ಆರೋಗ್ಯ

ಯಾವುದೇ ಸೈಡ್ ಎಫೆಕ್ಟ್ ಇರದ ಮೂಗಿನ ಮೇಲಿನ ಬ್ಲಾಕ್ ಹೆಡ್ಸ್ ರಿಮೂವ್ ಮಾಡಲು ಇದು ಸಹಕಾರಿ

Pinterest LinkedIn Tumblr

ನಿಂಬೆ ಹಣ್ಣು: ಮೊದಲು ಬಿಸಿನೀರಿನಲ್ಲಿ ಮುಖ ತೊಳೆದು ನಂತರ ನಿಂಬೆ ಹಣ್ಣನ್ನು ಮುಖಕ್ಕೆ ಹಾಕಿ ನಿಧಾನವಾಗಿ ಸ್ಕ್ರಬ್ ಮಾಡಿ. ಅತಿಯಾಗಿ ಮಾಡಲು ಹೋಗಬೇಡಿ ಮುಖ ಉರಿ ಬರುವುದು. ನಿಧಾನವಾಗಿ ಒಂದು 5 ನಿಮಿಷ ಮಾಡಿ ಮತ್ತೆ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಅಡುಗೆ ಸೋಡ: ಅಡುಗೆ ಸೋಡಾ ಕೂಡ ಒಂದೊಳ್ಳೆ ಉಪಾಯ ಆದರೇ ನೆನಪಿನಲ್ಲಿಡಿ ಅಡುಗೆ ಸೋಡಾ ಕೆಲವರಿಗೆ ಉರಿ ತರಿಸುತ್ತದೆ.. ಆದರೇ ಇದು ಅತಿ ವೇಗವಾಗಿ ಬ್ಲಾಕ್ ಹೆಡ್ಸ್ ಅನ್ನು ರಿಮೂವ್ ಮಾಡುತ್ತದೆ. ¼ ಸ್ಪೂನ್ ಅಡುಗೆ ಸೋಡದಲ್ಲಿ ಪೇಸ್ಟ್ ರೀತಿಯಾಗಿ ಮಾಡಿಕೊಂಡು ನಿಮ್ಮ ಮೂಗಿನ ಮೇಲೆ ಹಾಕಿ ಮೆಲ್ಲನೆ ಸ್ಕ್ರಬ್ ಮಾಡಿ. ಜೋರಾಗಿ ಮಾಡಬೇಡಿ.. ಈ ರೀತಿಯಾಗಿ 2 ನಿಮಿಷಗಳಷ್ಟು ಮಾಡಿ ತಣ್ಣಗಿನ ನೀರಿನಲ್ಲಿ ಮುಖ ತೊಳೆಯಿರಿ..

ರೋಸ್ ವಾಟರ್: ಇದು ಸೈಡ್ ಎಫೆಕ್ಟ್ ಅಥವಾ ಮುಖ ಉರಿ ಬರದೆ ಇರುವ ಹಾಗೆ ಬ್ಲಾಕ್ ಹೆಡ್ಸ್ ರಿಮೂವ್ ಮಾಡಬಹುದಾದ ವಿಧಾನ. ರೋಸ್ ವಾಟರ್ ಅನ್ನು ಮುಖಕ್ಕೆ ಹಾಕಿಕೊಂಡು 5 ನಿಮಿಷ ಬಿಟ್ಟು ಬಿಸಿ ನೀರಿನ ಹಾವಿಯನ್ನು ಮುಖಕ್ಕೆಕೊಡಿ, ನಂತರ ಹತ್ತಿಯಿಂದ ರಬ್ ಮಾಡುತ್ತಾ ಬನ್ನಿ ಬ್ಲಾಕ್ ಹೆಡ್ಸ್ ರಿಮೂವ್ ಆಗುವುದು..

ಅರಿಶಿಣ: ಅರಿಶಿಣವನ್ನು ಹಾಲಿನ ಕೆನೆಯೊಂದಿಗೆ ಪೇಸ್ಟ್ ರೀತಿಯಾಗಿ ಮಾಡಿಕೊಂಡು ಮೂಗಿನ ಮೇಲೆ ಹಾಕಿ 5 ನಿಮಿಷಗಳ ಕಾಲ ರಬ್ ಮಾಡಿ. ನಂತರ ಹತ್ತಿಯಿಂದ ಮೂಗಿನ ಮೇಲೆ ಪ್ರೆಸ್ಸ್ ಮಾಡುತ್ತಾ ಬ್ಲಾಕ್ ಹೆಡ್ಸ್ ರಿಮೂವ್ ಮಾಡಿ.

Comments are closed.