ಆರೋಗ್ಯ

ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ ಫೆಸ್‌ಪ್ಯಾಕ್ ದೈನಂದಿನ ಬಳಕೆಗೆ ಉತ್ತಮ.

Pinterest LinkedIn Tumblr

ಹೆಣ್ಣು ತನ್ನ ಸೌಂದರ್ಯದ ವಿಷಯದಲ್ಲಿ ಮಾತ್ರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಾಲ್ಕು ಜನರಲ್ಲಿ ಎದ್ದುಗಾಣುವಂತಹ ರೂಪ ತನ್ನದಾಗಬೇಕೆಂದು ಬಯಸಿ ಅನಂತರವೂ ಹಲವಾರು ಸೌಂದರ್ಯ ಅನ್ವೇಷಣೆಗಳಲ್ಲಿ ತೊಡಗಿರುತ್ತಾಳೆ. ಮಹಿಳೆಯರು ಮುಖದ ಸೌಂದರ್ಯದ ಕುರಿತು ಹೆಚ್ಚು ಕಾಳಜಿ ವಹಿಸುತ್ತಾರೆ. ಈ ಕಾರಣದಿಂದಾಗಿ ಹೆಚ್ಚಿನ ಮಹಿಳೆಯರು ಅಡುಗೆ ಮನೆಯ ನೈಸರ್ಗಿಕ ಪದಾರ್ಥಗಳ ಪೇಸ್‌ಪ್ಯಾಕ್‌ಗೆ ಆದ್ಯತೆ ನೀಡುತ್ತಾರೆ. ಅಡುಗೆ ಮನೆಯಲ್ಲಿ ನೈಸರ್ಗಿಕವಾಗಿ ದೊರಕುವ ವಸ್ತುವನ್ನು ಉಪಯೋಗಿಸಿ ಫೆಸ್ ಪ್ಯಾಕ್ ಮಾಡುವುದರಿಂದ ತ್ವಚೆಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಅರಿಶಿಣ, ಮುಲ್ತಾನಿಮಿಟ್ಟಿ, ಲಿಂಬೆ ಮುಂತಾದ ವಸ್ತುಗಳ ರೆಡಿಮೇಡ್ ಫೆಸ್ ಪ್ಯಾಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ ಫೆಸ್‌ಪ್ಯಾಕ್ ದೈನಂದಿನ ಬಳಕೆಗೆ ಉತ್ತಮ.

ರಾಸಾಯನಿಕದ ಬಳಕೆ ತ್ವಚೆಯಲ್ಲಿ ತೊಂದರೆ ಉಂಟು ಮಾಡುತ್ತವೆ. ಕುಂಬಳಕಾಯಿ ಫೆಸ್‌ಪ್ಯಾಕ್ ಯಾವುದೇ ರಾಸಾಯನಿಕ ಪದಾರ್ಥವನ್ನು ಒಳಗೊಂಡಿಲ್ಲ. ಜತೆಗೆ ಇದರೊಂದಿಗೆ ಅಡುಗೆ ಮನೆಯಲ್ಲಿ ದೊರಕುವ ಇತರೇ ಪದಾರ್ಥಗಳನ್ನೇ ಬಳಸಿ ಫೆಸ್‌ಪ್ಯಾಕ್ ತಯಾರಿಸಿ ತ್ವಚೆಯ ಸೌಂದರ್ಯವನ್ನು ಕಾಪಾಡಲು ಸಾಧ್ಯ.

ಎಲ್ಲಕ್ಕೂ ಬೇಕು ಸಿಹಿ ಕುಂಬಳಕಾಯಿ:
ಸಿಹಿ ಕುಂಬಳಕಾಯಿ ರಸ ಮತ್ತು ಮಲೈ (ದಪ್ಪವಾದ ಹಾಲಿನ ಪದಾರ್ಥ) ತೆಗೆದುಕೊಂಡು ಮಿಶ್ರಣ ತಯಾರಿಸಬೇಕು. ಇದಕ್ಕೆ ಎರಡು ಟೀ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದು ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ.ಸಿಹಿ ಕುಂಬಳಕಾಯಿ ರಸ ಒಂದು ಟೀ ಚಮಚ ಮತ್ತು ಒಂದು ಟೀ ಚಮಚ ಮೊಟ್ಟೆಯ ಬಿಳಿ ಭಾಗ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ, ಇಪ್ಪತ್ತು ನಿಮಿಷಗಳ ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ.

ಇದು ಮೊಡವೆಯ ನಿಯಂತ್ರಣಕ್ಕೆ ಸಹಕರಿಸುತ್ತದೆ.ಸಿಹಿ ಕುಂಬಳಕಾಯಿ ರಸ ಒಂದು ಟೇಬಲ್ ಚಮಚ, ಇದಕ್ಕೆ ಒಂದು ಟೀ ಚಮಚ ಸೇಬಿನ ಹಣ್ಣಿನ ಪರಿಮಳವಿರುವ ವಿನೇಗರ್ ಅಥವಾ ಲಿಂಬೆ ರಸ. ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬೇಕು. ನಿಂಬೆ ರಸವು ಟೋನರ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಚರ್ಮದಲ್ಲಿ ರಕ್ತ ಸಂಚಾರ ಸುಗಮಗೊಳಿಸಲು ಸಹಕರಿಸುತ್ತದೆ.ಅರ್ಧ ಲೋಟ ಸಿಹಿ ಕುಂಬಳಕಾಯಿ ಪೇಸ್ಟ್‌ಗೆ ಅರ್ಧ ಟೀ ಚಮಚ ಜೇನು ಮತ್ತು ಹಾಲನ್ನು ಸೇರಿಸಿ, ಜತೆಗೆ ಒಂದು ಚಿಟಿಕೆ ದಾಲ್ಚಿನ್ನಿಪುಡಿ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಬೇಕು. ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ಮುಖ ತೊಳೆಯಬೇಕು.

Comments are closed.