ಕಿವಿ ಹಣ್ಣು ಅಥವಾ ಕಿವಿ, ಸಿಹಿ ಮತ್ತು ಅನನ್ಯ ರುಚಿ ಹೊಂದಿದೆ. ತನ್ನ ವಿಲಕ್ಷಣ ರುಚಿ ಜೊತೆಗೆ, ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮ.
ಕಿವಿ ಹಣ್ಣಿನಲ್ಲಿ ಪೊಟಾಷಿಯಂ ಅಂಶ ಜಾಸ್ತಿ ಇದೆ. ಅಲ್ಲದೇ ಹೃದಯ ಬಡಿತ ಹಾಗೂ ರಕ್ತದೊತ್ತಡ ನಿವಾರಿಸಲು ಇದು ಬಹಳ ಉಪಕಾರಿ.
ಕಿವಿ ಹಣ್ಣಿನಲ್ಲಿ ವಿಟಮಿನ್ ಇ ಅಂಶವಿದ್ದು, ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಕಿವಿ ಹಣ್ಣು ಆಂಟಿ ಆಕ್ಸಿಡೆಂಟ್ ಒಳಗೊಂಡಿದ್ದು, ಚರ್ಮ ಹೊಳೆಯುವಂತೆ ಮಾಡುತ್ತದೆ.
ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಜೀರ್ಣಕಾರಿಯೂ ಹೌದು. ಮಲಬದ್ಧತೆ ಮತ್ತು ಇತರ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯುತ್ತದೆ.
ಕಿವಿ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಜೊತೆಗೆ ಡಿಎನ್‌ಎ ಯನ್ನು ರಕ್ಷಿಸುತ್ತದೆ.
ಆರೋಗ್ಯ

Comments are closed.