ಆರೋಗ್ಯ

ಕೆಮ್ಮು ಮತ್ತು ನೆಗಡಿ ನಿವಾರಣೆಗೆ ಸುಲಭ ಮನೆಯೌಷಧಿ

Pinterest LinkedIn Tumblr

ಕೆಮ್ಮು ಮತ್ತು ನೆಗಡಿ ಇದ್ದಾಗ ಒಂದು ಬಟ್ಟಲು ಹಾಲಿಗೆ ಒಂದು ಟೀ ಸ್ಪೂನಿನಷ್ಟು ಅರಿಶಿನ ಪುಡಿ ಹಾಗೂ ಕರಿಮೆಣಸಿನ ಪುಡಿ ಸೇರಿಸಿ, ಕುದಿಸಿ ದಿನವೂ ಒಂದೆರಡು ಬಾರಿ ಕುಡಿಯುತ್ತಿದ್ದರೆ ಕೆಲವೇ ದಿನದಲ್ಲಿ ಕೆಮ್ಮು ನಿಂತುಹೋಗುವುದು.
-ಜೇನುತುಪ್ಪಕ್ಕೆ ಮೂಲಂಗಿ ರಸವನ್ನು ಸಮತೂಕದಲ್ಲಿ ಸೇರಿಸಿ, ಒಂದು ಟೀ ಸ್ಪೂನಿನಷ್ಟು ದಿನವೂ ಮೂರು ಬಾರಿ ಸೇವಿಸುತ್ತಿದ್ದರೆ ಕೆಮ್ಮು ಕಡಿಮೆ ಆಗುವುದು.
-ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಶೀತದ ಕೆಮ್ಮು ನಿವಾರಣೆ ಆಗುವುದು.
-ದಿನಕ್ಕೊಂದು ಸೇಬನ್ನು ವಾರದವರೆಗೆ ತಿನ್ನುತ್ತಿದ್ದರೆ ಒಣ ಕೆಮ್ಮು ನಿಂತು ಹೋಗುವುದು.
-ಮಜ್ಜಿಗೆ ಅನ್ನಕ್ಕೆ ಹಸಿ ಈರುಳ್ಳಿ ನೆಂಜಿಕೊಂಡು ತಿನ್ನುತ್ತಿದ್ದರೆ ಉಷ್ಣದ ಕೆಮ್ಮು ನಿಲ್ಲುವುದು.
-ಶ್ರೀಗಂಧದ ಚೂರ್ಣವನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನವೂ ನಾಲ್ಕೈದು ಬಾರಿ ಮಗುವಿನ ನಾಲಿಗೆಯ ಮೇಲೆ ಲೇಪಿಸುತ್ತಿದ್ದರೆ ನಾಯಿ ಕೆಮ್ಮು ನಿಂತು ಹೋಗುವುದು.
-ಲವಂಗವನ್ನು ಉಪ್ಪಿನ ಹರಳಿನೊಂದಿಗೆ ಚಪ್ಪರಿಸುತ್ತಿದ್ದರೆ ದೀರ್ಘ ಕಾಲದ ಕೆಮ್ಮು ಕಡಿಮೆ ಆಗುತ್ತಾ ಹೋಗುವುದು.
-ಮಕ್ಕಳಿಗೆ ಕೆಮ್ಮು ಬಂದಾಗ ಒಂದು ಟೀ ಸ್ಪೂನಿನಷ್ಟು ಕತ್ತೆಯ ಹಾಲಿಗೆ ಸಕ್ಕರೆ ಬೆರೆಸದೆಯೇ ಕುಡಿಸಿದರೆ ಕೆಮ್ಮು ನಿಲ್ಲುವುದು.
-ಬಿಸಿ ಮಾಡಿದ ಹುರಿಗಡಲೆಯನ್ನು ಆಗಾಗ ಮೂಸಿ ನೋಡುವುದರಿಂದಲೂ ಕೆಮ್ಮು ನಿಲ್ಲತ್ತೆ .

Comments are closed.