ರಾಷ್ಟ್ರೀಯ

ತಾಯಿಯ ಪಕ್ಕದಲ್ಲೇ ಮಲಗಿದ್ದ 3 ವರ್ಷದ ಹೆಣ್ಣುಮಗವನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ತಲೆ ಕಡಿದ ದುಷ್ಕರ್ಮಿಗಳು

Pinterest LinkedIn Tumblr

ಜೆಮ್‌ ಶೆಡ್‌ಪುರ: ಕಾಮುಕರ ಅಟ್ಟಹಾಸಕ್ಕೆ ತಾಯಿಯ ಮಡಿಲೂ ಕೂಡ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದ್ದು, ತಾಯಿಯ ಪಕ್ಕದಲ್ಲೇ ಮಲಗಿದ್ದ ಮೂರು ವರ್ಷದ ಹೆಣ್ಣುಮಗವನ್ನು ಹೊತ್ತೊಯ್ದ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿ ಮಗುವಿನ ತಲೆ ಕತ್ತರಿಸಿ ಬಿಸಾಡಿ ಹೋಗಿದ್ದಾರೆ.

ಜಾರ್ಖಂಡ್ ನ ಜೆಮ್ ಷೆಡ್ ಪುರದಲ್ಲಿ ಘೋರ ಕುಕೃತ್ಯ ನಡೆದಿದ್ದು, ಜೆಮ್‌ ಶೆಡ್‌ಪುರದ ಟಾಟಾನಗರ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ ಬಳಿ ತಾಯಿಯೊಂದಿಗೆ ಮಲಗಿದ್ದ 3ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಮೂಲಗಳ ಪ್ರಕಾರ ಬಾಲಕಿಯನ್ನು ಇಬ್ಬರು ಕಾಮುಕರು ಅಪಹರಿಸಿದ್ದರು. ಬಳಿಕ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ತಲೆಯನ್ನು ಕತ್ತರಿಸಿ ಕೊಲೆ ಮಾಡಿದ್ದಾರೆ. ಬಳಿಕ ತಲೆಯನ್ನು ಮತ್ತು ದೇಹವನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಬಿಸಾಡಿ ಹೋಗಿದ್ದಾರೆ.

ಮಗಳ ನಾಪತ್ತೆ ಕುರಿತಂತೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿದಾಗ ರೈಲ್ವೇ ನಿಲ್ದಾಣದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಪ್ರದೇಶದಲ್ಲಿ ಒಂದು ಪ್ಲಾಸ್ಟಿಕ್ ಕವರ್ ದೊರೆತಿದೆ. ಆ ಕವರ್ ನಲ್ಲಿ ರುಂಡ-ಮುಂಡ ಬೇರ್ಪಟ್ಟ ಪುಟ್ಟ ಬಾಲಕಿಯ ದೇಹ ಪತ್ತೆಯಾಗಿದೆ. ಆ ದೇಹ ಬಾಲಕಿಯದ್ದೇ ಎಂದು ಆಕೆಯ ತಾಯಿ ಗುರುತಿಸದ್ದಾರೆ ಎನ್ನಲಾಗಿದೆ.

ತಾಯಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನಿಂದಲೇ ಕುಕೃತ್ಯ: ಇನ್ನು ಪೊಲೀಸ್ ಮೂಲಗಳು ತಿಳಿಸಿರುವಂತೆ ಮಗುವಿನ ತಾಯಿ ಪಶ್ಚಿಮಬಂಗಾಳ ಮೂಲದವಳಾಗಿದ್ದು. ಅಲ್ಲಿನ ಪುರುಲಿಯಾದಲ್ಲಿ ತನ್ನ ಗಂಡನನ್ನು ತೊರೆದು ಬೇರೊಬ್ಬ ಗಂಡಸಿನೊಂದಿಗೆ ಬಂದಿದ್ದಳು, ಆತನಿಂದಲೇ ಈ ಕೃತ್ಯ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ರೈಲ್ವೇನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಇಬ್ಬರು ದುಷ್ಕರ್ಮಿಗಳು ಬಾಲಕಿಯನ್ನು ಹೊತ್ತೊಯ್ದಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಬಾಲಕಿ ಮೇಲಿನ ಅತ್ಯಾಚಾರದ ಕುರಿತು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಅತ್ಯಾಚಾರದ ಬಳಿಕ ವಿಚಾರ ಎಲ್ಲರಿಗೂ ತಿಳಿಯುತ್ತದೆ ಎಂದು ಹೆದರಿ ಬಾಲಕಿಯನ್ನು ತಲೆ ಕಡಿದು ಕೊಲೆ ಮಾಡಿದ್ದಾಗಿ ಹೇಳಿದ್ದಾರೆ. ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

Comments are closed.