ಆರೋಗ್ಯ

ಈ ಕಾಯಿಲೆಯು ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತದಂತೆ ಯಾಕೆ…?

Pinterest LinkedIn Tumblr

ಕ್ಯಾನ್ಸರ್ ಹೆಚ್ಚಾಗಿ ಯಾಕೆ ಮಹಿಳೆಯರಲ್ಲಿ ಕಂಡು ಬರುತ್ತದೆ ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಬನ್ನಿ ತಿಳಿಯೋಣ. 2020ರ ಅಷ್ಟೊತ್ತಿಗೆ ಸುಮಾರು10 ಲಕ್ಷ ಹೆಣ್ಣು ಮಕ್ಕಳು ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಾರಂತೆ. ಇತ್ತೀಚೆಗೆ ಭಾರತದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಸರಿಸುಮಾರು 30-40 ವಷ೯ ವಯಸ್ಸಿನ ಒಳಗಿನ ಮಹಿಳೆಯರು ಈ ಒಂದು ಸ್ತನ ಕ್ಯಾನ್ಸರ್ ಮತ್ತು ಇನ್ನಿತರೆ ಕ್ಯಾನ್ಸರ್ ಗಳಿಗೆ ಹೆಚ್ಚು ಬಲಿಯಾಗುತ್ತಾ ಇದ್ದಾರೆ. ಹಾಗೇಯೇ ಒಂದು ಅಧ್ಯಯನದ ಪ್ರಕಾರ ಮುಂದಿನ ಕೆಲವು ವರ್ಷಗಳಲ್ಲಿ ಕ್ಯಾನ್ಸರ್ ಎಂಬ ಕಾಯಿಲೆಯು ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತದಂತೆ. ಅದರ ಜೊತೆಗೆ ಅವರಿಗೆ ಗಂಡಾಂತರವು ಸಹ ಹೆಚ್ಚಿದೆಯಂತೆ. ಈ ಒಂದು ವರದಿಯನ್ನು ಬ್ರಿಟನ್ನಿನ ಖ್ಯಾತ ಸಂಸ್ಥೆಯೊಂದು ಬಹಿರಂಗ ಪಡಿಸಿದೆ.

ಈಗಾಗಲೇ ಮಹಿಳೆಯರಿಗೆ ಹೆಚ್ಚು ಕಾಡುತ್ತಿರುವ ಸ್ತನ ಕ್ಯಾನ್ಸರ್ ಜೊತೆಗೆ ಗಭ೯ಕೊರಳು, ಬಾಯಿ ಕ್ಯಾನ್ಸರ್ ನಂತಹ ಕಾಯಿಲೆಗಳು ಅತ್ಯಧಿಕವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಒಂದು ಬ್ರಿಟನ್ ನೀಡಿರುವ ವರದಿಯನ್ನು ತನ್ನ ಉಲ್ಲೇಖದಲ್ಲಿ ವಿವರಿಸಿದೆ. ಈಗಾಗಲೇ ಅವರು ಹೇಳಿರುವ ಹಾಗೆ ಭಾರತದಲ್ಲಿ 2020ರ ವೇಳೆಗೆ ಕನಿಷ್ಠವೆಂದರು 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ. ಅದರಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕ್ಯಾನ್ಸರ್ನಿಂದ ಸಾವಿಗಿಡಾಗುವ ಸಾಧ್ಯತೆಯಿದೆ ಎಂದು ಈ ಒಂದು ವರದಿಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಮಹಿಳೆಯರು ಈಗಾಗಲೇ ಹಚ್ಚಿನ ಧೂಮಪಾನ ಮಾಡುತ್ತಾ ಇದ್ದಾರೆ ಅದರಲ್ಲೂ ಅತೀ ಹೆಚ್ಚು ಧೂಮಪಾನ ಮಾಡುವ ಮಹಿಳೆಯರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಬೇಗ ವೃದ್ದಿಯಾಗಲಿದೆ.

ಮತ್ತೊಂದು ಅಂಶವೇನೆಂದರೆ ಬೊಜ್ಜು ಮತ್ತು ಸ್ಥೂಲಕಾಯ ಇದಕ್ಕೆ ಕಾರಣ ಆಗಿದೆ. ಈಗಾಗಲೇ ಬಹಳಷ್ಟು ಮಹಿಳೆಯರು ಬೊಜ್ಜಿಗೆ ಸಂಬಂಧಿಸಿದ ಕಾಯಿಲೆಗಳಿಗೆ ತ್ತುತ್ತಾಗಿರುವುದು ಈ ಒಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಗಂಡಸರಿಗೆ ಹೋಲಿಕೆ ಮಾಡಿದರೆ ಹೆಣ್ಣಿನ ದೇಹ ಹೆಚ್ಚು ಸೂಕ್ಷ್ಮ ರೀತಿ ಹೊಂದಿದೆ. ಯಾವ ಆಹಾರದಲ್ಲಿ ಬದಲಾವಣೆ ಆದರೂ ಮತ್ತು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಆದರು ಸಹ ಇವರಿಗೆ ಹಾಮೊ೯ನ್ಸ ಬದಲಾವಣೆ ಆಗೋದು ನಿಶ್ಚಿತ. ಈ ಕಾರಣದಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೆಣ್ಣು ಮಕ್ಕಳು ಕಡಿಮೆ ತರಕಾರಿ ಸೇವಿಸುವುದು ಮತ್ತು ವ್ಯಾಯಾಮದ ಕೊರತೆ ಯಾಗುವುದು, ಅತ್ಯಧಿಕವಾಗಿ ಧೂಮಪಾನ ಮತ್ತು ಮಧ್ಯಪಾನ ಮಾಡುವುದು ಇದೆಲ್ಲವೂ ಸಹ ಕ್ಯಾನ್ಸರ್ ಗೆ ನಾವೇ ಆಹ್ವಾನ ಮಾಡಿದ ರೀತಿಯಲ್ಲಿ ಆಗುತ್ತದೆ.

ವರದಿಯಲ್ಲಿ ಹೇಳಿರುವ ಪ್ರಕಾರ ಇನ್ನೂ 50 ವಷ೯ಗಳು ಅಂದರೆ 2070 ರ ವೇಳೆಯಲ್ಲಿ ಭಾರತದಲ್ಲಿನ 50% ರಷ್ಟು ಮಹಿಳೆಯರು ಕ್ಯಾನ್ಸರ್ ರೋಗದಿಂದ ಬಳಲುತ್ತಾರೆ ಎಂಬ ಒಂದು ಗಂಭೀರ ಮಾಹಿತಿಯನ್ನು ವೈದ್ಯರು ಹೊರ ಹಾಕಿದ್ದಾರೆ.ಇತ್ತೀಚಿನ ಒಂದು ವರದಿಯ ಪ್ರಕಾರ ವಯಸ್ಸಾದ ಮಹಿಳೆಯರಿಗಿಂತ ವಯಸ್ಸಿನಲ್ಲಿರುವ ಹೆಣ್ಣು ಮಕ್ಕಳು ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದಾರೆ. ನಾವೇ ಮಾಡಿಕೊಳ್ಳುವ ನಮ್ಮ ಆರೋಗ್ಯ ಶೈಲಿ ಮತ್ತು ನಾವೇ ಮಾಡಿಕೊಳ್ಳುವ ನಮ್ಮ ಜೀವನದ ಸುಧಾರಣೆಯಿಂದ ಈ ಒಂದು ಕ್ಯಾನ್ಸರ್ ಸಮಸ್ಯೆಗೆ ಗುರಿಯಾಗುತ್ತಿದ್ದೆವೆ. ಇನ್ನಾದರೂ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳೋಣ ಮತ್ತು ಜಂಕ್ ಪುಡ್ ಗಳಿಗೆ ಮತ್ತು ಧೂಮಪಾನಕ್ಕೆ ಹಾಗು ಮದ್ಯಪಾನಕ್ಕೆ ವಿದಾಯ ಹೇಳಿ ಮನೆ ಅಡುಗೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನಿಡೋಣ. ಈ ಉಪಯುಕ್ತವಾದ ಮಾಹಿತಿಯನ್ನು ಮರೆಯದೆ ಎಲ್ಲರಿಗೂ ತಿಳಿಸಿ.

Comments are closed.