ರಾಷ್ಟ್ರೀಯ

ಗ್ಲಾಮರ್ ಆಗಿ ಕಾಣಿಸಿಕೊಂಡ ಮತಗಟ್ಟೆ ಅಧಿಕಾರಿಗೆ ನೆಟಿಗರು ಫಿದಾ ! ಈಕೆಗಾಗಿ ಶೋಧ ನಡೆಸಿದ ನೆಟ್ಟಿಗರು !

Pinterest LinkedIn Tumblr

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಇತ್ತೀಚೆಗೆ ದಿನಬೆಳಗಾಗುವುದರಲ್ಲೇ ಸ್ಟಾರ್ ಆಗಿಬಿಡುತ್ತಾರೆ. ಇನ್ನು ಮತಗಟ್ಟೆ ಅಧಿಕಾರಿಯೊಬ್ಬರು ಹಳದಿ ಸೀರೆಯಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದು ನೆಟಿಗರು ಫಿದಾ ಆಗಿದ್ದಾರೆ.

ಭಾರತದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು 5ನೇ ಹಂತದ ಮತದಾನದ ವೇಳೆ ಹಳದಿ ಸೀರೆಯುಟ್ಟ ಮಹಿಳೆಯೊಬ್ಬುರ ಕೈಯಲ್ಲಿ ಮತಪೆಟ್ಟಿಗೆ ಸಾಮಗ್ರಿ ಹಿಡಿದು ಮತಗಟ್ಟೆಯತ್ತ ಹೆಜ್ಜೆ ಹಾಕುತ್ತ ಬಂದಿದ್ದರು. ಈ ಮತಗಟ್ಟೆ ಅಧಿಕಾರಿಗೆ ನೆಟಿಗರು ಫಿದಾ ಆಗಿದ್ದು ಆಕೆ ಯಾರೆಂದು ಸಾಮಾಜಿಕ ಜಾಲತಾಣದಲ್ಲಿ ಶೋಧ ನಡೆಸುತ್ತಿದ್ದಾರೆ.

ರಾಜಸ್ಥಾನ ಜೈಪುರದಲ್ಲಿ ನಡೆದ ಐದನೇ ಹಂತದ ಚುನಾವಣೆ ವೇಳೆ ಕುಮಾವತ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿ ಹೆಸರು ನಳಿನಿ ಸಿಂಗ್. ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಳಿನಿ ಜೈಪುರ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಆಕೆಯನ್ನು ನೋಡಿ ಕಣ್ತುಂಬಿಕೊಂಡ ಮತದಾರರು ಇನ್ನು ಮುಂದೆ ಮತಗಟ್ಟೆಗಳಲ್ಲಿ ಸುಂದರ ಮಹಿಳೆಯರನ್ನು ನೇಮಿಸಬೇಕು ಎಂಬ ಬೇಡಿಕೆಗಳು ಇದೀಗ ಹೆಚ್ಚಾಗಿವೆ.

Comments are closed.