ಆರೋಗ್ಯ

ಅಲ್ಸರ್ (ಸ್ಟಮಕ್ ಅಲ್ಸರ್) ಕಾಯಿಲೆಯ ಸಾಮಾನ್ಯ ಲಕ್ಷಣಗಳು ಹಾಗೂ ಪರಿಹಾರಗಳು ?

Pinterest LinkedIn Tumblr

ಹೊಟ್ಟೆಯ ಒಳಪದರದಲ್ಲಿ ಯಾತನೆಯಿಂದ ಕೂಡಿದ ನೋವು ಉಂಟಾಗುವುದು ಹೊಟ್ಟೆಯ ಅಲ್ಸರ್​ನ (ಸ್ಟಮಕ್ ಅಲ್ಸರ್) ಸಾಮಾನ್ಯ ಲಕ್ಷಣ. ಇದನ್ನು ಪೆಪ್ಟಿಕ್ ಅಲ್ಸರ್ ಎಂದೂ ಕರೆಯಲಾಗುತ್ತದೆ. ನಮ್ಮ ಜಠರವು ಜೀರ್ಣಕ್ರಿಯೆಗಾಗಿ ಅತ್ಯಂತ ಪರಿಣಾಮಕಾರಿ ಯಾದ ಆಮ್ಲವೊಂದನ್ನು ಬಿಡುಗಡೆ ಮಾಡುತ್ತದೆ. ಸೇವಿಸಿದ ಆಹಾರವನ್ನು ಜೀರ್ಣ ಮಾಡಲು ಇದು ಸಹಾಯ ಮಾಡುವುದರೊಂದಿಗೆ ಅನೇಕ ಸೂಕ್ಷಾ್ಮಣುಜೀವಿಗಳ ವಿರುದ್ಧ ನಮ್ಮನ್ನು ರಕ್ಷಿಸುತ್ತದೆ. ಕೆಲವೊಮ್ಮೆ ಈ ಆಮ್ಲವು ತೊಂದರೆಗೂ ಕಾರಣವಾಗಬಹುದು. ಹೀಗಾಗಿ ಜಠರವು ಈ ಆಮ್ಲದ ಜೊತೆಗೆ ದಪ್ಪ ಲೋಳೆಯ ಪದರವನ್ನೂ ಸ್ರವಿಸುತ್ತದೆ. ಈ ಪದರವು ರಕ್ಷಕನಾಗಿ ಕಾರ್ಯ ನಿರ್ವಹಿಸುತ್ತದೆ. ಒಂದುವೇಳೆ ಈ ಲೋಳೆಯ ಪದರವು ನಷ್ಟವಾದಲ್ಲಿ ಕೆಲಸವು ಪರಿಪೂರ್ಣವಾಗುವುದಿಲ್ಲ. ಆಗ ಜಠರದಿಂದ ಸ್ರವಿಕೆಯಾದ ಪರಿಣಾಮಕಾರಿ ಆಮ್ಲವು ಹೊಟ್ಟೆಯಲ್ಲಿನ ಅಂಗಾಂಗಗಳ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಅದು ಅಲ್ಸರ್​ಗೆ ಕಾರಣವಾಗುವುದು. ಹೊಟ್ಟೆಯ ಅಲ್ಸರ್​ಗಳನ್ನು ಕಡಿಮೆ ಮಾಡಲು ಸಾಧ್ಯವಿದೆ. ಹಾಗೆಯೇ ಬಿಟ್ಟರೆ ಪೂರ್ಣ ಗುಣವಾಗುವುದು ಕಷ್ಟ.

ಎಚ್​ಫೈಲೋರಿ ಬ್ಯಾಕ್ಟೀರಿಯಾಗಳು ಅಲ್ಸರ್​ಗೆ ಕಾರಣವಾಗಿರಬಹುದು. ಹೆಚ್ಚಿನ ಪ್ರಮಾಣದಲ್ಲಿ ನೋವು ನಿವಾರಕ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿ ಅಲ್ಸರ್ ಆಗಬಹುದು. ಅಲ್ಸರ್ ಇದ್ದಲ್ಲಿ ಸಾಮಾನ್ಯವಾಗಿ ಅಜೀರ್ಣದ ಲಕ್ಷಣಗಳು ಕಂಡುಬರುತ್ತದೆ. ನೋವು, ವಾಂತಿ, ಹೊಟ್ಟೆಯಲ್ಲಿ ಕಿರಿಕಿರಿ ಆಗಬಹುದು. ಆದರೆ ಹಾರ್ಟ್​ಬರ್ನ್ ಸಮಸ್ಯೆಯಲ್ಲೂ ಇಂಥದ್ದೇ ಲಕ್ಷಣ ಕಾಣುತ್ತದೆ. ಅಲ್ಸರ್ ಇದ್ದಲ್ಲಿ ತೂಕ ಇಳಿಕೆ, ಕೆಲವರಿಗೆ ಪದೇಪದೆ ಹಸಿವಾಗುವಿಕೆ, ವಾಕರಿಕೆ, ವಾಂತಿ, ಹೊಟ್ಟೆಯುಬ್ಬರ ಇತ್ಯಾದಿ ಲಕ್ಷಣ ಕಾಣಿಸಿಕೊಳ್ಳಬಹುದು.

ಸರಿಯಾದ ಆಹಾರಪದ್ಧತಿಯಿಂದ ಸಮಸ್ಯೆಯ ನಿವಾರಣೆ ಸಾಧ್ಯ. ಹಣ್ಣುಗಳು ಹಾಗೂ ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ನಾರಿನಂಶ ಹೆಚ್ಚಿರುವ ಆಹಾರವ್ಯವಸ್ಥೆ ಇರಲಿ. ಅದರಲ್ಲಿಯೂ ನೀರಿನಲ್ಲಿ ಕರಗುವ ನಾರಿನಂಶ ಇರಬೇಕು. ಪ್ರೋಬಯೋಟಿಕ್​ಗಳನ್ನು ಹೆಚ್ಚು ತೆಗೆದುಕೊಳ್ಳಬೇಕು. ಎಚ್​ಫೈಲೋರಿ ಎಂಬ ಬ್ಯಾಕ್ಟೀರಿಯಾದಿಂದ ಅಲ್ಸರ್ ಆಗುವ ಸಂದರ್ಭಗಳು ಹೆಚ್ಚು ಕಂಡುಬರುತ್ತದೆ. ಆದ್ದರಿಂದ ಕೆಟ್ಟಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವಂತಹ ಆಹಾರಸೇವನೆ ಅಗತ್ಯ. ವಿಟಮಿನ್ ಸಿ, ಝಿಂಕ್, ಸೆಲೆನಿಯಂನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವಂತಹ ಆಹಾರವನ್ನು ಸೇವಿಸಬೇಕು. ದ್ರವಾಹಾರ ಉತ್ತಮ. ಆದರೆ ಮದ್ಯಸೇವನೆಯನ್ನು ತ್ಯಜಿಸುವುದು ಅವಶ್ಯ. ಧೂಮಪಾನವೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಎಲ್ಲ ಆಹಾರಪದ್ಧತಿಯ ಜೊತೆಗೆ ಹೊಟ್ಟೆ ತಂಪು ಪಟ್ಟಿ, ಹೊಟ್ಟೆಗೆ ಮಣ್ಣಿನ ಪಟ್ಟಿ, ಕಟಿಸ್ನಾನ ಮುಂತಾದ ಪ್ರಕೃತಿಚಿಕಿತ್ಸೆಯು ಸಹಕಾರಿಯಾಗುತ್ತದೆ. ಅವಶ್ಯವಿದ್ದಲ್ಲಿ ಬೂದುಗುಂಬಳಕಾಯಿ ಹಾಗೂ ಹಸಿ ಶುಂಠಿ ಜ್ಯೂಸ್​ನ ಕ್ರಮಬದ್ಧ ಸೇವನೆ, ಉಪವಾಸ ಚಿಕಿತ್ಸೆಯಿಂದ ಸಮಸ್ಯೆಯ ಸಂಪೂರ್ಣ ನಿರ್ವಹಣೆ ಸಾಧ್ಯ.

.

Comments are closed.