ರಾಷ್ಟ್ರೀಯ

ದೇಶದಾದ್ಯಂತ ಭಾರೀ ಮುನ್ನಡೆ ಸಾಧಿಸುತ್ತಿರುವ ಎನ್‌ಡಿಎ; ಏಕಾಂಗಿಯಾಗಿ ಮ್ಯಾಜಿಕ್ ನಂಬರ್ ತಲುಪಿದ ಬಿಜೆಪಿ

Pinterest LinkedIn Tumblr

ಹೊಸದಿಲ್ಲಿ: ದೇಶದ 542 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಇತ್ತೀಚಿನ ಟ್ರೆಂಡ್ ಪ್ರಕಾರ ಎನ್‌ಡಿಎ 340, ಯುಪಿಎ 104 ಹಾಗೂ ಇತರರು 98 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕರ್ನಾಟಕದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ.

ದಿಲ್ಲಿಯ ಎಲ್ಲ 7 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ: ಟ್ರೆಂಡ್‌ಗಳ ಪ್ರಕಾರ ದಿಲ್ಲಿ, ರಾಜಸ್ಥಾನ, ಹರ್ಯಾಣ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್‌- ಈ ಆರು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌

ಪಶ್ಚಿಮ ಬಂಗಾಳದ ಅಸನ್‌ಸೋಲ್‌ ಕ್ಷೇತ್ರದಲ್ಲಿ ಬಿಜೆಪಿಯ ಬಾಬುಲ್ ಸುಪ್ರಿಯೊ ಮುನ್ನಡೆ. ಡೈಮಂಡ್ ಹಾರ್ಬರ್‌ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅಳಿಯನಿಗೆ ಹಿನ್ನಡೆ. ಉತ್ತರ ಪ್ರದೇಶದ ಉನ್ನಾವೊ ಕ್ಷೇತ್ರದಲ್ಲಿ ಬಿಜೆಪಿಯ ಸಾಕ್ಷಿ ಮಹಾರಾಜ್‌ಗೆ 20,000 ಮತಗಳ ಮುನ್ನಡೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ 29 ಕ್ಷೇತ್ರಗಳಲ್ಲಿ ಮುನ್ನಡೆ, ಕಾಂಗ್ರೆಸ್-ಆರ್‌ಜೆಡಿ 9 ಸೀಟುಗಳಲ್ಲಿ ಮುನ್ನಡೆ.

ಕೇರಳದಲ್ಲಿ ಯುಡಿಎಫ್‌ ಮುನ್ನಡೆ. ತಮಿಳುನಾಡಿನ 29 ಕ್ಷೇತ್ರಗಳಲ್ಲಿ ಡಿಎಂಕೆ ಮುನ್ನಡೆ. ಆರಂಭಿಕ ಟ್ರೆಂಡ್‌ ಪ್ರಕಾರ, ತೆಲಂಗಾಣದಲ್ಲಿ ಟಿಆರ್‌ಎಸ್‌ ಹೆಚ್ಚು ಸ್ಥಾನಗಳನ್ನು ಗಳಿಸುವ ನಿರೀಕ್ಷೆ. ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್‌ ಬಹುಮತ ಸಾಧಿಸುವ ಸಾಧ್ಯತೆ ದಟ್ಟವಾಗಿದೆ. ಲೋಕಸಭಾ ಕ್ಷೇತ್ರಗಳಲ್ಲಿ ಜಗನ್ ನೇತೃತ್ವದ ಪಕ್ಷಕ್ಕೆ ಟಿಡಿಪಿ ಪ್ರಬಲ ಪೈಪೋಟಿ ನೀಡುತ್ತಿದೆ.

ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುನ್ನಡೆ. ಗಾಂಧಿನಗರದಲ್ಲಿ ಅಮಿತ್‌ ಶಾ 25,000 ಮತಗಳಿಂದ ಮುನ್ನಡೆ. ಅಮೇಠಿಯಲ್ಲಿ ಸ್ಮೃತಿ ಇರಾನಿ 2,000 ಮತಗಳ ಮುನ್ನಡೆ. ಪಶ್ಚಿಮ ದಿಲ್ಲಿ ಕ್ಷೇತ್ರದಲ್ಲಿ ಬಿಜೆಪಿ 4,000ಕ್ಕೂ ಅಧಿಕ ಮತಗಳ ಮುನ್ನಡೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಮುನ್ನಡೆ.

ತೆಲಂಗಾಣದಲ್ಲಿ ಟಿಆರ್‌ಎಸ್‌ 2, ಬಿಜೆಪಿ 2, ಕಾಂಗ್ರೆಸ್ 1ರಲ್ಲಿ ಮುನ್ನಡೆ. ಗುಜರಾತ್‌ನ 26 ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಮುನ್ನಡೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 18, ಎಸ್‌ಪಿ-ಬಿಎಸ್ಪಿ ಮೈತ್ರಿಕೂಟ 7 ಕ್ಷೇತ್ರಗಳಲ್ಲಿ ಮುನ್ನಡೆ.

Comments are closed.