ಆರೋಗ್ಯ

ಕಾಂಡೋಮ್ ಅಲ್ಲದೆ ಗರ್ಭ ತಡೆಗೆ ಇರುವ ಈ 4 ವಿಧಾನಗಳನ್ನು ತಿಳಿದುಕೊಳ್ಳಿ….!

Pinterest LinkedIn Tumblr

ಜನಸಂಖ್ಯಾ ಸ್ಫೋಟ ಎಂಬ ಸಮಸ್ಯೆ ತಡೆಯಲು ಒಂದು ಕಾಲದಲ್ಲಿ ಭಾರತ ಪಟ್ಟಿದ್ದ ಪ್ರಯತ್ನಗಳು ಒಂದೆರಡಲ್ಲ. ನಿಧಾನವಾಗಿ ಜನರಲ್ಲಿ ಜಾಗೃತಿ ಮೂಡಿ ಜನನ ಪ್ರಮಾಣ ನಿಯಂತ್ರಣಕ್ಕೆ ಬಂತು. ಆದರೆ ಆ ವೇಳೆಗಾಗಲೆ ದೇಶದ ಜನಸಂಖ್ಯೆ 100ಕೋಟಿ ಸಮೀಪಕ್ಕೆ ಬಂದು ಬಿಟ್ಟಿತ್ತು. ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂದರೆ ಇಂದು ವಿಶ್ವಗರ್ಭನಿರೋಧಕ ದಿನ. ಬೇಡದ ಗರ್ಭ ತಡೆಗೆ ಬಳಸುವ ವಿಧಾನಗಳು ಯಾವವು?

ಭಾರತದ ಶೇ. 47.8 ರಷ್ಟು ಮಹಿಳೆಯರು ಗರ್ಭ ನಿರೋಧಕ ವಿಧಾನದ ಬಗ್ಗೆ ತಿಳಿದಿದ್ದಾರೆ. ಇನ್ನುಳಿದವರಿಗೆ ಈ ಬಗ್ಗೆ ತಿಳಿವಳಿಕೆ ಇಲ್ಲ ಎಂದು ಸಮೀಕ್ಷೆಗಳು ಹೇಳುತ್ತವೆ. ಹಾಗಾದರೆ ಗರ್ಭ ತಡೆಗೆ ಇರುವ ಮಾರ್ಗಗಳು ಯಾವವು?

1.ಮಾತ್ರೆ: ಗರ್ಭನಿರೋಧಕ ಮಾತ್ರೆಗಳು ವಿವಿಧ ಹೆಸರಿನಲ್ಲಿ ಮಾರುಕಟ್ಟೆಯಲ್ಲಿವೆ. ಮಹಿಳೆಯರ ಹಾರ್ಮೋನ್ ಮೇಲೆ ಪರಿಣಾಮ ಬೀರುವ ಇದು ಬೇಡದ ಗರ್ಭ ತಡೆಯುತ್ತದೆ. ಆದರೆ ಇದರ ಸೈಡ್ ಎಫೆಕ್ಟ್ ಅನುಭವಿಸಲು ಮಹಿಳೆಯರು ಸಿದ್ಧರಾಗಿರಬೇಕು.

2. ವಂಕಿ: ಇದೊಂದು ರೀತಿಯ ರಿಂಗ್ ನಂತೆ ಇದ್ದು ಮಹಿಳೆಯರ ಯೋನಿಯೊಳಗೆ ವೈದ್ಯರ ಮೂಲಕವೇ ಇನ್ ಸರ್ಟ್ ಮಾಡಲಾಗುತ್ತದೆ. ಇಲ್ಲಿ ಸೈಡ್ ಎಫೆಕ್ಟ್ ಗೆ ಜಾಗ ಇಲ್ಲ.

3. ಚುಚ್ಚುಮದ್ದು: ಕೆಲ ತಿಂಗಳು ಪ್ರಭಾವ ಬೀರುವಂತಹ ಅಂದರೆ ಗರ್ಭ ತಡೆಯುವಂತಹ ಚುಚ್ಚುಮದ್ದುಗಳನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಮಾತ್ರೆಗೆ ಹೋಲಿಸಿದರೆ ಇದು ಉತ್ತಮ ಎಂಬುದು ವೈದ್ಯರ ಅಭಿಪ್ರಾಯ

4. ಕಾಪರ್ ಟಿ: ಆಂಗ್ಲ ಭಾಷೆಯ ಟಿ ಆಕಾರದ ವಸ್ತುವೊಂದನ್ನು ಮಹಿಳೆಯರ ಗರ್ಭಾಶಯದ ಸಮೀಪ ಇನ್ ಸರ್ಟ್ ಮಾಡಲಾಗುತ್ತದೆ. 12 ವರ್ಷಗಳ ಕಾಲ ಬೇಡದ ಗರ್ಭ ತಡೆಯುವ ಶಕ್ತಿ ಇವು ಹೊಂದಿವೆ.

Comments are closed.