
ಬೆಂಗಳೂರು: ಕೆಂಟ್ ಆರೋ ವಾಟರ್ ಪ್ಯೂರಿಪೈಯರ್ ಸರ್ವಿಸ್ ಮಾಡಲು ಬಂದಿದ್ದ ಎಕ್ಸಿಕ್ಯೂಟಿವ್ ಮನೆ ಒಡತಿ ಕೈ ಮುರಿದಿರುವ ಘಟನೆ ನಿನ್ನೆ ಮಧ್ಯಾಹ್ನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಚಿಕ್ಕ ತೋಬೂರು ಬಳಿ ನಡೆದಿದೆ.
ನಿನ್ನೆ ತಮ್ಮ ಮನೆಯಲ್ಲಿನ ವಾಟರ್ ಪ್ಯೂರಿಪೈಯರ್ ನ ಸರ್ವಿಸ್ ಮಾಡುವಂತೆ ಕೆಂಟ್ ಸರ್ವಿಸ್ ನಲ್ಲಿ ಮನೆಯೊಡತಿ ಸುಷ್ಮಿತಾ ಎಂಬುವವರು ವಾಟರ್ ಫ್ಯೂರಿಫೈಯರ್ ನ ಸರ್ವಿಸ್ ಗೆ ಕಂಪನಿಗೆ ಆರ್ಡರ್ ಮಾಡಿದ್ದರು. ಅದರಂತೆ ನಿನ್ನೆ ಮಧ್ಯಾಹ್ನ 12:30 ರ ವೇಳೆಗೆ ಸುಷ್ಮಿತ ಅವರ ನಿವಾಸಕ್ಕೆ ಕೆಂಟ್ ವಾಟರ್ ಫ್ಯೂರಿಫೈಯರ್ ಸಿಬ್ಬಂದಿ ಮೂರ್ತಿ ಎಂಬಾತ ಬಂದಿದ್ದಾನೆ.
ಈ ವೇಳೆ ಸುಷ್ಮಿತಾ ಮನೆ ಕೆಲಸದಾಳು ಮನೆಯನ್ನು ಸ್ವಚ್ಛ ಮಾಡುತ್ತಿದ್ದು, ಕೆಲ ಕಾಲ ಕಾಯುವಂತೆ ಕೆಂಟ್ ಸರ್ವಿಸ್ ರೆಫ್ರೆಸೆಂಟೇಟಿವ್ ಮೂರ್ತಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಮೂರ್ತಿ ಸರಿಯಾದ ಸಮಯಕ್ಕೆ ಸರ್ವಿಸ್ ಆರ್ಡರ್ ಮಾಡಬೇಕು. ನಿಮಗೆ ಮಾಡಲು ಕೆಲಸ ಇಲ್ಲಾಂದ್ರೆ, ನಮಗೆ ಬೇರೆ ಆರ್ಡರ್ ಇರಲ್ವಾ ಎಂದು ಸುಷ್ಮಿತಾರ ಪತಿಯೊಡನೆ ಜಗಳ ಶುರು ಮಾಡಿದ್ದಾನೆ.
ನಂತರ ಮಾತಿಗೆ ಮಾತು ಬೆಳೆದು ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಮನೆಯೊಡತಿ ಸುಷ್ಮಿತ ಮಧ್ಯ ಪ್ರವೇಶಿಸಿದ್ದು, ಆಕೆಯ ಮೇಲೆ ತನ್ನ ಬಳಿಯಿದ್ದ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಮಹಿಳೆಯ ಕೈಗಳಿಗೆ ತೀವ್ರ ಪೆಟ್ಟಾಗಿದ್ದು, ಹಲ್ಲೆಗೊಳಗಾದ ಮಹಿಳೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Comments are closed.