ಅಂತರಾಷ್ಟ್ರೀಯ

ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಲಾಡೆನ್ ಸಾವು !

Pinterest LinkedIn Tumblr

ವಾಷಿಂಗ್ಟನ್: ಅಲ್ ಖೈದಾ ಉಗ್ರ ಸಂಘಟನೆಯ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಲಾಡೆನ್ ಮೃತಪಟ್ಟಿರುವ ಸುದ್ದಿ ಬಂದಿದೆ ಎನ್ ಬಿಸಿ ನ್ಯೂಸ್ ಮೊದಲಿಗೆ ವರದಿ ಮಾಡಿದ್ದು, ಅಧಿಕಾರಿಗಳು ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಮೂವರು ಅಧಿಕಾರಿಗಳನ್ನು ಉಲ್ಲೇಖಿಸಿ ಎನ್‌ಬಿಸಿ ನ್ಯೂಸ್ ಆಫ್ ಅಮೇರಿಕಾ, ಹಮ್ಜಾ ಬಿನ್ ಲಾಡೆನ್‌ನ ಹತ್ಯೆಯಾಗಿದೆ ಎಂಬ ಮಾಹಿತಿ ಯುಎಸ್ ಗುಪ್ತಚರ ಸಂಸ್ಥೆಗಳಿಗೆ ಬಂದಿದೆ ಎಂದು ವರದಿ ಮಾಡಿದೆ. ಹಮ್ಜಾ ಬಿನ್ ಲಾಡೆನ್‌ನ ಸಾವು ಎಲ್ಲಿ ಮತ್ತು ಹೇಗೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ? ಆತನ ಸಾವಿನಲ್ಲಿ ಅಮೆರಿಕದ ತಂತ್ರಗಾರಿಕೆ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಅದೇ ಸಮಯದಲ್ಲಿ, ಯುಎಸ್ ಹಮ್ಜಾ ಬಿನ್ ಲಾಡೆನ್‌ನ ಸಾವನ್ನು ಅಧಿಕೃತವಾಗಿ ಖಚಿತಪಡಿಸುತ್ತದೆಯೋ? ಇಲ್ಲವೋ? ಎಂಬುದು ಸ್ಪಷ್ಟವಾಗಿಲ್ಲ. ಹಮ್ಜಾ ಸಾವಿನ ಬಗ್ಗೆ ಯುಎಸ್ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೇಳಿದಾಗ, “ನಾನು ಇದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಹೇಳಿದರು.

ಹಮ್ಜಾ ಬಿನ್ ಲಾಡೆನ್ ಕೊನೆಯ ಬಾರಿಗೆ ಸಾರ್ವಜನಿಕವಾಗಿ 2018 ರಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ನಂಬಲಾಗಿದೆ. ಹಮ್ಜಾನನ್ನು ಅಲ್-ಖೈದಾ ನಾಯಕ ಅಯ್ಮಾನ್ ಅಲ್-ಜವಾಹರಿ ಎಂಬ ಭಯೋತ್ಪಾದಕ ಸಂಘಟನೆಯ ಉತ್ತರಾಧಿಕಾರಿ ಎಂದು ಸಹ ಹೇಳಲಾಗುತ್ತದೆ. ಒಸಾಮಾ ಬಿನ್ ಲಾಡೆನ್ ಕೊಲೆಯಾದ ನಂತರ ಹಮ್ಜಾ ಲಾಡೆನ್ ಅಲ್-ಖೈದಾದ ಮುಖಂಡನಾಗಿ ಹೊರಹೊಮ್ಮುವ ಮೊದಲೇ ಹಲವು ಪ್ರತ್ಯೇಕ ಬಣಗಳಾಗಿ ಮಾರ್ಪಟ್ಟಿದ್ದವು ಎಂದು ಹೇಳಲಾಗಿದೆ.

Comments are closed.