ಕರಾವಳಿ

ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ಸಹಕಾರಿ ಸಂಘಗಳ ಪ್ರತಿನಿಧಿಗಳಿಗೆ ಇಸ್ರೇಲ್ ಪ್ರವಾಸ 

Pinterest LinkedIn Tumblr

ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ರಂಗದಲ್ಲಿ ತನ್ನದೇ ಪ್ರಭುತ್ವವನ್ನು ಸ್ಥಾಪಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಗ್ರಮಾನ್ಯ ಸಹಕಾರಿ ಬ್ಯಾಂಕ್. ಸಹಕಾರಿ ಕ್ಷೇತ್ರದ ಬಲವರ್ಧನೆಗೆ ತನ್ನದೇ ಆದ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಸಹಕಾರಿ ಸಂಘಗಳ ಬೆಳವಣಿಗೆಗೂ ಸಂಪೂರ್ಣ ಬೆಂಬಲವನ್ನು ನೀಡುವ ಜೊತೆಗೆ ಮಾರ್ಗದರ್ಶನವನ್ನು ನೀಡುತ್ತಿದೆ.

ಎಸ್‌ಸಿಡಿಸಿಸಿ ಬ್ಯಾಂಕ್‌ನಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಕೂಡಾ ಅಭಿವೃದ್ಧಿಯನ್ನು ಹೊಂದಬೇಕೆನ್ನುವ ವಿಶೇಷ ಕಾಳಜಿಯನ್ನು ಬ್ಯಾಂಕು ಹೊಂದಿದೆ. ಹಾಗಾಗಿ ಸಹಕಾರಿ ಸಂಘಗಳ ಪದಾಧಿಕಾರಿಗಳಿಗೆ ಪಾಶ್ಚಿಮಾತ್ಯ ದೇಶಗಳಿಗೆ ಭೇಟಿ ನೀಡುವ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಗಿದೆ. ಈ ಬಾರಿ ಪ್ರಥಮ ಹಂತದಲ್ಲಿ ಇಸ್ರೇಲ್ ರಾಷ್ಟ್ರಕ್ಕೆ ಅಧ್ಯಯನ ಪ್ರವಾಸವನ್ನು ಜೂನ್ 20ರಿಂದ ಜೂನ್ 26ರವರೆಗೆ ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ| ಎಂ.ಎನ್ ರಾಜೇಂದ್ರ ಕುಮಾರ್ ತಿಳಿಸಿದರು.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ರೇಲ್ ಅಧ್ಯಯನ ಪ್ರವಾಸದಲ್ಲಿ ಆಧುನಿಕ ಕೃಷಿ ಪದ್ಧತಿ, ಹನಿ ನೀರಾವರಿ ಮತ್ತು ಈ ರಾಷ್ಟ್ರ ಅಭಿವೃದ್ಧಿಯನ್ನು ಹೊಂದಿದ ನೈಜ ಸ್ಥಿತಿಗತಿಗಳ ಬಗ್ಗೆ ವಿಶೇಷ ಅಧ್ಯಯನವನ್ನು ನಮ್ಮ ಅಧ್ಯಯನ ತಂಡ ಮಾಡಲಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳನ್ನು ಅಧ್ಯಯನ ಪ್ರವಾಸಕ್ಕೆ ವಿದೇಶಕ್ಕೆ ಕಳುಹಿಸುತ್ತಿರುವುದು ರಾಜ್ಯದಲ್ಲೇ ಪ್ರಥಮ. ಈ ಹೆಗ್ಗಳಿಕೆಗೆ ನಮ್ಮ ಎಸ್‌ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ. ಇದುವರೆಗೆ ಯಾವುದೇ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೈಗೊಳ್ಳದ ವಿಶೇಷ ಕಾರ್ಯಯೋಜನೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಆಯೋಜಿಸಿದೆ ಎಂದು ಹೇಳಿದರು.

ಮುಂಬಯಿಯಿಂದ ಜೆರುಸಲೇಮ್‌ಗೆ ಅಧ್ಯಯನ ತಂಡ ಆಗಮಿಸಿ, ಇಸ್ರೇಲ್ ಪಾರ್ಲಿಮೆಂಟ್‌ಗೆ ಭೇಟಿ ಮತ್ತು ಆಧುನಿಕ ಕೃಷಿಯ ಬಗ್ಗೆ ಮಾಹಿತಿ ಪಡೆಯುವುದು. ಬೆತ್ಲಹೇಮ್‌ನಲ್ಲಿ ಕುರಿ ಸಾಗಣೆ ಮತ್ತು ಹಾಲಿನ ಉತ್ಪಾದನೆ ಕುರಿತು ಅಧ್ಯಯನ. ಆರ್ಗಾನಿಕ್ ಕೃಷಿ ಅಥವಾ ಅದಕ್ಕೆ ಸಮನಾದ ಆರ್ಗಾನಿಕ್ ಕೃಷಿ ಉತ್ಪನ್ನಗಳ ಕುರಿತು ಅಧ್ಯಯನ. ಎಸ್.ಸಿ.ಆರ್ ಕಂಪೆನಿಗೆ ಭೇಟಿ ಕೊಟ್ಟು ಸ್ಮಾರ್ಟ್ ಡೈರಿ ಫಾರ್ಮ್ ಕುರಿತು ಅಧ್ಯಯನ. ಓeಣಚಿಜಿim ನೀರಾವರಿ ಕಂಪೆನಿಗೆ ಭೇಟಿ ನೀಡಿ ಹನಿ ನೀರಾವರಿಯ ಬಗ್ಗೆ ವಿಶೇಷ ಅಧ್ಯಯನವನ್ನು ನಮ್ಮ ಪ್ರಾಯೋಜಕತ್ವದ ಅಧ್ಯಯನ ತಂಡ ಮಾಡಲಿದೆ ಎಂದು . ಡಾ| ಎಂ.ಎನ್ ರಾಜೇಂದ್ರ ಕುಮಾರ್ ವಿವರ ನೀಡಿದರು.

26 ಮಂದಿಗಳ ಅಧ್ಯಯನ ತಂಡ:

ಈ ಅಧ್ಯಯನ ಪ್ರವಾಸ ತಂಡದಲ್ಲಿ 26 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಅಧ್ಯಯನ ತಂಡದಲ್ಲಿ ಭಾಗವಹಿಸುವವರ ವಿವರ ಈ ರೀತಿ ಇದೆ.

ಶ್ರೀ ಎಂ. ಮಹೇಶ್ ಹೆಗ್ಡೆ, ಅಧ್ಯಕ್ಷರು, ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ, ಶ್ರೀ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಅಧ್ಯಕ್ಷರು, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ, ಶ್ರೀ ವೈ ಸುಧೀರ್ ಕುಮಾರ್, ಅಧ್ಯಕ್ಷರು, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಬ್ಯಾಂಕ್, ಶ್ರೀ ಕೆ. ಸತೀಶ್ ಶೆಟ್ಟಿ, ಅಧ್ಯಕ್ಷರು, ಗಣಪತಿ ಸಹಕಾರಿ ವ್ಯವಸಾಯಿಕ ಸಂಘ, ಶ್ರೀ ಎಚ್. ಗಂಗಾಧರ ಶೆಟ್ಟಿ, ಅಧ್ಯಕ್ಷರು, ಮಂದಾರ್ತಿ ಸೇವಾ ಸಹಕಾರಿ ಸಂಘ, ಶ್ರೀ ಕರ್ಜೆ ಅಶೋಕ ಶೆಟ್ಟಿ, ಅಧ್ಯಕ್ಷರು, ಟಿ.ಎ.ಪಿ.ಸಿ.ಎಂ.ಎಸ್ ಉಡುಪಿ, ಶ್ರೀ ಹಿರಿಯಡ್ಕ ಅಶೋಕ ಶೆಟ್ಟಿ, ಅಧ್ಯಕ್ಷರು, ಹಿರಿಯಡ್ಕ ಆರ್.ಎಸ್.ಎಸ್.ಎನ್, ಶ್ರೀ ನಾರಾಯಣ ಬಳ್ಳಾಲ್, ಅಧ್ಯಕ್ಷರು, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ, ಶ್ರೀ ತಿಮ್ಮ ಪೂಜಾರಿ, ಅಧ್ಯಕ್ಷರು, ಕೋಟ ಸಹಕಾರಿ ವ್ಯವಸಾಯಿಕ ಸಂಘ, ಶ್ರೀ ಶಂಕರ ಪೂಜಾರಿ, ಅಧ್ಯಕ್ಷರು, ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘ, ಶ್ರೀ ಗ್ರೆಗರಿ ಕೊನ್ರಾಡ್, ಅಧ್ಯಕ್ಷರು, ಶಿರ್ವ ಸಹಕಾರಿ ವ್ಯವಸಾಯಿಕ ಸಂಘ, ಶ್ರೀ ರಮೇಶ್ ಶೆಟ್ಟಿ ಎನ್, ಅಧ್ಯಕ್ಷರು, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಶ್ರೀ ಶ್ರೀಧರ ಪಾಂಡೇಶ್ವರ ಶಿವರಾಮ, ಅಧ್ಯಕ್ಷರು, ಸಾಸ್ತಾನ ಸೇವಾ ಸಹಕಾರಿ ಸಂಘ, ಶ್ರೀ ಲಕ್ಷ್ಮಣ ಗೌಡ, ಅಧ್ಯಕ್ಷರು, ಬಂಗಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ಸತೀಶ್ ಕೆ, ಅಧ್ಯಕ್ಷರು, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ಕೆ. ಭವಾನಿ ಶಂಕರ್, ಅಧ್ಯಕ್ಷರು, ಅಜೆಕಾರು ಸಹಕಾರಿ ವ್ಯವಸಾಯಿಕ ಸಂಘ, ಶ್ರೀ ಕೆ. ಚಂದ್ರಶೇಖರ್ ಬಾಯರಿ, ಅಧ್ಯಕ್ಷರು, ವರಂಗ ಸಹಕಾರಿ ವ್ಯವಸಾಯಿಕ ಸಂಘ, ಶ್ರೀ ರಮೇಶ್ ಭಟ್ ಉಪ್ಪಂಗಳ, ಅಧ್ಯಕ್ಷರು, ಅಲಂಕಾರ್ ಸಹಕಾರಿ ವ್ಯವಸಾಯಿಕ ಸಂಘ, ಶ್ರೀ ಅಶ್ವಿನ್ ಎಲ್ ಶೆಟ್ಟಿ, ಅಧ್ಯಕ್ಷರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ಕೃಷ್ಣ ಕುಮಾರ್ ರೈ, ಅಧ್ಯಕ್ಷರು, ಪುತ್ತೂರು ಟಿ.ಎ.ಪಿ.ಸಿ.ಎಂ.ಎಸ್, ಶ್ರೀ ದಯಾನಂದ, ನಿರ್ದೇಶಕರು, ಏನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ದಾಮೋದರ ಗೌಡ, ಅಧ್ಯಕ್ಷರು, ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ಮೋನಪ್ಪ ಪೂಜಾರಿ, ಅಧ್ಯಕ್ಷರು, ಕಜೆಕಾರು ಸಹಕಾರಿ ವ್ಯವಸಾಯಿಕ ಸಂಘ, ಶ್ರೀ ಕೆ. ರಾಧಾಕೃಷ್ಣ ಮಯ್ಯ, ಅಧ್ಯಕ್ಷರು, ಮಣಿನಾಲ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಶ್ರೀ ಪದ್ಮಪ್ರಸಾದ್ ಹೊಸಬೆಟ್ಟು, ಅಧ್ಯಕ್ಷರು, ಹೊಸಬೆಟ್ಟು ಸಹಕಾರಿ ವ್ಯವಸಾಯಿಕ ಸಂಘ, ಶ್ರೀ ರತ್ನಾಕರ ಶೆಟ್ಟಿ, ಕಾರ್ಯದರ್ಶಿ, ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್.

ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಶಶಿ ಕುಮಾರ್ ರೈ ಬಾಲ್ಯೊಟ್ಟು, ಮಹೇಶ್ ಹೆಗ್ಡೆ, ಬಿ. ಅಶೋಕ್ ಕುಮಾರ್ ಶೆಟ್ಟಿ, ಸಿ‌ಇ‌ಒ ರವೀಂದ್ರ ಬಿ ಹಾಗೂ ಅಧ್ಯಯನ ಪ್ರವಾಸ ಕೈಗೊಳ್ಳುವ ಎಲ್ಲಾ ಪ್ರತಿನಿಧಿಗಳು ಮತ್ತು ಬ್ಯಾಂಕಿನ ಮಹಾ ಪ್ರಬಂಧಕರಾದ ಗೋಪಿನಾಥ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

Comments are closed.