ಆರೋಗ್ಯ

ಮೊಡವೆಯ ಸಮಸ್ಯೆ ನಿವಾರಣೆಗೆ ಇದನ್ನೊಮ್ಮೆ ಬಳಸಿ ನೋಡಿ..?

Pinterest LinkedIn Tumblr

ಮುಖದಲ್ಲಿ ಬರುವ ಮತ್ತು ಈಗಾಗಲೇ ಬಂದಿರುವ ಗುಳ್ಳೆಗಾಗಿ ನಾವು ಮಾಡುವ ಸರ್ಕಸ್ ಒಂದಾ ಎರಡಾ ನೀವೇ ಹೇಳಿ ಸ್ನೇಹಿತರೆ ಹಲವು ರೀತಿಯ ಪ್ರಯೋಗ ಮಾಡಿದರು ಕೆಲವು ದಿನಗಳ ಮಟ್ಟಿಗೆ ಮಾತ್ರ ಮೊಡವೆಗಳು ಮಾಯವಾಗಿ ಮತ್ತೆ ಅವುಗಳ ದಾಳಿ ಮುಂದುವರೆಸುತ್ತದೆ. ಮೊಡವೆಗಳು ಮತ್ತು ಅದರ ಕಲೆ ಗಳಿಂದಾಗಿ ಬೇಸತ್ತು ಬಂದ ಗುಳ್ಳೆಗಳು ತನ್ನಷ್ಟಕ್ಕೆ ತಾನೇ ಹೋಗಲೆಂದು ಸುಮ್ಮನಾಗಿ ಬಿಡುತ್ತೇವೆ ಆದರೆ ಇಲ್ಲಿರುವ ಸೂಪರ್ ಉಪಾಯ ನಿಮ್ಮ ಮೊಡವೆಗಳನ್ನು ದೂರ ಮಾಡುವುದಲ್ಲದೆ ನಿಮ್ಮ ಬೇಸರವನ್ನು ದೂರ ಮಾಡುತ್ತದೆ.

ಮೊಡವೆಗಳಿಗೆ ಮೂಲ ಕಾರಣಗಳು ಹೊರಗಿನ ಧೂಳು ಹೊಗೆ ಕಲ್ಮಶ ಹೆಚ್ಚು ಎಣ್ಣೆಯುಕ್ತ ಆಹಾರವನ್ನು ತಿನ್ನುವುದು ಹಾರ್ಮೋನ್ ಗಳ ಬದಲಾವಣೆ ಜಂಕ್ ಫುಡ್ ಸೇವಿಸುವುದು ಮತ್ತು ಜೀನ್ಸ್ ಮತ್ತು ಹಲವು ಕಾರಣದಿಂದಾಗಿ ಮೊಡವೆಗಳು ಬರುತ್ತವೆ ಈ ಮೊಡವೆಯ ಸಮಸ್ಯೆಗೆ ಅನೇಕ ರೀತಿಯ ಕ್ರೀಂ ಗಳನ್ನು ಬಳಸಿದ್ದಿರಾ ಆದರೆ ನಿಮ್ಮ ಮನೆಯಲ್ಲೇ ಸುಲಭವಾಗಿ ಸಿಗುವಂತಹ ಟೂತ್ ಪೇಸ್ಟ್ ಬಳಸಿ ನೋಡಿದ್ದೀರಾ ಖಂಡಿತ ಇಲ್ಲ ಹಾಗಾದರೆ ಹಲ್ಲುಜ್ಜುವ ಪೇಸ್ಟ್ ಇಂದ ಹೇಗೆ ಮೊಡವೆಗಳನ್ನು ದೂರ ಮಾಡಬಹುದು ಎಂದು ಈಗ ತಿಳಿಯೋಣ.

ಮೊದಲಿಗೆ ಒಂದು ಚಮಚ ಅಡುಗೆ ಸೋಡಾ ಗೆ ಸ್ವಲ್ಪ ಟೂತ್ ಪೇಸ್ಟ್ ಮಿಕ್ಸ್ ಮಾಡಿ ಮುಖವನ್ನು ತೊಳೆದು ಮೊಡವೆ ಇರುವ ಜಾಗಕ್ಕೆ ರಾತ್ರಿ ಮಲಗುವ ಮುಂಚೆ ಹಚ್ಚಿ ಅರ್ಧ ಗಂಟೆಯ ನಂತರ ಇಲ್ಲವೇ ಇಡೀ ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ತೊಳೆದು ಕೊಳ್ಳಿ ಮುಖ ತೊಳೆದ ನಂತರ ಮಾಯಿಶ್ಚರೈಸರ್ ಅಥವಾ ಲೋಳೆ ರಸ ಹಚ್ಚಿ ಇದರಿಂದ ಪೇಸ್ಟ್ ಇಂದ ಉಂಟಾದ ಕಿರಿಕಿರಿ ತಪ್ಪುತ್ತದೆ. ವಾರದಲ್ಲಿ 2 ರಿಂದ 3 ಸಲ ಅಥವಾ ಮೊಡವೆ ಹೊಸದಾಗಿ ಬಂದಾಗ ಈ ವಿಧಾನವನ್ನು ಉಪಯೋಗಿಸಬೇಕು ಅಡುಗೆ ಸೋಡಾ ದಲ್ಲಿ ಉರಿಯೂತ ಶಮನಕಾರಿ ಗುಣವಿದ್ದು ಇದು ಊತವನ್ನೂ ಮತ್ತು ಕೆಂಪಾಗಿ ಇರುವ ಜಾಗವನ್ನು ಕಡಿಮೆ ಮಾಡುತ್ತದೆ.

ಇನ್ನು ಟೂತ್ ಪೇಸ್ಟ್ ನಲ್ಲಿ ಟ್ರಿಕ್ಲೋಷೆನ್ ಅಂಶವಿದ್ದು ಮೊಡವೆ ಒಣಗಲು ಸಹಾಯ ಮಾಡುತ್ತದೆ ಮತ್ತೊಂದು ವಿಧಾನ ಒಂದು ಚಿಟಕಿ ಉಪ್ಪಿಗೆ ಸ್ವಲ್ಪ ಟೂತ್ ಪೇಸ್ಟ್ ಗೆ ಚೆನ್ನಾಗಿ ಮಿಕ್ಸ್ ಮಾಡಿ ಮೊಡವೆಗಳಿಗೆ ಹಚ್ಚಿ ಸ್ವಲ್ಪ ಸಮಯ ಬಿಡಬೇಕು ಅರ್ಧ ಗಂಟೆ ಒಣಗಲು ಬಿಟ್ಟು ತಣ್ಣೀರು ನಿಂದಾ ಮುಖ ತೊಳೆದು ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು ಉಪ್ಪು ಚರ್ಮದಲ್ಲಿ ಪಿಹೆಚ್ ಮಾತ್ರ ಕಾಪಾಡಲು ನೇರವಾಗಿ ಡ್ರೈ ಮತ್ತು ಡೆಡ್ ಸ್ಕಿನ್ ಅನ್ನು ದೂರ ಮಾಡುತ್ತದೆ ಈ ಮಿಶ್ರಣವನ್ನು ಗುಳ್ಳೆಯ ಸುತ್ತಲೂ ಸ್ಕ್ರಬ್ ಮಾಡುವುದರಿಂದ ಅದು ಆಳದಿಂದ ಚರ್ಮವನ್ನು ಸ್ವಚ್ಛಗೊಳಿಸಿ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ ಈ ವಿಧಾನವನ್ನು ನೀವು ಪ್ರತಿ ನಿತ್ಯ ಮೊಡವೆ ಕಡಿಮೆ ಆಗುವವರೆಗೂ ಮಾಡಬಹುದು. ಇಲ್ಲಿ ನೀವು ನಿಮ್ಮ ಆಸೆಯ ಯಾವುದೇ ಟೂಥ್ ಪೇಸ್ಟ್ ಅನ್ನು ಬಳಸ ಬಹುದು.

Comments are closed.