ಆರೋಗ್ಯ

ಈ ಮುದ್ರೆಗಳು ದೈಹಿಕ ನೋವನ್ನು ಶಮನಗೊಳಿಸಲು ಸಹಾಯ

Pinterest LinkedIn Tumblr

ಈ ಮುದ್ರೆಯು ಆಂತರಿಕ ಪರಿಣಾಮವನ್ನು ಶಾಂತಗೊಳಿಸುತ್ತದೆ. ಶಕ್ತಿಮುದ್ರೆ ಹಠಯೋಗದ ಒಂದು ಭಾಗವಾಗಿದೆ. ಎರಡೂ ಕೈಗಳ ಕಿರುಬೆರಳು ಮತ್ತು ಉಂಗುರ ಬೆರಳುಗಳ ತುದಿಯನ್ನು ಜೋಡಿಸಿ. ಹೆಬ್ಬೆರಳನ್ನು ಕೈ ಮಧ್ಯಕ್ಕೆ ಮಡಚಿ, ಉಳಿದ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಹೆಬ್ಬೆರಳ ಮೇಲೆ ಒತ್ತಿ ಇಡಿ. ಹತ್ತು ನಿಮಿಷಗಳ ಅಭ್ಯಾಸ ಮಾಡಿ.

ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈ ಮುದ್ರೆ ಸಹಕಾರಿ. ಈ ಮುದ್ರೆಯ ಅಭ್ಯಾಸದಿಂದ ದೈಹಿಕ, ಮಾನಸಿಕ ಸಮಸ್ಯೆಗಳ ನಿಯಂತ್ರಣವಾಗುತ್ತದೆ. ಕರುಳಿನಲ್ಲಿ ಉಂಟಾಗುವ ಸೆಳೆತ ನಿಯಂತ್ರಣ. ಮನಸ್ಸು ಬೇಗನೆ ಶಾಂತ ಸ್ಥಿತಿಗೆ ಬರುತ್ತದೆ. ಸ್ತ್ರೀಯರ ಮುಟ್ಟು ದೋಷ ನಿಯಂತ್ರಣ. ಈ ಮುದ್ರೆಯಲ್ಲಿ ಪೆಲ್ವಿಕ್ ಭಾಗ ರಿಲ್ಯಾಕ್ಸ್ ಆಗುತ್ತದೆ. ಅರ್ಥಾತ್, ಈ ಮುದ್ರೆಯಿಂದ ಉದರದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೆಚ್ಚು ಹೊತ್ತು ಈ ಮುದ್ರೆಯನ್ನು ಅಭ್ಯಾಸ ಮಾಡಿದರೆ ಆಲಸ್ಯ ಬರುತ್ತದೆ ಹಾಗೂ ತಾಮಸಿಕ ಪ್ರವೃತ್ತಿ ಹೆಚ್ಚಾಗಬಹುದು.

ಮುಟ್ಟಿನ ಸೆಳೆತ, ನೋವಿನ ಪರಿಹಾರಕ್ಕೆ ಯೋಗ, ಮುದ್ರೆಗಳು
ಕೆಲವು ಮಹಿಳೆಯರಿಗೆ ಮುಟ್ಟಿನ ಸೆಳೆತವು ನೋವುಂಟುಮಾಡಿ ಅಸ್ವಸ್ಥತೆ ಉಂಟಾಗಬಹುದು. ದೈಹಿಕ ಚಟುವಟಿಕೆ ಕೊರತೆ, ತಪ್ಪಾದ ಆಹಾರಸೇವನೆ ಪದ್ಧತಿ, ಅತಿಯಾದ ವ್ಯಾಯಾಮ, ಹಾಮೋನ್ ವ್ಯತ್ಯಾಸ ಇತ್ಯಾದಿಗಳು. ಮುಟ್ಟಿನ ಸೆಳೆತವನ್ನು ಎದುರಿಸಲು ಯೋಗವು ಸಹಕಾರಿ. ಮುಟ್ಟಿನ ಸೆಳೆತಗಳಿಗೆ ವಿದಾಯ ಹೇಳಲು ಉತ್ತಮ ವಿಧಾನವೆಂದರೆ ವ್ಯಾಯಾಮ, ಯೋಗ ಮತ್ತು ಮುದ್ರೆಗಳು. ದೈಹಿಕ ಚಟುವಟಿಕೆಯು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ಪಾದಹಸ್ತಾಸನ, ಪಾರ್ಶ್ವತಾಡಾಸನ, ಬದ್ಧಕೋನಾಸನ, ಬಾಲಾಸನ, ಜಾನುಶೀರ್ಷಾಸನ, ಶಶಾಂಕಾಸನ, ಮಂಡೂಕಾಸನ, ಸಂಪೂರ್ಣ ಪವನಮುಕ್ತಾಸನ, ಮಾರ್ಜಾಲಾಸನ, ವಿಪರೀತಕರಣಿ, ಭುಜಂಗಾಸನ, ಶಲಭಾಸನ, ಧನುರಾಸನ, ಶವಾಸನ ಯೋಗವನ್ನು ಅಭ್ಯಾಸ ಮಾಡುವುದರಿಂದ ಋತುಚಕ್ರದ ಸೆಳೆತ ತಗ್ಗಿಸಬಹುದು. ಮನಃಸ್ಥಿತಿಯು ಸಮತೋಲನಗೊಳ್ಳಲು ಸಹಾಯ ಮಾಡುತ್ತದೆ. ಮೇಲೆ ಹೇಳಿದ ಆಸನಗಳಲ್ಲಿ ಸಾಧ್ಯವಾದವುಗಳನ್ನು ಅಭ್ಯಾಸ ನಡೆಸಿ. ಮುದ್ರೆಗಳು ಜೀವಶಕ್ತಿಗಳ ಹರಿವನ್ನು ಹೆಚ್ಚಿಸುತ್ತದೆ. ಮುದ್ರೆಗಳಲ್ಲಿ ವಾಯುಶೂನ್ಯಮುದ್ರೆ ಇಪ್ಪತ್ತು ನಿಮಿಷ, ಸೂರ್ಯಮುದ್ರೆ ಹತ್ತು ನಿಮಿಷ, ಶಕ್ತಿಮುದ್ರೆ ಹತ್ತರಿಂದ ಇಪ್ಪತ್ತು ನಿಮಿಷ, ಯೋನಿಮುದ್ರೆ ಹತ್ತು ನಿಮಿಷ, ವರುಣಮುದ್ರೆ ಹತ್ತು ನಿಮಿಷ, ಪ್ರಾಣಮುದ್ರೆ ಹತ್ತು ನಿಮಿಷ ಅಭ್ಯಾಸ ಮಾಡಿ.

ಮುಟ್ಟಿನ ಸಮಯದಲ್ಲಿ ಸ್ತ್ರೀಯರು ಮುಖ್ಯವಾಗಿ ಪೂರ್ತಿ ವಿಶ್ರಾಂತಿಯನ್ನು ಪಡೆಯಬೇಕು. ಆಹಾರ ಸೇವನೆ ಪದ್ಧತಿ ಬಹಳ ಅಗತ್ಯ. ಪೋಷಕಾಂಶಗಳನ್ನು ಸೇವಿಸಿ. ಸಮಸ್ಯೆಯ ತೀವ್ರತೆ ಇದ್ದಾಗ ಜೀರಿಗೆ, ಕೊತ್ತಂಬರಿ ಕಷಾಯ ಬಳಸಿ.

Comments are closed.