ಆರೋಗ್ಯ

ಚರ್ಮದ ಆರೋಗ್ಯ ಉತ್ತಮವಾಗಿರಲು ಈ ನೀರನ್ನು ನಿತ್ಯ ಸೇವಿಸಿ ನೋಡಿ..!

Pinterest LinkedIn Tumblr

ಫೈಟೋ ನ್ಯೂಟ್ರಿಯಂಟ್ ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಎಲೆಗಳ ರೂಪದಲ್ಲಿ ಇರುವ ತರಕಾರಿಯೇ ಎಲೆಕೋಸು ಒಂದರ ಮೇಲೊಂದರಂತೆ ಪದರಗಳನ್ನು ಹೊಂದಿರುವ ಎಲೆಗಳ ಗುಂಪಾಗಿ ದುಂಡನೆಯ ಆಕಾರವನ್ನು ಹೊಂದಿದ್ದು ಹಸಿರು.ನೇರಳೆ. ಕೆಂಪು ಬಣ್ಣದಿಂದ ಈ ಎಲೆಗಳು ದೊರೆಯುತ್ತವೆ. ಈ ಎಲೆಕೋಸಿನಿಂದ ಹಲವಾರು ವಿಧದ ಅಡುಗೆಗಳನ್ನು ತಯಾರಿಸುತ್ತಾರೆ ಸಾಂಬಾರ್. ಪಲ್ಯ ಹಾಗೂ ಇನ್ನಿತರ ಅಡುಗೆಗಳನ್ನು ಈ ಎಲೆಕೋಸಿನಿಂದ ತಯಾರಿಸುತ್ತಾರೆ. ಈ ಎಲೆಕೋಸಿನಲ್ಲಿ ಪೊಟ್ಯಾಷಿಯಂ. ಮ್ಯಾಗ್ನಿಶಿಯಂ. ಕಬ್ಬಿಣ ಮ್ಯಾಂಗನೀಸ್ ಗಳಿಂದ ಸಮೃದ್ಧವಾಗಿದೆ. ಆದರೆ ಯಾರು ಈ ಎಲೆ ಕೂಸು ತಿನ್ನಬಾರದು ಅಂತ ತಿಳಿಯಲು ಸಂಪೂರ್ಣ ಓದಿ

ಈ ಎಲೆಕೋಸಿನಿಂದ ಜ್ಯುಸ್ ಅನ್ನು ಕೂಡ ಮಾಡಿಕೊಂಡು ಕುಡಿಯಬಹುದು ಇದು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಜ್ಯುಸ್ ಮಾಡುವುದು ಹೇಗೆಂದರೆ ಮೊದಲು ಎಲೆಕೋಸನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಕತ್ತರಿಸಿಕೊಳ್ಳಬೇಕು ಅದಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಸಣ್ಣದಾಗಿ ಜಜ್ಜಿದ ಶುಂಠಿ ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಂಡು ಪ್ರತೀ ದಿನ ಬೆಳಿಗ್ಗೆ ಕುಡಿಯುತ್ತಾ ಬಂದರೆ ಆರೋಗ್ಯ ಉತ್ತಮವಾಗಿ ಇರುತ್ತದೆ.

ಈ ಎಲೆಕೋಸನ್ನು ಸೇವಿಸುವುದರಿಂದ ಏನೆಲ್ಲ ಪ್ರಯೋಜನವಿದೆ ಎಂದು ತಿಳಿಯೋಣ ಬನ್ನಿ. ಎಲೆಕೋಸಿನಲ್ಲಿ ಬೀಟಾ-ಕ್ಯಾರೋಟಿನ್ ಎಂಬ ಅಂಶ ಇದ್ದು ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹಾಗೂ ಕಣ್ಣಿನ ಪೊರೆಯ ಸಮಸ್ಯೆ ದೂರ ಆಗುತ್ತದೆ. ನಿತ್ಯ ಒಂದು ಗ್ಲಾಸ್ ಎಲೆಕೋಸಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ಎಲೆಕೋಸಿನ ನೀರನ್ನು ನಿತ್ಯ ಸೇವಿಸುವುದರಿಂದ ಚರ್ಮದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಎಲೆಕೋಸು ಫೈಟೊನ್ಯೂಟ್ರಿಯಂಟ್ ಗಳಲ್ಲಿ ಸಮೃದ್ಧವಾಗಿದೆ.ಹಾಗಾಗಿ ನಿತ್ಯ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿಯುತ್ತ ಬಂದರೆ ನಮ್ಮ ದೇಹದಲ್ಲಿ ಇರುವ ರಕ್ತ ಶುದ್ಧಿಯಾಗುತ್ತದೆ. ಕೆಂಪು ಎಲೆಕೋಸನ್ನು ಸೇವನೆ ಮಾಡುವುದರಿಂದ ಕಿಡ್ನಿ ಸಮಸ್ಯೆ ದೂರ ಆಗುತ್ತಾದೆ. ವಾರದಲ್ಲಿ ಎರಡು ಬಾರಿ ಎಲೆಕೋಸಿನ ಸೂಪ್ ಮಾಡಿಕೊಂಡು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಎಲೆಕೋಸಿ ನಲ್ಲಿರುವ ಟಾರ್‌ಟ್ರೋನಿಕ್‌ ಆಸಿಡ್‌ ಎಂಬ ಅಂಶವು ಆಹಾರದ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್‌ ಅಂಶವನ್ನು ಕೊಬ್ಬಾಗಿ ಪರಿವರ್ತನೆ ಗೊಳ್ಳುವುದನ್ನು ತಡೆಯುತ್ತದೆ. ಈ ಅಂಶವು ತೂಕ ಇಳಿಸಿಕೊಳ್ಳುವವರಿಗೆ ಉತ್ತಮ

ಮಲಬದ್ಧತೆ. ಹೊಟ್ಟೆಯುಬ್ಬರದ ಸಮಸ್ಯೆಯನ್ನು ಈ ಎಲೆಕೋಸಿನ ಸಮಸ್ಯೆಯಿಂದ ದೂರ ಮಾಡಿಕೊಳ್ಳಬಹುದು. ಎಲೆಕೋಸಿನಲ್ಲಿ ಇರುವ ಕಬ್ಬಿಣಾಂಶದಿಂದ ದೇಹಕ್ಕೆ ಶಕ್ತಿ ಬರುತ್ತದೆ ಮೂಳೆಗಳು ಗಟ್ಟಿ ಆಗುತ್ತವೆ. ನರಗಳ ಸಮಸ್ಯೆ ದೂರ ಆಗುತ್ತದೆ. ಎಲೆಕೋಸಿನ್ನು ಸೇವಿಸುವು ದರಿಂದ ದೇಹಕ್ಕೆ ರಕ್ತ ಸಂಚಾರ ಸುಗಮವಾಗಿ ಹರಿಯುತ್ತದೆ. ಎಲೆಕೋಸಿನಲ್ಲಿ ವಿಟಮಿನ್ ಸಿ ಅಂಶವು ಹೇರಳವಾಗಿದ್ದು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲೆಕೋಸಿನಲ್ಲಿ ವಿಟಮಿನ್ ಕೆ ಅಂಶ ಇದ್ದು ಇದು ನಮ್ಮ ಮರೆವಿನ ಸಮಸ್ಯೆಯನ್ನು ದೂರ ಮಾಡುತ್ತದೆ.

ಆದರೆ ಒಂದು ಮುಖ್ಯವಾದ ವಿಚಾರ ತಿಳಿಯಲೇ ಬೇಕು ಅದು ಏನೆಂದರೆ. ಎಲೆಕೋಸಿನಲ್ಲಿ ಆಂಟಿ ಥೈರಾಕ್ಸಿನ್‌ ಎಂಬ ಅಂಶವು ಅಧಿಕ ವಾಗಿರುವುದರಿಂದ ಈ ತರಕಾರಿಯನ್ನು ಹೈಪೋಥೈರಾಯ್ಡಿಸಂ ಕಾಯಿಲೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಸೇವಿಸ ಬಾರದು. ಹಾಗೆಯೇ ಎಲೆಕೋಸನ್ನು ಬಳಸುವ ಮೊದಲು ಅದನ್ನು ಚೆನ್ನಾಗಿ ತೊಳೆದುಕೊಂಡು ಚಿಕ್ಕದಾಗಿ ಕತ್ತರಿಸಿ ವಿನೇಗರ್ ದ್ರಾವಣ ದಲ್ಲಿ ಕೆಲವು ನಿಮಿಷ ಅದ್ದಿ ಇಡಬೇಕು ಮನೆಯಲ್ಲಿ ವಿನೇಗರ್ ಇಲ್ಲವಾದರೆ ಬಿಸಿ ನೀರಿಗೆ ಉಪ್ಪು ಮತ್ತು ಅರಿಶಿನ ಹಾಕಿ ಅದರಲ್ಲಿ ಕೆಲವು ನಿಮಿಷ ಅದ್ದಿಡಬೇಕು. ಹೀಗೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿ ಇರುತ್ತದೆ.

Comments are closed.