ಕರಾವಳಿ

ಮೋದಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ : ಮಂಗಳೂರಿನಲ್ಲಿ ನಮೋ ಟೀ ಸ್ಟಾಲ್‌ಗೆ ಚಾಲನೆ

Pinterest LinkedIn Tumblr

ಮಂಗಳೂರು : ಭಾರತದ ಪ್ರಧಾನಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸುತ್ತಿರುವ ಸನ್ಮಾನ್ಯ ನರೇಂದ್ರ ದಾಮೋದರದಾಸ ಮೋದಿಯವರಿಗೆ ತಾಯಿ ಭಾರತಾಂಬೆಯ ಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂದು ಹಾರೈಸಿ ಮೋರ್ಗನ್ ಗೇಟ್ ಮೋದಿ ಅಭಿಮಾನಿ ಬಳಗದ ವತಿಯಿಂದ ನಮೋ ಟೀ ಸ್ಟಾಲ್ ಗುರುವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು.

ಉದ್ಘಾಟನೆಗೊಳಿಸಿ ಬಿಜೆಪಿ ಮುಖಂಡರೊಂದಿಗೆ ಚಾ ಸೇವಿಸಿದ ಶಾಸಕ ಕಾಮತ್ ಮೋದಿ ಅಭಿಮಾನಿಗಳ ಉಚಿತ ಚಾ ವಿತರಿಸುವ ಸೇವೆಗೆ ಶುಭ ಹಾರೈಕೆಯ ಮಾತುಗಳನ್ನು ಆಡಿ ಹುರಿದುಂಬಿಸಿದರು.

ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಪ್ರೇಮಾನಂದ ಶೆಟ್ಟಿ, ದೀಪಕ್ ವೈ, ವಸಂತ ಜೆ ಪೂಜಾರಿ, ಉಮಾನಾಥ ಬೋಳಾರ್, ಶಿವಪ್ರಸಾದ್, ಜನಾರ್ಧನ ಕುಡ್ವ, ದೇವದಾಸ ಶೆಟ್ಟಿ, ಅನಿಲ್ ಕುಮಾರ್, ಲತೀಶ್, ಭಾಸ್ಕರಚಂದ್ರ ಶೆಟ್ಟಿ, ಲಲೇಶ್ ಅತ್ತಾವರ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.