ಕರ್ನಾಟಕ

ಡ್ರಾಪ್ ಕೇಳಿದ ಸೇಲ್ಸ್‌ಗರ್ಲ್‌ಗೆ ವ್ಯಕ್ತಿಯೋರ್ವ ಮಾಡಿದ ಘನಂದಾರಿ ಕೆಲಸವೇನು…?

Pinterest LinkedIn Tumblr

ಹೊಸಕೋಟೆ: ತನ್ನ ಹೊಟ್ಟೆ ಪಾಡಿಗಾಗಿ ವಸ್ತುಗಳನ್ನು ಮಾರಾಟ ಮಾಡಲು ಗ್ರಾಮವೊಂದಕ್ಕೆ ತೆರಳಿದ್ದ ಸೇಲ್ಸ್ ಗರ್ಲ್ ಸಂಜೆಯಾದ ಬಳಿಕ ಮನೆಗೆ ಹೋಗುವ ಸಂದರ್ಭದಲ್ಲಿ ವ್ಯಕ್ತಿಯೋರ್ವನ ಬಳಿ ಡ್ರಾಪ್ ಕೇಳಿ ತನ್ನ ಮಾನಕ್ಕೆ ಕುತ್ತು ತಂದುಕೊಳ್ಳುತ್ತಿದ್ದಳು. ಈ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರದ ಬೈಲನರಸಾಪುರಕ್ಕೆ ವಸ್ತುಗಳನ್ನು ಮಾರಾಟ ಮಾಡಲು ಸೇಲ್ಸ್‌ಗರ್ಲ್‌ ಬಂದಿರುತ್ತಾಳೆ. ನಂತರ ಸಂಜೆ ಸೇಲ್ಸ್‌ಗರ್ಲ್‌ ಬಸ್ ಗಾಗಿ ಕಾಯುತ್ತಿದ್ದಳು. ಎಷ್ಟೋತ್ತಾದರೂ ಬಸ್ ಬರದೆ ಇದ್ದಿದ್ದರಿಂದ ಹೆದರಿದ ಸೇಲ್ಸ್‌ಗರ್ಲ್‌ 40 ವರ್ಷದ ರಮೇಶ್ ಎಂಬಾತನ ಬಳಿ ಮುಖ್ಯರಸ್ತೆವರೆಗೂ ಡ್ರಾಪ್ ಕೊಡುವಂತೆ ಕೇಳುತ್ತಾಳೆ.

ಈ ವೇಳೆ ಬೈಕ್ ನಲ್ಲಿ ಹತ್ತಿಸಿಕೊಂಡ ರಮೇಶ್ ಶಾರ್ಟ್ ಕಟ್ ನಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿ ತಮ್ಮ ತೋಟದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯ ಕುತ್ತಿಗೆ ಮೇಲೆ ಕುಡಗೋಲನ್ನು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಧೈರ್ಯ ತೋರಿದ ಯುವತಿ ಆತನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ.

ನಂತರ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗುತ್ತಾಳೆ. ಬಳಿಕ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾಳೆ. ಯುವತಿ ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿ ರಮೇಶ್ ನನ್ನು ಬಂಧಿಸಿದ್ದಾರೆ.

Comments are closed.