ಆರೋಗ್ಯ

ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಕುಡಿಸುವುದರಿಂದ ಮಕ್ಕಳಲ್ಲಿ ರಕ್ತಶುದ್ದಿಯಾಗುತ್ತದೆ. 

Pinterest LinkedIn Tumblr

ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.
ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.
ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ. ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.
ಒಂದೇ ಪಾಶ್ರ್ವದಲ್ಲಿ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದಾವರ್ತಿಯಂತೆ ಮೂರು ದಿನಗಳವರೆಗೆ ಮಾಡುವುದು ಅಗತ್ಯ.

ಎಕ್ಕ ಮತ್ತು ನುಗ್ಗೆಯ ಎಲೆಗಳನ್ನು ನುಣ್ಣಗೆ ಅರೆದು ಮೂಲವ್ಯಾಧಿಯಲ್ಲಿ ಕಾಣಿಸಿಕೊಳ್ಳುವ ಮೊಳಕೆಗಳಿಗೆ ಹಚ್ಚಿದರೆ ಅದು ನಾಶವಾಗುತ್ತದೆ.
ಪೆಟ್ಟು ಬಿದ್ದು ಊದಿಕೊಂದಿರುವಾಗ ಹುರಿದ ನುಗ್ಗೆ ಸೊಪ್ಪನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಊದಿಕೊಂಡಿರುವ ಭಾಗಕ್ಕೆ ಬಿಸಿಬಿಸಿಯಾಗಿ ಶಾಖ ಕೊಟ್ಟರೆ, ಊತ ಕಡಿಮೆಯಾಗುತ್ತದೆ ಮತ್ತು ನೋವು ಇಳಿಮುಖವಾಗುತ್ತದೆ.
ನುಗ್ಗೆಸೊಪ್ಪಿನ ರಸದಲ್ಲಿ ಒಂದೆರಡು ಮೆಣಸುಕಾಳು ಅರೆದು ಕಪಾಲಗಲ ಮೇಲೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.
ನುಗ್ಗೆಸೊಪ್ಪಿನೊಂದಿಗೆ ಹೂವನ್ನು ಬಳಸಬಹುದು. ಹೂವನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ ಅದಕ್ಕಿ ಜೇನುತುಪ್ಪ ಸೇರಿಸಿ, ಸೇವಿಸುವುದರಿಂದ ಲೈಂಗಿಕ ಕ್ರಿಯಾಶಕ್ತಿ ಹೆಚ್ಚಾಗುತ್ತದೆ.
ನುಗ್ಗೆಕಾಯಿ ಊಟ ಮಾಡುವುದರಿಂದ ಸಂಧಿವಾತ, ನಿರ್ವೀರ್ಯತೆ, ನರಗಳ ದೌರ್ಬಲ್ಯ ಮಲಬದ್ದತೆ ಇತ್ಯಾದಿ ರೋಗಗಳು ಗುಣವಾಗುತ್ತವೆ.
ಜಂತು ಹುಳುಗಳಿಂದ ಉಂಟಾಗುವ ಹಾನಿಯನ್ನು ನಿವಾರಿಸಲು ನುಗ್ಗೆ ಕಾಯಿಯನ್ನು ಆಗಾಗ್ಗೆ ಊಟದಲ್ಲಿ ಉಪಯೋಗಿಸುವುದು ಲೇಸು.
ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಗುಣಗಳ್ಳುಳ್ಳ ಆರೋಗ್ಯವರ್ಧಕ ತರಕಾರಿ.
ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.
ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.
ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ. ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.

ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.

ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಲು ಕಾರಣವಾಗಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವದಿಂದಲೂ ರಕ್ಷಿಸುತ್ತದೆ.

ನುಗ್ಗೆ ಸೊಪ್ಪು ಸೆವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳಿಸುತ್ತದೆ .

Comments are closed.