ಕರಾವಳಿ

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ವಿದ್ಯಾರ್ಥಿನಿ ಅಂಜನಾ ವಶಿಷ್ಠ ಕೊಲೆ ಆರೋಪಿ 24 ಗಂಟೆಗಳಲ್ಲಿ ಸೆರೆ

Pinterest LinkedIn Tumblr

ಮಂಗಳೂರು, ಜೂನ್.08 :ಮಂಗಳೂರಿನ ಅತ್ತಾವರದ ಮನೆ (ಪೆಯೀಂಗ್ ಗೆಸ್ಟ್ ) ಯೊಂದರಲ್ಲಿ ಶುಕ್ರವಾರ ಹತ್ಯೆಗೀಡಾದ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಅಂಜನಾ ವಶಿಷ್ಠ (22) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೊಲೆ ನಡೆದ ೨೪ ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಜಯನಪುರ ಜಿಲ್ಲೆಯ ಸಿನಾಗಿ ತಾಲ್ಲೂಕಿನ ಬೆನಕೊಟಗಿ ಟಂಡಾ ನಿವಾಸಿ ಸಂದೀಪ್ ರಾಥೋಡ್ ಎಂದು ಗುರುತಿಸಲಾಗಿದ್ದು, ಇಂದು ಮುಂಜಾನೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.

ಹತ್ಯೆಗೀಡಾದ ವಿದ್ಯಾರ್ಥಿನಿ ಅಂಜನಾ ವಶಿಷ್ಠ

ಚಿಕ್ಕಮಗಳೂರಿನ ತರೀಕೆರೆಯ ಮಂಜುನಾಥ ವೈ.ಎನ್‌ ಎಂಬವರ ಪುತ್ರಿ ಅಂಜನಾ ವಸಿಷ್ಠ (22) ಹತ್ಯೆಗೀಡಾದ ವಿದ್ಯಾರ್ಥಿನಿ.ಈಕೆ ಬ್ಯಾಂಕಿಂಗ್‌ ಪರೀಕ್ಷೆ ತರಬೇತಿಗೆಂದು ಮಂಗಳೂರಿಗೆ ಬಂದಿರುವುದಾಗಿ ತಿಳಿದು ಬಂದಿದೆ.

ನಗರದ ಅತ್ತಾವರದಲ್ಲಿರುವ ಮೆಡಿಕಲ್ ಕಾಲೇಜು ಬಳಿಯ ಪೆಯೀಂಗ್ ಗೆಸ್ಟ್​ನ ರೂಂನಲ್ಲಿ ಅಂಜನಾ ವಶಿಷ್ಠ ಅವರ ಮೃತ ದೇಹವು ಶುಕ್ರವಾರ ಸಂಜೆ ಪತ್ತೆಯಾಗಿತ್ತು. ಅಂಜನಾ ವಶಿಷ್ಠರ ತಲೆ ಮಂಚದ ಸರಳಿನ ನಡುವೆ ಸಿಲಿಕಿದ್ದು, ಕುತ್ತಿಗೆಭಾಗದಲ್ಲಿ ಗಾಯದ ಕುರುಹುಗಳು ಪತ್ತೆಯಾಗಿತ್ತು.

ಅಂಜನಾ ಉಜಿರೆಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಎಂ.ಎಸ್ಸಿ ಪೂರೈಸಿದ್ದು, ಜೂ. 2ರಂದು ಕೋಚಿಂಗ್‌ ಸೆಂಟರ್‌ ಒಂದರಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ತರಬೇತಿಗೆ ಮಂಗಳೂರಿಗೆ ಬಂದಿದ್ದಳು. ಆಕೆಯೊಂದಿಗೆ ಉಜಿರೆಯಲ್ಲಿ ಪರಿಚಿತ ಯುವಕ ನೋರ್ವನೂ ತರಬೇತಿಗೆ ಬಂದಿದ್ದ. ಇಬ್ಬರೂ ತಾವು ದಂಪತಿ ಎಂದು ಸುಳ್ಳು ಹೇಳಿ ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂದಿನ ಮನೆಯ ಪಿಜಿಯಲ್ಲಿ ಇದ್ದರು ಎನ್ನಲಾಗಿದೆ.

2 ದಿನಗಳ ಬಳಿಕ ಆಕೆ ಊರಿಗೆ ಮರಳಿದ್ದು, ಆತ ಫೋನ್‌ ಮೂಲಕ ಆಕೆಯನ್ನು ಕರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿಗೆ ಬಂದಿದ್ದಳು. ಪಿಜಿಗೆ ಬಂದ ಬಳಿಕ ಸಂಜೆ ವೇಳೆ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.

ಜತೆಗಿದ್ದ ಯುವಕ ( ಬಂಧಿತ ಆರೋಪಿ) ಬೆಳಗ್ಗೆ ಆಕೆಯನ್ನು ಬೆಡ್‌ನ‌ಲ್ಲಿ ಟಿವಿ ಕೇಬಲ್‌ ವೈಯರ್‌ ಕತ್ತಿಗೆ ಬಿಗಿದು ಕೊಲೆ ಮಾಡಿ ಹೊರಗಿನಿಂದ ಬಾಗಿಲು ಹಾಕಿ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂಜೆವರೆಗೆ ಬಾಗಿಲು ತೆರೆಯದ್ದರಿಂದ ಕಸ ಗುಡಿಸುವ ಮಹಿಳೆಗೆ ಸಂಶಯ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಅಂಜನಾಳಿಗೆ ಇತ್ತೀಚೆಗೆ ಮನೆಯವರು ಬೇರೆ ಹುಡುಗನೊಂದಿಗೆ ಮದುವೆಗೆ ಮಾತುಕತೆ ನಡೆಸಿದ್ದರು. ಇದೇ ಆಕೆಯ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

Comments are closed.