ಆರೋಗ್ಯ

ಎಷ್ಟೇ ಸುಂದರವಾಗಿ ಇದ್ದರೂ ನಿಮ್ಮ ಕುತ್ತಿಗೆಯ ಭಾಗ ಕಪ್ಪಾಗಿದೆಯೇ..ಇಲ್ಲಿದೆ ಪರಿಹಾರ?

Pinterest LinkedIn Tumblr

ನೀವು ಸುಂದರವಾಗಿ ಇದ್ದರೂ ನಿಮ್ಮ ಕುತ್ತಿಗೆಯ ಭಾಗ ಕಪ್ಪಾಗಿ ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತಿದೆಯೇ ಕುತ್ತಿಗೆಯ ಭಾಗ ಕಪ್ಪಾಗುವುದು ಹಲವರಲ್ಲಿ ಕಾಣುತ್ತಿರುವ ಸಮಸ್ಯೆ ಇದರಿಂದಾಗಿ ತಾವು ಇಚ್ಛೆ ಪಟ್ಟ ಒಡವೆಗಳನ್ನು ಬಟ್ಟೆಗಳನ್ನು ಧರಿಸಲು ಆಗುವುದಿಲ್ಲ. ಯಾವ ಮನೆ ಮದ್ದು ಬಳಸಬೇಕು ಬಳಸುವ ಮುನ್ನ ಮಾಡಬೇಕಾದ ಈ ಒಂದು ಕೆಲಸ ಯಾವುದು ಎಂದು ತಿಳಿಯೋಣ.

ನಾವು ಹೇಳುವ ಯಾವುದೇ ಮದ್ದನ್ನು ಉಪಯೋಗಿಸುವ ಈ ವಿಧಾನವನ್ನು ತಪ್ಪದೆ ಮಾಡಿ ಈ ವಿಧಾನ ನಿಮ್ಮ ಕುತ್ತಿಗೆಯ ಭಾಗದ ಕೊಳೆಯನ್ನು ತೆಗೆದು ಸತ್ತ ಮತ್ತು ಒಣ ಚರ್ಮವನ್ನು ತೆಗೆಯಲು ಸಹಾಯ ಮಾಡುತ್ತದೆ ಅದು ಎರಡರಿಂದ ಮೂರು ಚಮಚ ಹಸಿ ಹಾಲನ್ನು ಒಂದು ಹತ್ತಿಯ ಸಹಾಯದಿಂದ ಕುತ್ತಿಗೆಯ ಎಲ್ಲ ಭಾಗಕ್ಕೂ ಹಚ್ಚಿ 5 ನಿಮಿಷ ಒರೆಸಿ ನಂತರ ಒಂದು ಚಿಕ್ಕ ಟವಲ್ ಅನ್ನು ಸ್ವಲ್ಪ ಬಿಸಿ ನೀರಿನಲ್ಲಿ ಅದ್ದಿ ಹಿಂಡಬೇಕು ನಂತರ ಕುತ್ತಿಗೆಯ ಭಾಗಕ್ಕೆ ಹಾಕಿ 5 ನಿಮಿಷಗಳ ಕಾಲ ಹಾಗೇ ಬಿಡಿ ಈ ವಿಧಾನವನ್ನು ಮಾಡಿದ ನಂತರ ನಾವು ಹೇಳುವ ಮದ್ದನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಮೊದಲನೆಯದು ಶ್ರೀ ಗಂಧದ ಪುಡಿ ಇದರಲ್ಲಿ ವಿಟಮಿನ್ ಮತ್ತು ನ್ಯೂಟ್ರಿಷನ್ ಇದ್ದು ಕಪ್ಪಾದ ಭಾಗಕ್ಕೆ ಹೊಳಪು ತರಲು ಸಹಾಯಕ ಒಂದು ಚಮಚ ಶ್ರೀ ಗಂಧದ ಪುಡಿಗೆ 2 ಚಮಚ ರೋಸ್ ವಾಟರ್ ಮಿಕ್ಸ್ ಮಾಡಿ ಈ ಮಿಶ್ರಣವನ್ನು ಕುತ್ತಿಗೆಯ ಎಲ್ಲ ಭಾಗಕ್ಕೂ ಹಚ್ಚಿ 15 ನಿಮಿಷ ಬಿಟ್ಟು ತಣ್ಣಗಿನ ನೀರಿನಲ್ಲಿ ತೊಳೆದುಕೊಳ್ಳಿ.

ಎರಡನೇ ವಿಧಾನ ಕುತ್ತಿಗೆಯನ್ನು ಸ್ವಚ್ಛಗೊಳಿಸಿದ ನಂತರ ತೆಂಗಿನ ಕಾಯಿಯನ್ನು ಸಣ್ಣಗೆ ರುಬ್ಬಿ ಅದರ ಹಾಲನ್ನು ಸೋಸಿಕೊಂಡು ಒಂದು ಚಿಕ್ಕ ಹತ್ತಿ ಉಂದೆಯ ಸಹಾಯದಿಂದ ಕುತ್ತಿಗೆಗೆ ಪೂರ್ತಿಯಾಗಿ ಹಚ್ಚಿ 10 ನಿಮಿಷ ಒಣಗಲು ಬಿಟ್ಟು ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ.

ಮೂರನೆಯ ವಿಧಾನ ಎರಡು ಚಮಚ ಅಕ್ಕಿ ಹಿಟ್ಟಿಗೆ 3 ರಿಂದ 4 ಚಮಚ ನಿಂಬೆ ರಸ ಮತ್ತು ಒಂದು ಚಮಚ ಜೇನು ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈ ಮಿಶ್ರಣವನ್ನು ಕುತ್ತಿಗೆಯ ಸುತ್ತಲೂ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ ತದ ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ. ನಾಲ್ಕನೆಯ ವಿಧಾನ ಒಂದು ಟೊಮೆಟೊವನ್ನು ಎರಡು ಭಾಗ ಮಾಡಿಕೊಂಡು ಕತ್ತರಿಸಿದ ಒಂದು ಟೊಮೆಟೊ ಭಾಗವನ್ನು ಸಕ್ಕರೆಯಲ್ಲಿ ಅದ್ದಿ ಕುತ್ತಿಗೆಯ ಸುತ್ತಲೂ 10 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಕೊನೆಯದಾಗಿ ಬಾಳೆ ಹಣ್ಣಿನ ಪ್ಯಾಕ್. ಒಂದು ಬಾಳೆ ಹಣ್ಣನ್ನು ಹಿಚುಕಿ 2 ಚಮಚ ಆಲಿವ್ ಆಯಿಲ್ ಹಾಕಿ ಮಿಶ್ರಣವನ್ನು ತಯಾರಿಸಿ ಇದನ್ನು ಕುತ್ತಿಗೆಯ ಮೇಲೆ ಹಚ್ಚಿ 15 ನಿಮಿಷ ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆಯಿರಿ ಉತ್ತಮ ಫಲಿತಾಂಶಕ್ಕಾಗಿ ಈ ಯಾವುದೇ ವಿಧಾನ ಅನುಸರಿಸಿ.

Comments are closed.