ಆರೋಗ್ಯ

50ರ ವರ್ಷಕ್ಕಿಂತಲೂ ಕಡಿಮೆ ಇರುವ ವ್ಯಕ್ತಿಗಳ ಸಾವಿಗೆ ಇದು ಕೂಡ ಪ್ರಮುಖ ಕಾರಣವಂತೆ..!

Pinterest LinkedIn Tumblr

ಭಾರತದಲ್ಲಿ ಹೃದಯಾಘಾತ 50 ವರ್ಷದ ಒಳಗಿನವರಿಗೆ ಹೆಚ್ಚಾಗುತ್ತಿದೆ. ಇಂಥ ಸಾವಿಗೆ ಪಾಮ್ ಆಯಿಲ್ ಅಥವಾ ಖಾದ್ಯ ತಾಳೆ ಎಣ್ಣೆ ಕಾರಣವೆನ್ನಲಾದ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಇದು ಆಲ್ಕೋಹಾಲ್ ಅಥವಾ ಧೂಮಪಾನ ಸೇವನೆಗಿಂತಲೂ ಅತ್ಯಂತ ಅಪಾಯಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಭಾರತವು ವಿಶ್ವದಲ್ಲೇ ಬೃಹತ್ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿರುವ ದೇಶವಾಗಿದೆ. ಇತ್ತೀಚೆಗೆ ಭಾರತದಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ 50ರ ವಯೋಮಾನಕ್ಕಿಂತಲೂ ಕಡಿಮೆ ಇರುವ ವ್ಯಕ್ತಿಗಳ ಸಾವಿಗೆ (ಇಎಂಆರ್‍ಐ ಫಲಿತಾಂಶ) ಇದು ಕೂಡ ಪ್ರಮುಖ ಕಾರಣ ಎಂದು ಔಷಧಿ ತಯಾರಿಕಾ ಸಂಸ್ಥೆಯೊಂದರ ವೈದ್ಯಕೀಯ ನಿರ್ದೇಶಕ ಡಾ.ಶ್ರೀನಿವಾಸ್ ಹೇಳಿದ್ದಾರೆ.

ಇಂದು ನಾವು ಬಳಸುವ ಬಹುತೇಕ ಫಾಸ್ಟ್‍ಫುಡ್‍ಗಳು ತಾಳೆ ಎಣ್ಣೆಯಿಂದಲೇ ತಯಾರಾಗಿರುತ್ತವೆ ಎಂಬುದು ಆತಂಕಕಾರಿ ಸಂಗತಿ. ಎಲ್ಲರೂ ಅದರಲ್ಲಿಯೂ ಮಕ್ಕಳು ಫಾಸ್ಟ್ ಫುಡ್‍ಗಳನ್ನು ಬಹುವಾಗಿ ಇಷ್ಟಪಟ್ಟು ಸೇವಿಸುತ್ತಿದ್ದು, ಭವಿಷ್ಯದಲ್ಲಿ ಅವರು ಹೃದ್ರೋಗ ಮತ್ತು ಹೃದಯಾಘಾತಗಳಿಗೆ ಒಳಗಾಗುವ ಗಂಡಾಂತರವೂ ಇದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಬಿಸ್ಕತ್ ಮತ್ತು ಚಾಕೋಲೆಟ್‍ಗಳಲ್ಲೂ ತಾಳೆ ಎಣ್ಣೆಯ ಉಪ ಉತ್ಪನ್ನ ಪಾಲ್ಮಿಟಿಕ್ ಆಮ್ಲವನ್ನೂ ಬಳಸುತ್ತಿವೆ ಎನ್ನುತ್ತಾರೆ ಡಾ.ಶ್ರೀನಿವಾಸ್. ಅನೇಕ ಕಂಪನಿಗಳು ತಮ್ಮ ಕುರುಕಲು ತಿಂಡಿಗಳಲ್ಲಿ ಪಾಮ್ ಆಯಿಲ್‍ನನ್ನು ಬಳಸುತ್ತಿವೆ. ವಿದೇಶಗಳಲ್ಲಿನ ತಮ್ಮ ಬ್ರಾಂಡ್‍ಗಾಗಿ ಉತ್ತಮ ಖಾದ್ಯ ತೈಲವನ್ನು ಬಳಸುತ್ತಿದ್ದರೂ, ಭಾರತದಲ್ಲಿ ಕಡಿಮೆ ಬೆಲೆಯ ತಾಳೆ ಎಣ್ಣೆಯನ್ನು ಉಪಯೋಗಿಸುತ್ತಿವೆ ಇದು ಮಕ್ಕಳು ಮತ್ತು ದೊಡ್ಡವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ತಜ್ಞರು ಆತಂಕದಿಂದ ನುಡಿದಿದ್ದಾರೆ. ಈ ಎಣ್ಣೆಯಲ್ಲಿನ ಹಾನಿಕಾರಕ ರಾಸಾಯನಿಕ ಅಂಶಗಳು ಮೆದುಳು, ಮತ್ತು ಹೃದಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತವೆ. ಚಿಕ್ಕವಯಸ್ಸಿನಲ್ಲೇ ಮಧುಮೇಹ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದರಿಂದ ಅಧಿಕವಾಗಿರುತ್ತದೆ ಎಂದು ಅವರು ಹೇಳಿದ್ದಾರೆ

# ಫಾಮ್ ಆಯಿಲ್ ಮಾಫಿಯಾ:
ಭಾರತದಲ್ಲಿ ಪಾಮ್ ಆಯಿಲ್ ಮಾಫಿಯಾ ಬಹಳ ಆಳವಾಗಿ ಬೇರೂರುತ್ತಿದೆ. ಅಗ್ಗದ ದರದಲ್ಲಿ ಇವು ಲಭಿಸುತ್ತಿರುವುದರಿಂದ ಫಾಸ್ಟ್ ಫುಡ್ ತಯಾರಿಕಾ ಮಳಿಗೆಗಳು ಮತ್ತು ಕೆಲವು ಸಂಸ್ಥೆಗಳು ತಮ್ಮ ಉತ್ಪನ್ನದಲ್ಲಿ ಇದನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇದೇ ವೇಳೆ ಇಂದಿನ ವೇಗದ ಬದುಕಿನಲ್ಲಿ ಬಹುತೇಕ ಮಂದಿ ಫಾಸ್ಟ್ ಫುಡ್‍ಗಳಿಗೆ ಮೊರೆ ಹೋಗುತ್ತಿದ್ದು, ಹಣ್ಣು ಮತ್ತು ತರಕಾರಿಗಳಿಂದ ದೂರವಾಗುತ್ತಿದ್ದಾರೆ. ಈ ಆಧುನಿಕ ಶೈಲಿಯಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸಮಸ್ಯೆಗಳು ಜನರ ಮೇಲೆ ಅಮರಿಕೊಳ್ಳುತ್ತಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Comments are closed.