ಕರಾವಳಿ

ಮುಖದಲ್ಲಿ ನೆರಿಗೆಗಳು ಮಾಯವಾಗಿ ಹೊಳೆಯುವ ತ್ವಚೆ ನಿಮ್ಮದಾಗಿಸಲು ಈ ಹಣ್ಣು ಸಹಕಾರಿ

Pinterest LinkedIn Tumblr

ಹಲಸು ಹೇಗೆ ದೇಹಕ್ಕೆ ಆರೋಗ್ಯವನ್ನು ನೀಡುತ್ತದೋ ಅಂತೆಯೇ ಹಲಸಿನ ಬೀಜ ಕೂಡ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ವಿಟಮಿನ್ ಹಾಗೂ ಮಿನರಲ್‌ಗಳ ಸತ್ವವನ್ನು ಯಥೇಚ್ಛವಾಗಿ ಹೊಂದಿರುವ ಹಲಸು ಸರ್ವ ರೋಗ ಉಪಶಮನಕವಾಗಿದೆ.

ಹಲಸಿನ ಹಣ್ಣಿನಲ್ಲಿರುವ ಟಾಪ್10 ಆರೋಗ್ಯಕರ ಗುಣಗಳು

ವಿಟಮಿನ್ ಎ ಹಾಗೂ ಸಿ ಮತ್ತು ಬಿ ಸತ್ವಗಳನ್ನು ಹೊಂದಿರುವ ಹಲಸಿನ ಬೀಜ ಕ್ಯಾನ್ಸರ್ ನಿವಾರಕ ಶಕ್ತಿಯನ್ನು ಹೊಂದಿದೆ. ಇದರಲ್ಲಿ ಫೈಟೋನ್ಯೂಟ್ರಿಯಂಟ್ಸ್ ಅಧಿಕವಾಗಿದ್ದು ಕ್ಯಾಲ್ಶಿಯಂ ಜಿಂಕ್ ಹೇರಳವಾಗಿದೆ.

ಕೆಲವರಿಗೆ ಹಲಸಿನ ಬೀಜ ಅಜೀರ್ಣವನ್ನುಂಟು ಮಾಡುತ್ತದೆ ಅಂತವರು ಮಾರುಕಟ್ಟೆಯಲ್ಲಿ ದೊರೆಯುವ ಬೀಜದ ಹುಡಿಯನ್ನು ಸೇವಿಸಬಹುದಾಗಿದೆ. ಇದು ಕೂಡ ಆರೋಗ್ಯಕ್ಕೆ ಒಳ್ಳೆಯದಾಗಿದ್ದು ಉತ್ತಮ ಪೋಷಕಾಂಶಗಳನ್ನು ಹೊಂದಿದೆ.

ಸುಕ್ಕು ನಿವಾರಣೆಗೆ:
ನಿಮ್ಮ ಮುಖದಲ್ಲಿ ಸುಕ್ಕುಗಳು ಹೆಚ್ಚಾಗಿ ಕಾಣಿಸಿಕೊಂಡು ಹೆಚ್ಚು ವಯಸ್ಸಾದಂತೆ ಮಾಡುತ್ತಿವೆಯೇ? ಚಿಂತಿಸದಿರಿ ಹಲಸಿನ ಬೀಜದ ಹುಡಿ ಮತ್ತು ಹಾಲನ್ನು ಜೊತೆಯಾಗಿ ಸೇರಿಸಿ ಮಿಶ್ರ ಮಾಡಿಕೊಂಡು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದಲ್ಲಿ ನೆರಿಗೆಗಳ ಮಾಯವಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ನಿಮ್ಮ ಅಜೀರ್ಣತೆಯನ್ನು ದೂರಾಗಿಸುತ್ತದೆ.
ಹೌದು ಹಲಸಿನ ಬೀಜದಲ್ಲಿ ಫೈಬರ್ ಅಂಶಗಳು ಹೇರಳವಾಗಿದ್ದು ಅಜೀರ್ಣತೆ ಹಾಗೂ ಮಲಬದ್ಧತೆಯನ್ನು ದೂರಾಗಿಸಲು ನೆರವು ನೀಡುತ್ತದೆ. ಇದು ನಿಮ್ಮ ಆರೋಗ್ಯಕಾರಿ ಶರೀರಕ್ಕೂ ಅತೀ ಉತ್ತಮವಾಗಿದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಹಲಸಿನ ಬೀಜ ಸಹಕಾರಿ.

ಸುಂದರ ಮೈಕಾಂತಿಗೆ:
ಹಲಸಿನ ಬೀಜವು ಸುಂದರ ಮೈ ಕಾಂತಿಯನ್ನು ನಿಮಗೆ ನೀಡುತ್ತದೆ ಹಲಸಿನ ಬೀಜವನ್ನು ರಾತ್ರಿ ಹಾಲು ಮತ್ತು ಜೇನಿನೊಂದಿಗೆ ನೆನೆಸಿ ಮರುದಿನ ಇದನ್ನು ನುಣ್ಣಗೆ ರುಬ್ಬಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ತ್ವಚೆಯ ದೊರಗುತನ ನಿವಾರಣೆಯಾಗಿ ಮುಖವು ಸುಂದರವಾಗಿ ಹೊಳೆಯುತ್ತದೆ ಮತ್ತು ನುಣುಪಾಗುತ್ತದೆ.

ಒತ್ತಡ ನಿವಾರಣೆಗೆ:
ನಿಮ್ಮ ಒತ್ತಡವನ್ನು ನಿವಾರಿಸುವಲ್ಲಿ ಹಲಸಿನ ಬೀಜ ಪರಿಣಾಮಕಾರಿಯಾಗಿದೆ. ಇದರಲ್ಲಿರುವ ಉತ್ತಮ ಪೋಷಕಾಂಶ ಸತ್ವಗಳು ನಿಮ್ಮಲ್ಲಿರುವ ಒತ್ತಡವನ್ನು ನಿವಾರಿಸಿ ನಿಮ್ಮ ಆರೋಗ್ಯಕ್ಕೆ ಸುಧಾರಣೆಗೆ ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯ ಮಾಯಿಶ್ವರ್ ಮಟ್ಟವನ್ನು ಇದು ಸುಧಾರಿಸುತ್ತದೆ.

ಕೂದಲಿನ ಕಾಂತಿಗೆ:
ಹಲಸಿನ ಬೀಜವು ಕೂದಲಿನ ಕಾಂತಿಯನ್ನು ಹೆಚ್ಚಿಸುತ್ತದೆ. ಇದು ರಕ್ತದ ಸಂಚಾರವನ್ನು ಸೂಕ್ತವಾಗಿ ನಿರ್ವಹಿಸುವುದರಿಂದ ನಿಮ್ಮ ಕೂದಲಿಗೂ ಜೀವಂತಿಕೆ ಹೊಳಪು ಹಾಗೂ ಕೂದಲ ಸಮಸ್ಯೆಗಳು ದೂರಾಗಿ ಅವುಗಳು ಆರೋಗ್ಯವಾಗಿರುತ್ತವೆ:

ಅನೀಮಿಯಾ ನಿವಾರಣೆ:
ಅನೀಮಿಯಾ ನಿವಾರಣೆಗೆ ಹೆಚ್ಚಿನ ಪೋಷಕಾಂಶಗಳಿಂದ ಭರಿತವಾದ ಹಲಸಿನ ಬೀಜ ಸಹಾಯ ಮಾಡುತ್ತದೆ.

ಕಣ್ಣಿನ ದೃಷ್ಟಿಗೆ:
ಹಲಸಿನ ಬೀಜದಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ದೃಷ್ಟಿ ದೋಷ ನಿವಾರಣೆಗೆ ಇದು ನೆರವಾಗುತ್ತದೆ. ಇರುಳುಗುರುಡುತನವನ್ನು ನಿವಾರಿಸುವಲ್ಲೂ ಕೂಡ ಹಲಸಿನ ಬೀಜ ಉತ್ತಮ ಫಲವನ್ನು ನೀಡುತ್ತದೆ.

ಲೈಂಗಿಕ ಶಕ್ತಿಗೆ:
ನಿಮ್ಮಲ್ಲಿರುವ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಹಲಸಿನ ಬೀಜ ಫಲಪ್ರದ.

Comments are closed.