ಆರೋಗ್ಯ

ನಾವು ನೀವು ಬಳಸುವ ಸ್ಮಾರ್ಟ್ ಫೋನ್‌ಗಳು ಯಾವ ದೇಶದ್ದು ಗೊತ್ತಾ..?

Pinterest LinkedIn Tumblr

ನೀವು ಉತ್ತಮ ಫೀಚರ್ ಮೊಬೈಲ್ ಕೊಳ್ಳಬೇಕೆಂದು ಬಯಸುತ್ತಿರಿ. 4ಜಿಬಿ ಯಿಂದ 256 ಜಿಬಿ ಮೆಮೊರಿ ಸ್ಟೋರೇಜ್ ಇರಬೇಕು, ಗೊರಿಲ್ಲ ಗ್ಲಾಸ್ ಹಿಂದಿರಬೇಕು ಎಂಬೆಲ್ಲಾ ಸೌಲಭ್ಯ ಬೇಕೆಂದು ಬಯಸುವುದು ಸಹಜ. ಬಹುತೇಕ ಭಾರತೀಯರು ಚೀನಾ ಮೊಬೈಲ್ ಕೊಳ್ಳುತ್ತಾರೆ. ಆದರೆ, ಮೊಬೈಲ್ ಯಾವ ದೇಶದ್ದು ಎಂದು ತಿಳಿದುಕೊಂಡಿರುವುದಿಲ್ಲ. ನಿಮ್ಮ ಮೊಬೈಲ್ ಯಾವ ದೇಶದ್ದೆಂದು ತಿಳಿದುಕೊಳ್ಳಿ.

ಭಾರತದ ಮೊಬೈಲ್ ಗಳು: ಮೈಕ್ರೋಮ್ಯಾಕ್ಸ್, ಲಾವಾ, ಕಾರ್ಬನ್, ಇಂಟೆಕ್ಸ್, ಝೊಲೊ, ಸ್ಪೈಸ್, ಲೈಫ್, ವಿಡಿಯೋಕಾನ್, ಸಿಲೋನ್, ಒನಿಡಾ, ಎಚ್.ಸಿ.ಎಲ್. ಮೊಬೈಲ್ ಗಳು ಭಾರತದ ಕಂಪನಿಗಳಾಗಿವೆ.

ಚೀನಾ ಕಂಪನಿ ಮೊಬೈಲ್ : ಲೆನೆವೊ, ಆಸಸ್, ಕೂಲ್ ಪ್ಯಾಡ್, ಜಿಯೋನಿ, ಹುವಾಯ್, ವಿವೊ, ಶೋಮಿ(ಎಂಐ) ಚೀನಾ ಕಂಪನಿ ಮೊಬೈಲ್ ಗಳಾಗಿವೆ.

ಅಮೆರಿಕಾ ಕಂಪನಿ ಮೊಬೈಲ: ಡೆಲ್, ಆ್ಯಪಲ್, ಎಚ್.ಪಿ. ಮೊಟೊರೊಲಾ, ಮೈಕ್ರೋಸಾಫ್ಟ್ ಸ್ಮಾರ್ಟ್ ಫೋನ್ ಗಳು ಅಮೆರಿಕ ಕಂಪನಿಗಳದ್ದವು.

ಜಪಾನ್ ಮೊಬೈಲ್ ಗಳು: ಸೋನಿ, ತೋಷಿಬಾ, ಪ್ಯಾನಾಸೋನಿಕ್, ಜಪಾನೀಸ್ ಮೊಬೈಲ್ ಗಳು ಜಪಾನ್ ಕಂಪನಿಗಳಿಗೆ ಸೇರಿವೆ.

ಸೌತ್ ಕೋರಿಯಾ ಮೊಬೈಲ್ ಗಳು: ಸ್ಯಾಮ್ ಸಂಗ್, ಎಲ್.ಜಿ. ಮೊಬೈಲ್ ಗಳು ಸೌತ್ ಕೋರಿಯಾ ದೇಶದ ಮೊಬೈಲ್ ಗಳಾಗಿವೆ.:

ಬೇರೆ ದೇಶದ ಕಂಪನಿಗಳು

ನೆದರ್ ಲ್ಯಾಂಡ್ ದೇಶದ ಫಿಲಿಪ್ಸ್, ನೋಕಿಯಾ ಫಿನ್ ಲ್ಯಾಂಡ್, ಬ್ಲಾಕ್ ಬೆರ್ರಿ, ಡಾಟಾವೈಂಡ್ ಮೊಬೈಲ್ ಗಳು ಕೆನಡಾ ದೇಶಗಳಾಗಿವೆ.

Comments are closed.