ಆರೋಗ್ಯ

ದೇಹದಲ್ಲಿನ ರಕ್ತ ಹೀನತೆ ಸಮಸ್ಯೆಗೆ ಈ ಅಂಶಗಳೇ ಮೊದಲು ಕಾರಣ.!

Pinterest LinkedIn Tumblr

ಮನುಷ್ಯನ ದೇಹಕ್ಕೆ ಹಿಮೋಗ್ಲೋಬಿನ್ ಅಂಶ ತುಂಬಾ ಮುಖ್ಯ ಹಿಮೋಗ್ಲೋಬಿನ್ ಅಂಶ ಕಡಿಮೆ ಆದರೆ ಮನುಷ್ಯನ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳು ಕಾಡುತ್ತವೆ ದೇಹದಲ್ಲಿ ಆಮ್ಲಜನಕ ಕಡಿಮೆಯಾಗಿ ನಮ್ಮ ದೇಹದಲ್ಲಿ ಕೆಂಪು ಜೀವಕೋಶಗಳು ಕಡಿಮೆಯಾದಾಗಲೇ ಇಂತಹ ಸಮಸ್ಯೆಗಳು ಕಂಡು ಬರುತ್ತವೆ. ಹಿಮೋಗ್ಲೋಬಿನ್ ಕಡಿಮೆ ಆಗಲು ಕಾರಣ ನಾವು ಸೇವಿಸುವ ಆಹಾರದಲ್ಲಿ ಐರನ್, ಫೋಲಿಕ್ ಆ್ಯಸಿಡ್, ವಿಟಮಿನ್ ಸಿ, ವಿಟಮಿನ್ ಬಿ12, ಅಂಶಗಳು ಕಡಿಮೆ ಆಗುವುದು. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಆಗುವುದರಿಂದ ಅನಿಮಿಯಾ ಸಮಸ್ಯೆ ಬರುತ್ತದೆ. ಶಸ್ತ್ರಚಿಕಿತ್ಸೆ, ಒಳಹೊಡೆತ, ಸತತ ರಕ್ತದಾನ, ರಕ್ತ ಉತ್ಪತ್ತಿಯಾಗುವ ಸ್ಥಳವಾದ ಅಸ್ಥಿಮಜ್ಜೆ ರೋಗಗ್ರಸ್ಥವಾಗಿರುವುದು, ಕ್ಯಾನ್ಸರ್, ಮೂತ್ರಕೋಶಗಳ ತೊಂದರೆ, ಸಂಧಿವಾತ, ಮಧುಮೇಹ, ಜಠರದ ಹುಣ್ಣು, ಹೊಟ್ಟೆ ಮತ್ತು ಜೀರ್ಣಾಂಗಗಳ ಕಾಯಿಲೆ ಇವೆಲ್ಲವೂ ಕೂಡ ರಕ್ತಹೀನತೆಗೆ ಕಾರಣವಾಗುತ್ತವೆ.

ಹಾಗಾಗಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆದಾಗ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂದು ನೋಡೋಣ ಬನ್ನಿ. ಬಿಟ್ ರೋಟ್ ಇದನ್ನು ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೇಗೆಂದರೆ ಬೀಟ್‌ರೂಟ್‌ನಲ್ಲಿ ಹೆಚ್ಚಾಗಿ ಐರನ್, ಫೋಲಿಕ್ ಆಮ್ಲ, ಫೈಬರ್, ಪೊಟ್ಯಾಷಿಯಂ ಇರುವ ಕಾರಣ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ. ಅಕ್ಕಿ, ಬೀನ್ಸ್, ಗೋಧಿ, ಬಾಳೆಹಣ್ಣು, ಸೊಪ್ಪಿನಲ್ಲಿ ಬಿ-ಕಾಂಫ್ಲೆಕ್ಸ್, ಫೋಲಿಕ್ ಆ್ಯಸಿಡ್ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ದಾಳಿಂಬೆ, ಒಣ ದ್ರಾಕ್ಷಿ, ಕಲ್ಲಂಗಡಿ, ತೃಣಧಾನ್ಯಗಳು, ಕುಂಬಳಕಾಯಿ ಬೀಜ, ಸೋಯಾಬೀನ್ಸ್, ಪಾಲಾಕ್, ಎಳ್ಳು ಇವುಗಳನ್ನು ನಿತ್ಯ ಆಹಾರದಲ್ಲಿ ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ.

ಸೇಬು ಇದು ದೇಹದಲ್ಲಿನ ರಕ್ತ ಹೀನತೆಯನ್ನು ಕಡಿಮೆ ಮಾಡಲು ತುಂಬ ಸಹಕಾರಿಯಾಗಿದೆ ಹಾಗಾಗಿ ಪ್ರತಿದಿನ ಒಂದು ಸೇಬನ್ನು ಸೇವಿಸುತ್ತಾ ಬಂದರೆ ಸಾಕು ದೇಹದಲ್ಲಿ ಹಿಮೋಗ್ಲೋಬಿನ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಪೇರಳೆ ಹಣ್ಣು ಇದನ್ನು ವಾರಕ್ಕೆ ಮೂರರಿಂದ ನಾಲ್ಕು ತಿಂದರೆ ಸಾಕು ನಮ್ಮ ದೇಹದಲ್ಲಿನ ಹಿಮೋಗ್ಲೋಬಿನ್ ಸಮಸ್ಯೆಯನ್ನು ದೂರ ಮಾಡುತ್ತದೆ. ಪಪ್ಪಾಯಿ, ಕಿತ್ತಳೆ, ಲಿಂಬೆ, ಸ್ಟ್ರಾಬೆರಿ, ದೊಣ್ಣೆಮೆಣಸು, ಬ್ರೋಕೋಲಿ, ಚಕ್ಕೋತ, ಟೊಮೇಟೊ ಮತ್ತು ಪಾಲಕ್ ಸೊಪ್ಪುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಅಂಶ ಇದ್ದು ಇವುಗಳನ್ನು ಆಹಾರದಲ್ಲಿ ಸೇವಿಸುತ್ತಾ ಬಂದರೆ ಹಿಮೋಗ್ಲೋಬಿನ್ ಸಮಸ್ಯೆಯನ್ನು ಸರಿ ಪಡಿಸಿಕೊಳ್ಳಬಹುದು.

ಇವುಗಳ ಜೊತೆಗೆ ನಿತ್ಯ ಆರರಿಂದ ಏಳು ಲೀಟರ್ ನೀರು ಕುಡಿಯಬೇಕು ಹಾಗೂ ನಿತ್ಯ ವ್ಯಾಯಾಮ. ಯೋಗ. ಎಲ್ಲವನ್ನು ಕೂಡ ಮಾಡಬೇಕು. ಹೀಗೆ ಮಾಡಿದರೆ ದೇಹದಲ್ಲಿನ ಹಿಮೋಗ್ಲೋಬಿನ್ ಸಮಸ್ಯೆಯನ್ನು ದೂರ ಮಾಡಿಕೊಂಡು ಆರೋಗ್ಯವನ್ನು ಉತ್ತಮವಾಗಿ ಇಟ್ಟು ಕೊಳ್ಳಬಹುದು. ಇವುಗಳ ಜೊತೆಗೆ ಆದಷ್ಟು ಹೊರಗಡೆ ಜಂಕ್ ಫುಡ್. ಕರಿದ ತಿಂಡಿಗಳ ಸೇವನೆ. ಸ್ನ್ಯಾಕ್ಸ್ ಇವುಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು ಏಕೆಂದರೆ ಇವುಗಳ ಸೇವನೆ ಕೂಡ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಕಡಿಮೆ ಮಾಡಿ ಆರೋಗ್ಯವನ್ನು ಕೆಡಿಸುತ್ತದೆ ಹಾಗಾಗಿ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ.

Comments are closed.