ಒಂದು ಲೋಟ ನೀರಿಗೆ ತುಸು ಅರಿಶಿನ ಪುಡಿಯನ್ನು ಹಾಕಿ ಕುಡಿಯುವುದರಿಂದ ಬಾಯಿಯ ವಾಸನೆ ದೂರಾಗುತ್ತದೆ.
ಕಿತ್ತಳೆ ಸಿಪ್ಪೆಯಿಂದ ಹಲ್ಲುಜ್ಜಿದರೆ ಹಲ್ಲಿನ ಹಳದಿಯನ್ನು ಇಲ್ಲವಾಗಿಸಬಹುದು.
ಒಂದು ಕಪ್ ಹಾಲಿಗೆ ಎರಡು ಚಮಚ ಜೇನುತುಪ್ಪು ಬೆರೆಸಿ, ದಿನಕ್ಕೆ ಎರಡು ಬಾರಿಯಂತೆ ನಿಯಮಿತವಾಗಿ ಸೇವಿಸುವುದರಿಂದ ಮೂಳೆ ಸದೃಢಗೊಳ್ಳುತ್ತದೆ.
ಕಹಿ ಬೇವಿನ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳನ್ನು ನಿವಾರಿಸಬಹುದು.
ಮಲಗುವಾಗ ಒಂದು ಕಪ್ ಹಾಲಿಗೆ ಎರಡು ಚಮಚ ಜೇನುತುಪ್ಪ ಬೆರಸಿ, ಕುಡಿಯುವುದರಿಂದ ನಿದ್ರಾ ಹೀನತೆಯನ್ನು ದೂರವಿಡಬಹುದು.
ಸೋಂಪಿನಕಾಳಿನ ಕಪಾಯಕ್ಕೆ ಒಂದು ಚಮಚ ಜೇನುತುಪ್ಪ ಬೆರಸಿ ಕುಡಿಯುವುದರಿಂದ ಹೊಟ್ಟೆನೊವು ನಿವಾರಣೆಯಾಗುತ್ತದೆ.

Comments are closed.