗಿ ಸಂಭವಿಸುವ ಮೆದುಳಿನ ಆಘಾತದ ಪರಿಣಾಮವಾಗಿ ವ್ಯಕ್ತಿಯೊಬ್ಬನ ಮೆದುಳಿಗೆ ತೀವ್ರಸ್ವರೂಪದ ಹಾನಿ ಸಂಭವಿಸಿದಲ್ಲಿ ಮತ್ತು ಈ ಹಾನಿಯಿಂದಾಗಿ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗುವ ಸ್ಥಿತಿಯನ್ನು ಮಸ್ತಿಷ್ಕ ಮೃತ ಎಂದು ಪರಿಗಣಿಸಲಾಗುತ್ತದೆ ಆದರೆ ಇದನ್ನು ಹಲವಾರು ತಜ್ಞ ವೈದ್ಯರ ತಂಡವು ಧೃಢಪಡಿಸಬೇಕಾಗುತ್ತದೆ. ಮನುಷ್ಯನ ಶರೀರದ ಪ್ರಮುಖ ಅಂಗಗಳಾದ ಹೃದಯ, ಮೂತ್ರಪಿಂಡಗಳು, ಶ್ವಾಸಕೋಶಗಳು, ಯಕೃತ್, ಮೇದೋಜೀರಕ ಗ್ರಂಥಿ. ಕಣ್ಣು ಇತ್ಯಾದಿಗಳನ್ನು ಮಸ್ತಿಷ್ಕ ಮೃತರಾದಲ್ಲಿ ಮಾತ್ರ ದಾನ ಮಾಡಬಹುದು,

ಆದರೆ ರೋಗಿಯ ಸಮೀಪ ಸಂಬಂಧಿಗಳು ತಾವು ಜೀವಂತರಾಗಿರುವಾಗಲೇ ಯಕೃತ್ತಿನ ಒಂದು ಭಾಗ ಅಥವಾ ಒಂದು ಮೂತ್ರಪಿಂಡವನ್ನು, ಭಾರತದಲ್ಲಿ ಅಸ್ತಿತ್ವದಲ್ಲಿರುವ ಕಾನೂನಿನನ್ವಯ ದಾನ ಮಾಡಬಹುದಾಗಿದೆ, ಆದರೆ ದೃಷ್ಟಿಹೀನರಿಗೆ ಅತ್ಯವಶ್ಯಕ ಎನಿಸುವ ಕಾರ್ನಿಯಾ ಹೃದಯದ ಕವಾಟಗಳು ಚರ್ಮ ಹಾಗೂ ಎಲುಬುಗಳನ್ನು ಒಬ್ಬ ವ್ಯಕ್ತಿ ಸ್ವಾಭಾವಿಕವಾಗಿ ಮೃತಪಟ್ಟ ಬಳಿಕವೇ ದಾನ ಮಾಡಬೇಕಾಗುವುದು. ಆದರೆ ನಾವು ನಮ್ಮ ಅಂಗಗಳನ್ನು ಬೇರೆಯವರಿಗೆ ದಾನ ಮಾಡುವುದರಿಂದ ಒಂದು ಜೀವ ಉಳಿಯುತ್ತದೆ ಹಾಗೆಯೇ ಎಷ್ಟೋ ಮಂದಿ ಅಂಧರಿಗೆ ಕಣ್ಣು ದಾನ ಮಾಡುವುದರಿಂದ ಅವರ ದೃಷ್ಟಿ ಬಂದು ಅವರು ಕೂಡ ಪ್ರಪಂಚವನ್ನು ನೋಡಲು ಅನುಕೂಲ ಮಾಡಿಕೊಟ್ಟಗೆ ಆಗುತ್ತದೆ. ಹಾಗಾಗಿ ದಯವಿಟ್ಟು ನಮ್ಮ ಅಂಗಗಳನ್ನು ಬೇರೆಯವರಿಗೆ ದಾನ ಮಾಡುವುದು ಒಂದು ಒಳ್ಳೆಯ ಕೆಲಸ ಇದರಿಂದ ಎಷ್ಟೋ ಮಂದಿಯ ಪ್ರಾಣವನ್ನು ಉಳಿಸಿದ ಭಾಗ್ಯ ನಮಗೆ ಬರುತ್ತದೆ.

ಪುರಾಣ ಶಾಸ್ತ್ರದಲ್ಲಿ ಹೇಳಲಿರುವ ಹಾಗೇ ಒಂದು ಜೀವಿ ಮರಣ ಹೊಂದಿದ ನಂತರ ನಾಲ್ಕೈದು ಜನಕ್ಕೆ ಉಪಯೋಗ ಆಗಿದ್ದಾನೆ ಅಂದ್ರೆ ಆತನಿಗೆ ಸ್ವರ್ಗ ಪ್ರಾಪ್ತಿ ಆಗುತ್ತದೆ ಎಂಬುದು ತಿಳಿಸುತ್ತಾರೆ. ಒಬ್ಬ ಮನುಷ್ಯ ಬದುಕಿದ್ದಾಗ ಏನು ಒಳ್ಳೆಯ ಕೆಲಸ ಮಾಡದೆ ಇದ್ದವನು ತಾನು ಸತ್ತ ಸಮಯದಲ್ಲಿ ಈ ರೀತಿ ಉತ್ತಮ ಕೆಲಸ ಮಾಡಿದ್ದಾನೆ ಅಂದ್ರೆ ಅದು ನಿಜಕ್ಕೂ ಶ್ಲಾಘನೀಯ, ನಿಮಗೆ ಏನಾದರು ಸಾಧ್ಯ ಆದರೆ ನಿಮ್ಮ ದೇಹ ದಾನದ ಬಗ್ಗೆ ಹತ್ತಿರದ ಆಸ್ಪತ್ರೆಗೆ ತೆರಳಿ ಒಂದು ಸಹಿ ಹಾಕಿರಿ. ನೀವು ಸತ್ತ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ

Comments are closed.