ಆರೋಗ್ಯ

ಆಲೂಗಡ್ಡೆಯಲ್ಲಿವೆ ಹಲವು ಔಷಧೀಯ ಗುಣಗಳು.

Pinterest LinkedIn Tumblr

ಈ ಭೂಮಂಡಲದ ಅತ್ಯಂತ ಸಾಮಾನ್ಯ ಮತ್ತು ಬಹು ಮುಖ್ಯ ಆಹಾರದ ಮೂಲಗಳಲ್ಲಿ ಒಂದು.ರುಚಿಕರವಾದ ಆಲೂ ಪೌಷ್ಠಿಕಾಂಶಗಳ ಆಗರ. ಆಲೂಗಡ್ಡೆಯಲ್ಲಿ ಪಿಷ್ಠಾಂಶ ಅಧಿಕವಾಗಿರುತ್ತದೆ.ಈ ಗಡ್ಡೆಯನ್ನು ಧಾನ್ಯಗಳ ಬದಲಿಗೆ ಉಪಯೋಗಿಸಬಹುದು.ಪ್ರತಿದಿನ ಆಹಾರದಲ್ಲಿ 75 ಗ್ರಾಂನಷ್ಟು ಆಲೂಗಡ್ಡೆಯನ್ನು ಉಪಯೋಗಿಸುವುದರಿಂದ ಆರೋಗ್ಯ ರಕ್ಷಣೆಯಾಗಿರುತ್ತದೆ. ಇದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಂಟು.ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಹೃದಯ ಆರೋಗ್ಯವನ್ನು ವರ್ಧಿಸುತ್ತದೆ. ಕ್ಯಾನ್ಸರ್‍ನನ್ನು ತಡೆಗಟ್ಟುತ್ತದೆ.ರೋಗ ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ, ರಕ್ತದೊತ್ತಡ ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ, ಮೆದುಳಿನ ಕಾರ್ಯನಿರ್ವಹಣೆ ಸಹಕಾರಿ,

ಮೂತ್ರಪಿಮಡಗಳಲ್ಲಿ ಕಲ್ಲು ನಿವಾರಣೆ ಮತ್ತು ಅತಿಸಾರ ನಿಯಂತ್ರಣಕ್ಕೆ ಪ್ರಯೋಜನಕಾರಿ-ಹೀಗೆ ಆಲೂಗಡ್ಡೆಯ ಪ್ರಯೋಜನಗಳ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಆಲೂಗಡ್ಡೆ ಖನಿಜ ಮತ್ತು ಜೀವಸತ್ವಗಳ ಭಂಡಾರ. ಇದರಲ್ಲಿ ಸಸಾರಜನಕ, ಪಿಷ್ಠ, ಕೊಬ್ಬು, ಮೇದಸ್ಸು, ಕ್ಯಾಲ್ಷಿಯಂ, ಫಾಸ್ಪರಸ್, ಕಬ್ಬಿಣ, ಆಕ್ಸಾಲಿಕ್ ಆಮ್ಲ, ಸೋಡಿಯಂ, ಪೊಟ್ಯಾಷಿಯಂ, ಮೆಗ್ನಿಷಿಯಂ, ನಿಯಾಸಿನ್ ವಿಟಮಿನ್ 3, ಬಿ1, ಬಿ2 ಮತ್ತು ಸಿ ಜೀವಸತ್ವಗಳಿವೆ. ಬೇಯಿಸಿದ ಆಲೂಗಡ್ಡೆ ತಿರುಳನ್ನು ಹಾಲಿನಲ್ಲಿ ಮೃದುವಾಗಿ ಕಲೆಸಿ ಸುಟ್ಟಗಾಯಗಳಿಗೆ ಹಚ್ಚುವುದರಿಂದ ಶೀಘ್ರ ಗುಣವಾಗುತ್ತದೆ. ಆಲೂವನ್ನು ಸಿಪ್ಪೆ ಸಹಿತ ಬೇಯಿಸಿ ಮಸೆದು ತುಪ್ಪ, ಉಪ್ಪು, ಕಾಳು ಮೇಣಸಿನ ಪುಡಿ ಬೆರಸಿ ಮಕ್ಕಳಿಗೆ ನೀಡುವುದರಿಂದ ಅವರಲ್ಲಿ ಶಕ್ತಿ ಹೆಚ್ಚಾಗುತ್ತದೆ. ಆಲೂಗಡ್ಡೆ ಎಲೆಗಳನ್ನು ಬೇಯಿಸಿ ನೋವಿರುವ ಜಾಗಕ್ಕೆ ಶಾಖ ಕೊಡುವುದರಿಂದ ನೋವು ಕಡಿಮೆಯಾಗುತ್ತದೆ. ಆದರೆ ಮಧುಮೇಹಿಗಳು, ಸ್ಥೂಲಕಾಯದವರು, ವಾತ ರೋಗಿಗಳು ಆಲೂಗಡ್ಡೆಯನ್ನು ಉಪಯೋಗಿಸುವುದು ಆರೋಗ್ಯ ದೃಷ್ಟಿಯಿಂದ ಸೂಕ್ತವಲ್ಲ.

ಆಲೂಗಡ್ಡೆಯಿಂದ ಸಾದಿಷ್ಟ ಮತ್ತು ಆರೋಗ್ಯಕರ ಅಡುಗೆಯನ್ನು ತಯಾರಿಸಬಹುದು. ಪಲ್ಯಗಳು, ಹುಳಿ, ಚಿಪ್ಸ್, ಕುರ್ಮಾ, ಗೊಜ್ಜು, ಸಾರು-ಸಂಬಾರುಗಳು, ಪರೋಟ, ಕಟ್ಲೆಟ್, ಬೋಂಡಾ, ಬಜ್ಜಿ ಪಾಯಸ, ಹಲ್ವ, ಜಾಮೂನು ಇತ್ಯಾದಿ – ಆಲೂಗಡ್ಡೆಯ ರುಚಿಕರ ಆಹಾರಗಳು..

Comments are closed.