ಸಂಸ್ಕೃತದಲ್ಲಿ ‘ಕರ್ಪೂರವಲ್ಲಿ’ಹಿಮಸಾಗರ’ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು”ಕೊಲಿಯಸ್ ಆಂಬೋಯ್ನಿಕಸ್”.ಆಡುಭಾಷೆಯಲ್ಲಿ ಸಾಂಭಾರುಬಳ್ಳಿ,ಸಾವಿರ ಸಂಭಾರ ಎಂದು ಕರೆಯಲ್ಪಡುವ ಇದು ಔಷಧೀಯ ಸಸ್ಯ.
ಇದರ ಎಲೆಯ ಚಟ್ನಿಯನ್ನು ಪ್ರತಿದಿನ ಸೇವಿಸಿದರೆ ಮೂತ್ರಕೋಶದ ಕಲ್ಲು ಕರಗುತ್ತದೆ.
ಮೈಮೇಲೆ ಪಿತ್ತದ ಗಂಧೆ ಕಾಣಿಸಿಕೊಂಡಾಗ ಇದರ ಎಲೆಯನ್ನು ಅರೆದು ಲೇಪಿಸಬೇಕು.ಇದರ ಚಟ್ನಿಯನ್ನು ದಿನ ಸೇವಿಸಬೇಕು.
ಇದರ ಎಲೆ ಅರೆದು ಪ್ರತಿದಿನ 12 ಗ್ರಾಂನಷ್ಟು ಸೇವಿಸುತ್ತಾ ಬಂದರೆ ಅರುಚಿ,ಅಜೀರ್ಣ,ಉದರಶೂಲೆ,ಬೇಧಿ ಕಾಲರಾ ಗುಣವಾಗುತ್ತದೆ.
ಈ ಎಲೆಯ ರಸದ ಜೊತೆ ಹಿಪ್ಪಲಿ ಬೆರೆಸಿ ಸೇವಿಸಿದರೆ ಮಕ್ಕಳ ಶೀತ ಕೆಮ್ಮು,ಕೆಮ್ಮಿನಿಂದ ಕೂಡಿದ ಜ್ವರ ವಾಸಿಯಾಗುತ್ತದೆ.
ಇದನ್ನು ಆಹಾರವಾಗಿ ಸೇವಿಸುವುದರಿಂದ ಪಿತ್ತಕೋಶದ ತೊಂದರೆಗಳು ಶಮನವಾಗುತ್ತವೆ.
ಜೇನು,ಚೇಳು ಕಚ್ಚಿದ ಜಾಗಕ್ಕೆ ಇದರ ಎಲೆಯನ್ನು ಅರೆದು ಲೇಪಿಸುತ್ತಾರೆ.
ಮೈಮೇಲೆ ಪಿತ್ತದ ಗಂಧೆ ಕಾಣಿಸಿದಾಗ ಎಲೆ ಅರೆದು ಮೈಗೆ ಲೇಪಿಸಿ