ಮನೋರಂಜನೆ

ಹುಟ್ಟದ ಮಗುವಿನ ವೀಡಿಯೊ ಹಂಚಿಕೊಂಡ ‘ದಿ ವಿಲನ್’ ನಟಿ

Pinterest LinkedIn Tumblr


ಆರು ತಿಂಗಳ ಗರ್ಭಿಣಿಯಾಗಿರುವ ನಟಿ ಆ್ಯಮಿ ಜಾಕ್ಸನ್‌ ಇದೀಗ ತಾನು ಸೋನೋಗ್ರಫಿ ಮಾಡಿಸಿಕೊಂಡಿರುವ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡು ಸುದ್ದಿಯಲ್ಲಿದ್ದಾರೆ. ಅಂದರೆ ಅವರು ಇನ್ನೂ ಹುಟ್ಟದ ತಮ್ಮ ಮಗುವಿನ ಚಿತ್ರವನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ.

ಇನ್‌ಸ್ಟ್ರಾಗ್ರಾಮ್‌ನಲ್ಲಿ ಅವರು ಸೋನೋಗ್ರಫಿಯ ಎರಡು ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದು, ಈ ಪೈಕಿ ಒಂದರಲ್ಲಿ ಅವರು ಸ್ಟ್ರೆಚರ್‌ನಲ್ಲಿ ಮಲಗಿ ಸೋನೋಗ್ರಫಿ ಮಾಡಿಸಿಕೊಳ್ಳುತ್ತಿದ್ದರೆ, ಇನ್ನೊಂದರಲ್ಲಿ ಕಂಪ್ಯೂಟರ್‌ ಮಾನಿಟರ್‌ನಲ್ಲಿ ಕಾಣುತ್ತಿರುವ ಮಗುವಿನ ಚಿತ್ರವಿದೆ. ಇತ್ತೀಚೆಗೆ ಅವರು ಮೊರಕ್ಕೋ ದೇಶದ ಮ್ಯಾರಕೇಶ್‌ನಲ್ಲಿ ಬೇಬಿಮೂನ್‌ ಆಚರಿಸಿಕೊಂಡಿದ್ದರು.

ಇತ್ತೀಚೆಗೆ ಮೊರಕ್ಕೊ ಗಣರಾಜ್ಯದ ಸುಂದರ ನಗರ ಮ್ಯಾರಕೇಶ್‌ನಲ್ಲಿ ತನ್ನ ಭಾವಿ ಪತಿ ಜತೆಗೆ ಬೇಬಿ ಮೂನ್‌ ಎಂಜಾಯ್‌ ಮಾಡಿದ್ದರು. ಅಲ್ಲಿ ಸೂರ್ಯನ ಎಳೆ ಬಿಸಿಲಿನಲ್ಲಿ ಮೈ ಮರೆತು ನಿಂತಿರುವ ತನ್ನ ಫೋಟೋವೊಂದನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಈ ಫೋಟೋಗೆ ಸನ್ನಿ ಮಾರ್ನಿಂಗ್‌ ಇನ್‌ ಮ್ಯಾರಕೇಶ್‌ ಎಂಬ ಕ್ಯಾಪ್ಷನ್‌ ಕೊಟ್ಟಿದ್ದಾರೆ.

2010ರಲ್ಲಿ ಮದ್ರಾಸ್ ಪಟ್ಟಣಂ ಸಿನಿಮಾದ ಮೂಲಕ ತಮಿಳು ಚಿತ್ರರಂಗ ಪ್ರವೇಶ ಮಾಡಿದ ಆ್ಯಮಿ ದಕ್ಷಿಣದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮೂಲತ: ಬ್ರಿಟನ್ ಹುಡುಗಿ. 2009ರಲ್ಲಿ ಮಿಸ್ ಟೀನ್ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಿಸ್ ಲಂಡನ್ ಸ್ಪರ್ಧೆಯಲ್ಲಿ ಸೋತರೂ ವೆಬ್ ಸೈಟ್ ಮೂಲಕ ತಮಿಳು ನಿರ್ಮಾಪಕರ ಕಣ್ಣಿಗೆ ಬಿದ್ದು ದಕ್ಷಿಣ ಭಾರತದ ತಾರೆಯಾದರು. ಐತಿಹಾಸಿಕ ಕಥೆ ಹೊತ್ತ ಮೊದಲ ಚಿತ್ರ (ಮದ್ರಾಸ್ ಪಟ್ಟಣಂ)ದಲ್ಲೇ ಆರ್ಯನಿಗೆ ಸರಿಸಾಟಿಯಾಗಿ ನಟಿಸಿದ ಈಕೆ ಅದ್ಭುತ ನಟನೆಗಾಗಿ ಪ್ರಶಸ್ತಿಯನ್ನೂ ಪಡೆದರು.

Comments are closed.