ಆರೋಗ್ಯ

ಯಾವ ಕಾಲದಲ್ಲಿ ಯಾವ ಆಹಾರ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ…!

Pinterest LinkedIn Tumblr

ಈ ತಣ್ಣನೆಯ ಕಾಲದ ಸಮಯದಲ್ಲಿ ಈ ಆಹಾರ ಕ್ರಮ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲ ಮತ್ತು ಮಳೆ ಕಾಲ ಆರಂಭ ಆಗುತ್ತಿದ್ದಂತೆಯೇ ಜನರ ಆಹಾರ ಸೇವನೆ ಕ್ರಮ ಬದಲಾಗುತ್ತಾ ಹೋಗುತ್ತದೆ ಜನರು ಡ್ರೈ ಫ್ರೂಟ್ ಸೇವನೆ ಮಾಡಲು ಆರಂಭ ಮಾಡುತ್ತಾರೆ ಅದರಲ್ಲಿ ಬಾದಾಮಿ ಒಣ ದ್ರಾಕ್ಷಿ ಗೋಡಂಬಿ ಮೊದಲಾದುವು ಇರುತ್ತದೆ. ಕೆಲವರಿಗಂತೂ ನಾವು ಏನು ಸೇವನೆ ಮಾಡಬೇಕು ಎನ್ನುವುದೇ ಗೊತ್ತಿರುವುದಿಲ್ಲ ನಾವು ಈ ಲೇಖನದ ಮೂಲಕ ಚಳಿಗಾಲದ ಸಮಯದಲ್ಲಿ ಏನು ಸೇವನೆ ಮಾಡಬೇಕು ಏನು ಹೆಚ್ಚಾಗಿ ತಿಂದರೆ ನಿಮ್ಮ ಆರೋಗ್ಯ ಸುಪರ್ ಆಗಿರುತ್ತೆ ಎಂದು ಹೇಳುತ್ತೇವೆ ಓದಿ.

ಚಳಿಗಾಲದ ಸಮಯದಲ್ಲಿ ಬಾದಾಮಿ ಅಥವಾ ಗೋಡಂಬಿ ಸೇವನೆ ಮಾಡುವುದರಿಂದ ಮಾತ್ರ ಏನೋ ಆಗುವುದಿಲ್ಲ ಅದರ ಜೊತೆಗೆ ಶೇಂಗಾ ಬೀಜವನ್ನು ಸಹ ಸೇರಿಸಬೇಕು ಹೌದು ಟೇಸ್ಟಿ ಆದ ಶೇಂಗಾ ಬೀಜವನ್ನು ನೀವು ಪ್ರತಿ ದಿನ ಸೇವನೆ ಮಾಡುವುದು ಉತ್ತಮ. ಅದರಿಂದ ಉಂಟಾಗುವ ಪ್ರಯೋಜನಗಳು ಯಾವುದು ಅಂತ ಹೇಳುತ್ತೇವೆ ನೋಡಿ.

ಶೇಂಗಾ ಸೇವನೆ ಮಾಡಿದರೆ ಹಲವಾರು ಪ್ರಯೋಜನಗಳು ಇವೆ. ಅದನ್ನು ನೀರಿನಲ್ಲಿ ನೆನೆಸಿ ಸೇವನೆ ಮಾಡಿದರೆ ಅದರ ಲಾಭ ದ್ವಿಗುಣ ಗೊಳ್ಳುತ್ತದೆ. ಹೌದು ನಿಮಗೆ ಹೆಚ್ಚು ಆಹಾರ ಸೇವನೆಯಿಂದ ಸಮಸ್ಯೆ ಉಂಟಾಗುತ್ತದೆ ಗ್ಯಾಸ್ ಅಥವಾ ಅಸಿಡಿಟಿ ಸಮಸ್ಯೆ ಕಂಡು ಬಂದರೆ ಒಂದು ಮುಷ್ಟಿ ಶೇಂಗಾ ಬೀಜವನ್ನು ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಸೇವನೆ ಮಾಡಿ. ವಯಸ್ಸು ಆದಂತೆ ಚರ್ಮದಲ್ಲಿ ಬರುವ ಸಮಸ್ಯೆಗಳು ನಿಮ್ಮ ಲುಕ್ ಹಾಳಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ನೀವು ಪ್ರತಿ ದಿನ ಶೇಂಗವನ್ನು ನೀರಿನಲ್ಲಿ ಹಾಕಿ ಸೇವನೆ ಮಾಡಬೇಕು.

ಚಳಿಗಾಲದಲ್ಲಿ ಹೆಚ್ಚಾಗಿ ಸೊಂಟ ನೋವು ಮತ್ತು ಮೊಣ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ. ಇಂತಹ ಸಂಧರ್ಭದಲ್ಲಿ ಶೇಂಗಾ ಸೇವನೆಯಿಂದ ಆರಾಮ ಸಿಗುತ್ತದೆ. ನೀರಿನಲ್ಲಿ ನೆನಸಿದ ಶೇಂಗಾ ಸೇವನೆ ಮಾಡುವುದರಿಂದ ಕ್ಯಾನ್ಸರ್ ಸೆಲ್ ದೊಡ್ಡದಾಗುವುದು ತಡೆಯಬಹುದು ಜೊತೆಗೆ ಬ್ಲಡ್ ಸರ್ಕ್ಯುಲೇಷನ್ ಚೆನ್ನಾಗಿ ಆಗುವಂತೆ ಮಾಡುತ್ತದೆ.

ಚಳಿಗಾಲದಲ್ಲಿ ಆಕ್ಸಿಜನ್ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಸರಿಯಾದ ಚಳಿಗಾಲದ ಆಹಾರ ಕ್ರಮಕ್ಕೆ ಆಕ್ಸಿಜನ್ ಅನ್ನು ಸೂಕ್ತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ನೀವು ಶೇಂಗಾ ಇದಕ್ಕಾಗಿ ಸೇವಿಸಬೇಕು. ಇದು ಚಳಿಗಾಲದಲ್ಲಿ ದೇಹವನ್ನು ಬೆಚ್ಛಗಿಡುತ್ತದೆ. ಚಳಿಗಾಲದ ಆಹಾರ ಕ್ರಮದಲ್ಲಿ ನೀವು ಜೇನುತುಪ್ಪವನ್ನು ಸೇರಿಸಿ ಇದು ಜೀರ್ಣಕ್ರಿಯೆಯನ್ನ ಹೆಚ್ಚಿಸಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಇದು ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹಾಗಾದರೆ ನೀವು ಸಹಾ ನಾವು ಹೇಳಿದ ಈ ಆಹಾರ ಕ್ರಮವನ್ನು ಅನುಸರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Comments are closed.