ಮಂಗಳೂರು : ಗೋವಾದಲ್ಲಿ ಇತ್ತೀಚಿಗೆ ಜರಗಿದ ಬುಡಾಕಾನ್ ಕರಾಟೆ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್ -2019ರಲ್ಲಿ ಮಂಗಳೂರಿನ ಜಿಸಲ್ ಪರ್ಲ್ ವಾಸ್ ಅವರು 12ರಿಂದ 14ವರ್ಷದ ವೈಯಕ್ತಿಕ ‘ಕಟ’ ವಿಭಾಗದಲ್ಲಿ ಚಿನ್ನದ ಪದಕ ಮತ್ತು 40ರಿಂದ 45 ಕೆ.ಜಿ.ಯವರೆಗಿನ ವೈಯಕ್ತಿಕ ‘ಕಮಿಟಿ’ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಮಂಗಳೂರಿನ ಲೇಡಿಹಿಲ್ ವಿಕ್ಟೋರಿಯ ಹೈಸ್ಕೂಲ್‌ನ ವಿದ್ಯಾರ್ಥಿನಿಯಾಗಿರುವ ಇವರು ಮಂಗಳೂರು ಬಿಜೈ ಕಾಪಿಕಾಡ್ ಬಾರೆಬೈಲ್‌ನ ಗೋಡ್ವಿನ್ ವಾಸ್ ಹಾಗೂ ಪ್ರೀಯಾ ವಾಸ್ ದಂಪತಿಗಳ ಪುತ್ರಿ. ಇವರು ಕರಾಟೆ ತರಬೇತಿಯ ಶಿಕ್ಷಕರಾದ ಪ್ರತೀಕ್ ಹಾಗೂ ರಂಜಿತ ಇವರಿಂದ ತರಬೇತಿ ಪಡೆದಿರುತ್ತಾರೆ.
_Sathish Kapikad
Comments are closed.