ಕ್ರೀಡೆ

ಕೊಹ್ಲಿ ಕಾರ್ ತೊಳೆಯಲು ಕುಡಿಯುವ ನೀರು ಬಳಕೆ; 500 ರೂ. ದಂಡ!

Pinterest LinkedIn Tumblr


ಗುರುಗ್ರಾಮ: ಐಸಿಸಿ ವಿಶ್ವಕಪ್ 2019ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಆದರೆ, ಗುರುಗ್ರಾಮದಲ್ಲಿರುವ ಕೊಹ್ಲಿ ಮನೆಯಲ್ಲಿ ಅವರ ಕಾರುಗಳನ್ನು ತೊಳೆಯಲು ಕುಡಿಯುವ ನೀರು ಬಳಕೆ ಮಾಡಿದ ಕಾರಣಕ್ಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಗುರುಗ್ರಾಮದ DLF Phase-1ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲಿ ಅಲ್ಲಿನ ಕೆಲಸಗಾರರು ನಿಯಮ ಉಲ್ಲಂಘಿಸಿ ಕಾರುಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಸಿದ ಕಾರಣ ಮುನಿಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು 500 ರೂ. ದಂಡ ವಿಧಿಸಿದ್ದು, ದೀಪಕ್ ಎಂಬ ಕೆಲಸಗಾರನ ಹೆಸರಿನಲ್ಲಿ ಚಲನ್ ನೀಡಿದ್ದಾರೆ.

ಮೂಲಗಳ ಪ್ರಕಾರ, “ಕೊಹ್ಲಿ ಮನೆಯಲ್ಲಿ ಅರ್ಧ ಡಜನ್ ಗಿಂತಲೂ ಹೆಚ್ಚು ಕಾರುಗಲಿದ್ದು, ಅವುಗಳನ್ನು ಪ್ರತಿನಿತ್ಯ ಪೈಪ್ ಮೂಲಕ ನೀರು ಬಳಸಿ ತೊಳೆಯಲಾಗುತ್ತದೆ. ಇದರಿಂದಾಗಿ ಸಾಕಷ್ಟು ನೀರು ಪೋಲಾಗುತ್ತಿದೆ. ಕಾರುಗಳನ್ನು ಸ್ವಚ್ಛ ಮಾಡಲು ಬಕೆಟ್ ಗಳಲ್ಲಿ ನೀರು ಬಳಸಿ ಎಂದು ಅವರ ಮನೆಯ ಕೆಲಸಗಾರರಿಗೆ ನೆರೆಹೊರೆಯವರು ಎಷ್ಟು ಬಾರಿ ಹೇಳಿದ್ದರೂ ಪರಿಗಣಿಸಿಲ್ಲ. ಹಾಗಾಗಿ ಈ ಬಗ್ಗೆ ಮುನಿಸಿಪಲ್ ಕಾರ್ಪೋರೇಶನ್ ಗೆ ದೂರು ನೀಡಲಾಗಿ, ಅಧಿಕಾರಿಗಳು ಮನೆಗೆ ಬಂದು ದಂಡ ವಿಧಿಸಿದ್ದಾರೆ” ಎನ್ನಲಾಗಿದೆ.

Comments are closed.