ಕರಾವಳಿ

ಗ್ಯಾಸ್ಟ್ರಿಕ್ ,ಅಜೀರ್ಣ , ಶ್ವಾಸಕೋಶ ತೊಂದರೆ ,ಆಸ್ತಮಾ ರೋಗಿಗಳಿಗೆ ಇದು ಒಳ್ಳೆಯ ಮನೆಮದ್ದು .

Pinterest LinkedIn Tumblr

ಘಾಟು ವಾಸನೆಯನ್ನು ಹೊಂದಿದ ಬೆಳ್ಳುಳ್ಳಿ ಅನೇಕ ರೋಗ ನಿರೋಧಕ ಗುಣಗಳನ್ನು ಹೊಂದಿದ ಒಂದು ದಿವ್ಯ ಔಷಧಿ .
* ಕೆಟ್ಟ ಕೊಲೆಸ್ಟ್ರಾಲ್ ನ್ನು ( LDL)ನಿಯಂತ್ರಿಸುವದಷ್ಟೇ ಅಲ್ಲ ,ರಕ್ತ ಹೆಪ್ಪುಗಟ್ಟುವದನ್ನು ತಡೆಯುವದು .
*ಹಸಿ ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ .
*ಜೀರ್ಣಾಂಗ ಕ್ರಿಯೆಯನ್ನು ಸಾರಾಗಗೊಳಿಸುವದು ,ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವದು .
*ಅಧಿಕ ರಕ್ತದೊತ್ತಡದಲ್ಲಿ ಪರಿಣಾಮಕಾರಿ ,ಆರಂಭಿಕ ಗ್ಯಾಸ್ಟ್ರಿಕ್ ,ಅಜೀರ್ಣ , ಶ್ವಾಸಕೋಶ ತೊಂದರೆ ,ಆಸ್ತಮಾ ರೋಗಿಗಳಿಗೆ ಇದು ಒಳ್ಳೆಯ ಮನೆಮದ್ದು .
*ಕ್ಯಾನ್ಸರ್ ,ಬೊಜ್ಜು ,ಕರಳುಹುಣ್ಣು ಮುಂತಾದವುಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ .
* ಶೀತದ ಕಿವಿ ನೋವು , ಶೀತ ಕ್ಕೆ ಸಂಬಂಧಪಟ್ಟ ಇನ್ನಿತರ ಕಾಯಿಲೆಯಲ್ಲಿ ಹತ್ತಿಯ ಒಳಗಡೆ ಜಜ್ಜಿದ ಬಳ್ಳೊಳ್ಳಿಯನ್ನು ಕಿವಿಯಲ್ಲಿ ಇಟ್ಟುಕೊಂಡರೆ ಬೇಗ ಪರಿಹಾರ ಸಿಗುವದು .
* ಹುಳಕು ಹಲ್ಲಿನ ಆರಂಭಿಕ ನೋವು ಬಂದಲ್ಲಿ ಇದರ ರಸದಿಂದ ಆ ಜಾಗದಲ್ಲಿ ಬ್ರಶ್ ಮಾಡಿದರೆ ನೋವು ಇಲ್ಲದಂತಾಗುವದು .
*ಅತೀ ಕೆಲಸದಿಂದ ಮೈ ಕೈ ನೋವಿದ್ದರೆ ಕೊಬ್ಬರಿ ಎಣ್ಣೆಯಲ್ಲಿ ಬೆಳ್ಳೊಳ್ಳಿ ಕುದಿಸಿ ದೇಹಕ್ಕೆ ಮಸ್ಸಾಜ್ ಮಾಡಿ ಬಿಸಿ ನೀರಿನ ಸ್ನಾನ ಮಾಡಿದಲ್ಲಿ ಕೂಡಲೇ ಪರಿಹಾರ ಸಿಗುವದು .ಅಷ್ಟೇ ಅಲ್ಲ ಚರ್ಮ ರೋಗ ,ನರ ಸಂಭಂದಿ ರೋಗದಲ್ಲೂ ಉಪಯುಕ್ತವಾದುದು .ಹಸಿ ಬೆಳ್ಳುಳ್ಳಿ ಅತ್ಯಂತ ಪರಿಣಾಮಕಾರಿ ಆದರೆ ಅತೀ ಸೇವನೆ ಒಳ್ಳೆಯದಲ್ಲ .ಚಟ್ನಿ ಪುಡಿಗಳಲ್ಲಿ ಹಸಿ ಬೆಳ್ಳುಳ್ಳಿ ಉಪಯೋಗಿಸುವದು ಉತ್ತಮ ,ದಿನದ ಅಡುಗೆಯಲ್ಲಿ ಒಗ್ಗರಣೆಯೊಂದಿಗೆ ಉಪಯೋಗಿಸುತ್ತ ಬಂದಲ್ಲಿ ಅನೇಕ ತೊಂದರೆಗಳಿಂದ ಮುಕ್ತರಾಗಬಹುದು .

Comments are closed.