ಕರಾವಳಿ

ಅಮೋನಿಯಾ ಇಫೆಕ್ಟ್; ಅಸ್ವಸ್ಥ 79 ಮಂದಿಯಲ್ಲಿ ಇಬ್ಬರಿಗೆ ICUನಲ್ಲಿ ಚಿಕಿತ್ಸೆ; ಅಧಿಕಾರಿಗಳ ಸಮಿತಿಯಿಂದ ತನಿಖೆ

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕು ಕಟ್ಬೇಲ್ತೂರು ಗ್ರಾಮ ದೇವಲ್ಕುಂದ ಮೀನು ಶೀಥಲಿಕರಣ ಸ್ಥಾವರದಲ್ಲಿ ಅಮೋನಿಯ ರಾಸಾಯನಿಕ ಸೋರಿಕೆಯಿಂದ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು, 79 ಕಾರ್ಮಿಕರಲ್ಲಿ ಇಬ್ಬರ ಹೊರತುಪಡಿಸಿ ಮಂಗಳವಾರ ಉಳಿದವರ ಬಿಡುಗಡೆ ಮಾಡಲಾಗಿದೆ.

ಮೀನು ಶೀಥಲೀಕರಣ ಸ್ಥಾವರದಲ್ಲಿ ಸೋಮವಾರ ಬೆಳಗಿನ ಜಾವ ಅಮೋನಿಯಾ ಸೋರಿಕೆಯಿಂದ ಘಟಕದ ಕಾರ್ಮಿರಲ್ಲಿ 79 ಜನ ಅಸ್ವಸ್ಥಗೊಂಡಿದ್ದರು. ಇಬ್ಬರ ವಿಶೇಷ ನಿಗಾಘಟಕದಲ್ಲಿ ಸೇರಿಸಲಾಗಿದ್ದು, ಉಳಿದವರ ಜನರಲ್ ವಾರ್ಡ್‌ನಲ್ಲಿ ಆಸ್ಪತ್ರೆ ವೈದ್ಯರು ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಿದ್ದರು. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿದ್ದು, ತೀವ್ರ ನಿಗಾ ವಿಭಾಗದಲ್ಲಿದ್ದವರ ಜನರಲ್ ವಾರ್ಡಿ ಶಿಫ್ಟ್ ಮಾಡಲಾಗಿದ್ದು, ಉಳಿದವರ ಒಂದು ವಾರ ವಹಿಸಬೇಕಾದ ಮುನ್ನೆಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.

ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದ ಕಾರ್ಮಿಕರಿಗೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಆದರ್ಶ ಹೆಬ್ಬಾರ್, ಒಂದು ವಾರ ಆರೋಗ್ಯದ ಬಗ್ಗೆ ಕಾಳಿಜಿ ವಹಿಸಬೇಕು, ವಾಂತಿ, ಉಸಿರಾಟದ ತೊಂದರೆ, ಕೆಮ್ಮು, ಜ್ವರ ಕಾಣಿಸಿಕೊಂಡರೆ ವೈದ್ಯಕೀಯ ಪರೀಕ್ಷೆಗೆ ಒಳಗಾಬೇಕು ಎನ್ನುವ ಮುನ್ನೆಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲಾ ಕಾರ್ಮಿಕರ ಮತ್ತೊಮ್ಮೆ ಕೂಲಂಕುಶ ಪರೀಕ್ಷೆ ನಡೆಸಿ, ಡಿಸ್‌ಚಾರ್ಜ್ ಮಾಡಲಾಗಿದೆ. ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಆಸ್ಪತ್ರೆಗೆ ಭೇಟಿ ನೀಟಿ ಸಂತ್ರಸ್ಥರ ಯೋಗಕ್ಷೇಮ ವಿಚಾರಿಸಿದರು.

ಸದ್ಯಕ್ಕೆ ಶೀಥಲಿಕರಣ ಘಟಕ ಬಂದ್..
ಮೀನು ಶೀಥಲಿಕರಣ ಘಟಕದಲ್ಲಿ ಅಮೋನಿಯಾ ಸೋರುವುಕೆಯಿಂದ ಕಾರ್ಮಿಕರು ಅಸ್ತವ್ಯವಸ್ಥ ಗೊಂಡರೂ ಶೀಥಲೀಕರಣ ಘಟಕದಲ್ಲಿ ೩೦೦ಕ್ಕೂ ಮಿಕ್ಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕುಂದಾಪುರ ಎಸಿ ಸ್ಥಳಕ್ಕೆ ಆಗಮಿಸುವವರೆಗೂ ಘಕಟದಲ್ಲಿ ಕಾರ್ಮಿಕರ ದುಡಿಸಿಕೊಳ್ಳಲಾಗುತ್ತಿದ್ದು, ಎಸಿ ಕೆಲಸ ನಿಲ್ಲಿಸಲು ಸೂಚಿಸಿದ ನಂತರ ಕಾರ್ಮಿಕರು ಕೆಲಸ ನಿಲ್ಲಿಸಿದ್ದರು. ಶೀಥಲಿಕರಣ ಘಟಕದಲ್ಲಿ ನಡೆದ ಅವಗಢ ಕುರಿತು ನೇಮಿಸಿದ ಸಮಿತಿ ವರದಿ ಸಲ್ಲಿಸುವ ತನಕ ಘಟಕ ಮುಚ್ಚಲಾಗಿದೆ. ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸೋಮವಾರ ರಾತ್ರಿ ಉಳಿಯಲು ಬೇರೆಡೆಗೆ ಅವಕಾಶ ಮಾಡಿಕೊಳಡಲಾಗಿದೆ.

ಸೋಮವಾರ ನಡೆದಿದ್ದೇನು?
ಸ್ಥಳೀಯ ಜನರು ಹಾಗೂ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ದೇವಲ್ಕುಂದ ಜನವಸತಿ ಪ್ರದೇಶದ ಬಳಿ ಮೀನು ಸಂಸ್ಕರಣಾ ಘಟಕ ೨೦೧೭ರಲ್ಲಿ ಆರಂಭಿಸಲಾಗಿತ್ತು. ಆ.12 ಸೋಮವಾರ ಬೆಳಗ್ಗೆ ಶೀಥಲೀಕರಣಕ್ಕೆ ಬಳಸುವ ಅಮೋನಿಯಾ ಲೀಕಾಗಿದ್ದು, ಕಾರ್ಖಾನೆ ಕಾರ್ಮಿಕರ ಮೇಲೆ ಹಾಗೂ ಪರಿಸರದ ಜನರ ಮೇಲೂ ಪರಿಣಾಮ ಬೀರಿತ್ತು. ಎರಡು ಅಗ್ನಿಶಾಮಕ ದಳ ಸತತ 10 ಗಂಟೆ ಪರಿಶ್ರಮದ ಮೂಲಕ ಅಮೋನಿಯಾ ಪ್ರಭಾವ ಕಡಿಮೆ ಮಾಡಲಾಗಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರಪಾಟಿ, ಎಸ್ಪಿ ನಿಶಾ ಜೇಮ್ಸ್, ಡಿ‌ವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ನಾಗಭೂಷಣ ಉಡುಪ, ಡಾ.ಪ್ರೇಮಾನಂದ, ಜಿಪಂ ಗ್ರಾಪಂ ಸದಸ್ಯರು ಭೇಟಿ ಮಾಡಿದ್ದರು. ಅಮೋನಿಯಾ ಸೋರುವಿಕೆ ಪರಿಣಾಮ ಪರಿಸರದ ವಾಸಗಳ ಮೇಲೂ ಸ್ವಲ್ಪ ಮಟ್ಟಿನ ಪ್ರಭಾವ ಬೀರಿದರೆ, ಗಾರ್ಡ್‌ನ್‌ನಲ್ಲಿರುವ ಹೂವು, ಗಿಡಗಳು ಬಾಡಿಹೋಗಿತ್ತು.

ದೇವಲ್ಕುಂದ ಮೀನು ದಾಸ್ತಾನು ಘಟಕದಲ್ಲಿ ನಡೆದ ಅಮೋನಿಯಾ ರಾಸಾಯನಿಕ ಅನಿಲ ಸೋರಿಕೆ ಪ್ರಕರಣದ ಕೂಲಂಕುಷ ತನಿಖೆ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಒಟ್ಟು 6 ಇಲಾಖೆಗಳ ನೇತೃತ್ವ ಸಮಿತಿ ರಚಿಸಿದ್ದಾರೆ. ಈಗಾಗಲೇ ಘಟಕದ ಕಾರ್ಮಿಕರನ್ನು ಸಮಗ್ರ ವಿಚಾರಣೆ ನಡೆಸಿದ್ದೇವೆ. ಮೇಲ್ನೋಟಕ್ಕೆ ಘಟಕದಲ್ಲಿನ ಯಂತ್ರಗಳ ನಿರ್ವಹಣೆ ಕೊರತೆ ಕಂಡುಬಂದಿದೆ. ಇಲ್ಲಿಗೆ ಯಂತ್ರೋಪಕರಣಗಳ ಪೂರೈಸಿದ ಕಂಪನಿಯ ಸಂಬಂದಪಟ್ಟವರನ್ನು ವಿಚಾರಣೆ ಮಾಡುತ್ತೇವೆ.ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಎಂ.ಸಿ.ಎಫ್. ವರದಿಯನ್ನು ನಿರೀಕ್ಷಿಸುತ್ತಿದ್ದು ಎಲ್ಲಾ ಇಲಾಖೆಗಳ ವರದಿ ಕ್ರೋಡೀಕರಿಸಿ ಸಮಗ್ರ ವರದಿ ಸಿದ್ಧಪಡಿಸಿ ಆ. 16ರೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ.
– ಡಾ.ಎಸ್.ಎಸ್.ಮಧೂಕೇಶ್ವರ, ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ತನಿಖಾ ಸಮಿತಿ ಅಧ್ಯಕ್ಷ.

(ವರದಿ- ಯೋಗೀಶ್ ಕುಂಭಾಸಿ)

ಸಂಬಂಧಿತ ವರದಿಗಳು-

ಕಟ್‌ಬೆಲ್ತೂರಿನ ಮೀನು ಸಂಸ್ಕರಣಾ ಘಟಕದಲ್ಲಿ `ಅಮೋನಿಯಾ’ ಸೋರಿಕೆಯಾಗಿ 74 ಕಾರ್ಮಿಕರು ಅಸ್ವಸ್ಥ; ಡಿಸಿ, ಎಸ್‌ಪಿ ಭೇಟಿ

ಮೀನು ದಾಸ್ತಾನು ಘಟಕದಲ್ಲಿ ‘ಅನಿಲ ಸೋರಿಕೆ’: ಸಮಗ್ರ ತನಿಖೆಗೆ ಎಸ್ಪಿ, ಡಿಸಿ ಸೂಚನೆ- ಸಮಿತಿ ರಚನೆ (Video)

ಮೀನುಸಂಸ್ಕರಣ ಕಟ್ಟಡಕ್ಕೆ ಪರವಾನಿಗೆ ನೀಡಿದ ಕಟ್‌ಬೆಲ್ತೂರ್ ಗ್ರಾ.ಪಂ.|ಜಯಕರ್ನಾಟಕ ಸಂಘಟನೆಯಿಂದ ಮಾ.15ಕ್ಕೆ ಪ್ರತಿಭಟನೆ

ಕುಂದಾಪುರ: ಮೀನು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ಆಕ್ರೋಷ; ಕಟ್‌ಬೆಲ್ತೂರ್ ಪಂಚಾಯತ್ ಎದುರು ಪ್ರತಿಭಟನೆ

 

Comments are closed.