ಆರೋಗ್ಯ

ಸತತವಾಗಿ ಕಾಡುವ ಬೆನ್ನು ನೋವಿಗೆ ಈ ಸರಳ ಮನೆ ಮದ್ದು

Pinterest LinkedIn Tumblr

ಬೆನ್ನು ನೋವಿಗೆ ಮನೆಯಲ್ಲಿಯೇ ನಾವು ಮಾಡಿಕೊಳ್ಳಬಹುದಾದ ಸರಳವಾದ ಚಿಕಿತ್ಸೆಗಳು ಕೂಡ ಇವುಗಳನ್ನು ಮಾಡಿಕೊಂಡರು ಕೂಡ ಬೆನ್ನು ನೋವು ಬೇಗ ಗುಣ ಇತ್ತೀಚೆಗೆ ಯಾರನ್ನು ನೋಡಿದರು ಕೂಡ ಬೆನ್ನು ನೋವು ಅಂತ ಹೆಚ್ಚಾಗಿ ಹೇಳುತ್ತಾರೆ ಅದರಲ್ಲೂ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವಂತಹ ವ್ಯಕ್ತಿಗಳು ಬೆಳಿಗ್ಗೆ ಹೋದರೆ ಸಂಜೆಯವರೆಗೂ ಕೂಡ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಾರೆ ನಿತ್ಯ ಹೀಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ ಮನೆಗೆ ಬಂದರೆ ಸಾಕು ಕುಳಿತುಕೊಳ್ಳಲು ಕೂಡ ಆಗದೆ ಹೊದ್ದಾಡುತ್ತಾರೆ ಏಕೆಂದರೆ ಬೆನ್ನು ನೋವು. ಒಮ್ಮೆ ಈ ಬೆನ್ನು ನೋವು ಬಂದರೆ ಸಾಕು ಆ ನೋವನ್ನು ತಾಳಲಾರದೆ ಒದ್ದಾಡುತ್ತಾರೆ

ಬೆನ್ನು ನೋವನ್ನು ಗುಣ ಪಡಿಸಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳನ್ನು ಹಚ್ಚಿಕೊಳ್ಳುತ್ತಾರೆ ಆದರೆ ಏನೇ ಹಚ್ಚಿದರು ಕೂಡ ಬೆನ್ನು ನೋವು ಮಾತ್ರ ಹೋಗುವುದಿಲ್ಲ ಇನ್ನು ಬೆನ್ನು ನೋವು ಅತಿಯಾದರೆ ಸಾಕು ಆಸ್ಪತ್ರೆಗೆ ಹೋಗುತ್ತಾರೆ ಅಲ್ಲಿ ಸ್ಕ್ಯಾನ್. ಎಕ್ಸರೆ ಅದು ಇದು ಎಂದು ಮಾಡುತ್ತಾರೆ.

ಆದರೆ ಬೆನ್ನು ನೋವು ಬರಲು ಕೇವಲ ಕುಳಿತುಕೊಳ್ಳುವುದು ಒಂದೇ ಕಾರಣವಲ್ಲ ಹಲವಾರು ಕಾರಣುಗಳು ಇವೆ ಅವುಗಳು ಏನು ಎಂದು ನೋಡೋಣ ಬನ್ನಿ. ಬೆನ್ನು ಹುರಿಯ ಕೆಳಭಾಗದಲ್ಲಿ ಸೊಂಟಾ ಪಾವನಿಯ ಭಾಗಗಳು ಅನೇಕರಲ್ಲಿ ನೋವನ್ನುಂಟು ಮಾಡುತ್ತದೆ ಇದಕ್ಕೆ ಅತಿಯಾಗಿ ಕೆಲಸ ಅಥವಾ ವ್ಯಾಯಾಮವಿಲ್ಲದ ಮಾಂಸಖಂಡಗಳಿಂದ ಬೆನ್ನು ನೋವು ಬರುತ್ತದೆ. ಹೊಟ್ಟೆಯ ಬೊಜ್ಜು ಹೆಚ್ಚಿದಾಗ ಕೂಡ ಬೆನ್ನು ನೋವು ಬರುತ್ತದೆ. ಅತಿ ಹೆಚ್ಚು ಸಮಯ ಮಲಗಿದ್ದರು ಕೂಡ ಬೆನ್ನು ನೋವು ಬರುವ ಸಾದ್ಯತೆ ಇರುತ್ತದೆ. ಹಾಗೆಯೇ ಈ ಬೆನ್ನು ನೋವು ತಡೆಯಲು ಹಾಗದೆ ನಾವು ವೈದ್ಯರ ಬಳಿ ಹೋದಾಗ ವೈದ್ಯರು ನಮ್ಮನ್ನು ಕೇಳುವ ಪ್ರಶ್ನೆಗಳು ಎಂದರೆ

ಬೆನ್ನು ನೋವು ಹೇಗೆ ಪ್ರಾರಂಭವಾಯಿತು. ಕೆಮ್ಮುವಾಗ ಸೀನುವಾಗ ಕುಳಿತಾಗ ಕೆಮ್ಮು ಹೆಚ್ಚಾಗುತ್ತದೆಯೇ. ನೋವು ಬೆನ್ನಿನ ಭಾಗದಲ್ಲಿ ಅಲ್ಲದೆ ಕಾಲುಗಳಲ್ಲು ಕೂಡ ಇದೆಯೇ ಹಾಸಿಗೆಯಲ್ಲಿ ಮಲಗಿದ್ದಾಗ ಅಕ್ಕಪಕ್ಕ ತಿರುಗಲು ಕಷ್ಟವಾಗುತ್ತದೆಯೇ ಮೂತ್ರವನ್ನು ವಿಸರ್ಜನೆ ಮಾಡುವಾಗ ಕಷ್ಟ ಉಂಟಾಗುತ್ತದೆಯೇ ಹೀಗೆ ಹಲವಾರು ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಇವುಗಳಿಗೆ ನಾವು ಸರಿಯಾಗಿ ಉತ್ತರ ನೀಡಬೇಕು ಆಗ ಅವರು ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ನೋಡಿ ಚಿಕಿತ್ಸೆ ನೀಡುತ್ತಾರೆ. ಇದಲ್ಲದೇ ಬೆನ್ನು ನೋವಿಗೆ ಮನೆಯಲ್ಲಿಯೇ ನಾವು ಮಾಡಿಕೊಳ್ಳಬಹುದಾದ ಸರಳವಾದ ಚಿಕಿತ್ಸೆಗಳು ಕೂಡ ಇವುಗಳನ್ನು ಮಾಡಿಕೊಂಡರು ಕೂಡ ಬೆನ್ನು ನೋವು ಬೇಗ ಗುಣ ಆಗುತ್ತದೆ. ಒಂದು ಈರುಳ್ಳಿ ತೆಗೆದುಕೊಂಡು ನೋವು ಇರುವ ಜಾಗಕ್ಕೆ ಚೆನ್ನಾಗಿ ತಿಕ್ಕಿರಿ ನಾಲ್ಕೈದು ನಿಮಿಷದಲ್ಲಿ ಒಂದಿಷ್ಟು ನೋವು ಹತೋಟಿಗೆ ಬರಲಿದೆ.

ಬೆನ್ನು ನೋವು ಬಂದಾಗ ವಿಶ್ರಾಂತಿ ಪಡೆಯಿರಿ. ಬೆನ್ನು ನೋವು ಬಂದಾಗ ಬೆನ್ನಿನ ಮೇಲೆ ಬಿಸಿ ನೀರಿನ ಶಾಖವನ್ನು ತೆಗೆದುಕೊಂಡರೆ ಬೆನ್ನು ನೋವು ಕಡಿಮೆ ಆಗುತ್ತದೆ. ಬೆನ್ನು ನೋವು ಇದ್ದಾಗ ಹೆಚ್ಚು ಕುಳಿತುಕೊಂಡು ಕೆಲಸ ಮಾಡುವುದು ಒಳ್ಳೆಯದಲ್ಲ ಹಾಗೆ ಕುಳಿತು ಕೆಲಸ ಮಾಡಲೇಬೇಕು ಎಂದರೆ ಬೆನ್ನಿಗೆ ಏನಾದರೂ ಒತ್ತು ಕೊಟ್ಟುಕೊಂಡು ಅಂದರೆ ದಿಂಬು ಇಲ್ಲ ಇನ್ನೇನಾದರೂ ಗ್ರಿಪ್ ಇಟ್ಟುಕೊಂಡು ಬೆನ್ನು ನೋವು ಬರದ ಹಾಗೆ ಕುಳಿತುಕೊಳ್ಳುವುದು ಒಳ್ಳೆಯದು. ಬೆನ್ನು ನೋವು ಬಂದಾಗ ರಾತ್ರಿಯ ಸಮಯದಲ್ಲಿ ವಿಕ್ಸ್ ಅನ್ನು ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ ಬೆಳಿಗ್ಗೆ ಬಿಸಿ ನೀರನ್ನು ಬೆನ್ನಿಗೆ ಹಾಕಿದರೆ ಬೆನ್ನು ನೋವು ಕಡಿಮೆ ಆಗುತ್ತದೆ. ಹಾಗಾಗಿ ಬೆನ್ನು ನೋವು ಬಂದಾಗ ಆದಷ್ಟು ಮಾತ್ರೆಗಳ ಸೇವನೆ ಮಾಡುವುದನ್ನು ಬಿಟ್ಟು ವಿಶ್ರಾಂತಿ ಪಡೆಯುವುದು ಒಳ್ಳೆಯದು.

Comments are closed.