ಗರ್ಭಧಾರಣೆಯ ಅವಧಿಯಲ್ಲಿ, ಬೆಳೆಯುತ್ತಿರುವ ಭ್ರೂಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆವಶ್ಯಕ ಹಾರ್ಮೋನ್‌ಗಳನ್ನು ಪೂರೈಸಲು, ಥೈರಾಯಿಡ್ ಗ್ರಂಥಿಯ ಗಾತ್ರ ಮತ್ತು ಚಟುವಟಿಕೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ ಥೈರಾಯಿಡ್ ಗ್ರಂಥಿ ಎನ್ನುವುದು ಕುತ್ತಿಗೆಯ ಮಧ್ಯೆ ಭಾಗದಲ್ಲಿ, ಧ್ವನಿ ಪೆಟ್ಟಿಗೆಯ ಕೆಳಭಾಗದಲ್ಲಿ ಇರುವ ಚಿಟ್ಟೆಯ ಆಕಾರದ ಗ್ರಂಥಿ. ಥೈರಾಯಿಡ್ ಗ್ರಂಥಿಯು, ಟ್ರೆಅಯೋಡೋಥೈ ರೋನೈನ್ ಮತ್ತು ಥೈರಾಕ್ಸಿನ್ ಎಂಬ ಎರಡು ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ, ಮತ್ತು ಇದು ದೇಹವು ಶಕ್ತಿಯನ್ನು ಬಳಸಿಕೊಳ್ಳುವ ಮತ್ತು ಸಂಗ್ರಹಿಸುವ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ.
ಮೆದುಳಿನಲ್ಲಿ ಇರುವ ಪಿಟ್ಯುಟರಿ ಗ್ರಂಥಿಯು ಥೈರಾಯಿಡ್ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಪಿಟ್ಯುಟರಿ ಗ್ರಂಥಿಯು ಥೈರಾಯಿಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ, ಇದು ಖ3 ಮತ್ತು ಖ4 ಅನ್ನು ಉತ್ಪಾದಿಸಲು ಥೈರಾಯಿಡ್ ಗ್ರಂಥಿಯನ್ನು ಪ್ರಚೋದಿಸುತ್ತದೆ.
ಥೈರಾಯಿಡ್ ಗರ್ಭಧಾರಣೆಯ ಅವಧಿಯಲ್ಲಿಯೇ ಯಾಕೆ ಆಗುತ್ತದೆ:
ಥೈರಾಯಿಡ್ ಹಾರ್ಮೋನ್ ಉತ್ಪಾದನೆಗೆ ಅಯೋಡಿನ್ ಆವಶ್ಯಕವಾಗಿದ್ದು, ಇದರ ದೈನಂದಿನ ಆವಶ್ಯಕತೆಯು ಸುಮಾರು 50% ನಷ್ಟು ಹೆಚ್ಚಾಗುತ್ತದೆ. ಬಹಳ ಮುಖ್ಯ ಅಂಶ ಅಂದರೆ, ಗರ್ಭಧಾರಣೆ ಅನ್ನುವುದು ಥೈರಾಯಿಡ್ ಗ್ರಂಥಿಗೆ ಒತ್ತಡದ ಪರೀಕ್ಷೆ ಇದ್ದಂತೆ. ಹಾಗಾಗಿ, ಇದು ಕೆಲವು ಮಹಿಳೆಯರಲ್ಲಿ ಥೈರಾಯಿಡ್ ಕಾರ್ಯನ್ಯೂನತೆಯನ್ನು ಉಂಟು ಮಾಡುತ್ತದೆ. ಅಯೋಡಿನ್ ಕೊರತೆ ಇರುವ ಮಹಿಳೆಯರಲ್ಲಿ, ಗರ್ಭಧಾರಣೆಯ ಆರಂಭದ ಮೂರು ತಿಂಗಳುಗಳಲ್ಲಿ ಥೈರಾಯಿಡ್ ಚಟುವಟಿಕೆ ಸಹಜ ಆಗಿದ್ದರೂ ಸಹ, ಈ ಮನೋದೈಹಿಕ ಬದಲಾವಣೆಗಳ ಕಾರಣದಿಂದಾಗಿ ಗರ್ಭಧಾರಣೆಯ ಮುಂದಿನ ಹಂತಗಳಲ್ಲಿ ಹೈಪೋಥೈರಾಯಿಡಿಸಂ ಕಾಣಿಸಿಕೊಳ್ಳಬಹುದು.
ಗರ್ಭಧಾರಣೆಯ ಅವಧಿಯಲ್ಲಿ ನಡೆಸಲಾಗುವ ಥೈರಾಯಿಡ್ ಚಟುವಟಿಕೆಯ ಪರೀಕ್ಷೆಗಳು ಭಿನ್ನವಾಗಿರುತ್ತವೆ. UTF ಮತ್ತು U4 ಎನ್ನುವುದು ಸಾಮಾನ್ಯವಾಗಿ ನಡೆಸಲಾಗುವ ಪರೀಕ್ಷೆಗಳು. 9 ತಿಂಗಳುಗಳ ಗರ್ಭಧಾರಣಾ ಅವಧಿಯನ್ನು 3 ತಿಂಗಳಂತೆ 3 ತ್ರೈಮಾಸಿಕಗಳಾಗಿ ವಿಂಗಡಿಸಲಾಗುತ್ತದೆ.
ಗರ್ಭಧಾರಣೆಯ ಅವಧಿಯಲ್ಲಿ ಈ ಮೌಲ್ಯಗಳು, ಬೆಳೆಯುತ್ತಿರುವ ಭ್ರೂಣದ ಆವಶ್ಯಕತೆ ಮತ್ತು ತಾಯಿಯ ಆವಶ್ಯಕತೆಗೆ ತಕ್ಕ ಹಾಗೆ ಪ್ರತೀ ತ್ರೆ„ಮಾಸಿಕಕ್ಕೂ ಬದಲಾಗುತ್ತವೆ. 6-8 ವಾರಗಳು ಆರಂಭವಾಗುತ್ತಿದ್ದಂತೆಯೇ, ರಕ್ತಪರಿಚಲನೆಯಲ್ಲಿ T4 ಮಟ್ಟ ಏರಿದ ಹಾಗೆಲ್ಲಾ ಸೀರಮ್ ಮಟ್ಟವು ಕುಸಿಯುತ್ತದೆ. ಹಿರಿಯರಲ್ಲಿ ಸಾಮಾನ್ಯವಾಗಿ TSH ಮಟ್ಟವು 0.5 ರಿಂದ 5.0 mlU/L ನಷ್ಟು ಇರುತ್ತದೆ. ಗರ್ಭಧಾರಣೆಯ ಉದ್ದಕ್ಕೂ TSH ನ ಸಹಜ ಮಟ್ಟವು ಕುಸಿದಿರುತ್ತದೆ. ಹಾಗಾಗಿ, ಥೈರಾಯಿಡ್‌ನ ಕಾರ್ಯನ್ಯೂನತೆಯನ್ನು ಗುರುತಿಸಲು ತ್ರೆ„ಮಾಸಿಕಕ್ಕೆ-ನಿರ್ದಿಷ್ಟವೆನಿಸುವ ಕ್ರಮಾಂಕಗಳನ್ನು ಗಮನಿಸಬೇಕಾಗುತ್ತದೆ.
ಸಾಮಾನ್ಯವಾಗಿ, ಗರ್ಭಧಾರಣೆಯ 2%-3% ಪ್ರಕರಣಗಳಲ್ಲಿ ಹೈಪೋಥೈರಾಯಿಡಿಸಂ (ಥೈರಾಯಿಡ್ ಚಟುವಟಿಕೆಯು ಕಡಿಮೆ ಯಾಗುವುದು) ಕಾಣಿಸಿಕೊಳ್ಳುತ್ತದೆ. ಹೈಪರ್‌ಥೈರಾಯಿಡಿಸಂ (ಥೈರಾಯಿಡ್ ಚಟುವಟಿಕೆಯು ಹೆಚ್ಚಾಗುವುದು) ಬಹಳ ಅಪರೂಪ ವಾಗಿದ್ದು, ಸುಮಾರು ಗರ್ಭಿಣಿ 0.1%-0.4% ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು.
ಹೈಪೋಥೈರಾಯಿಡಿಸಂಗೆ ಇರುವ ಬಹಳ ಪ್ರಮುಖ ಕಾರಣ ಅಂದರೆ ಅಟೋಇಮ್ಯೂನ್ ಥೈರಾಯಿಡ್ ಕಾಯಿಲೆ. ಇವರಲ್ಲಿ ಕ್ಲಿನಿಕಲ್ ಹೈಪೋಥೈರಾಯಿಡಿಸಂ ಹೊಂದಿರುವ 50% ನಷ್ಟು ಗರ್ಭಿಣಿ ಮಹಿಳೆಯರಲ್ಲಿ ಮತ್ತು ನಿಚ್ಚಳ ಹೈಪೋಥೈರಾಯಿಡಿಸಂ ಇರುವ 80% ಮಹಿಳೆಯರಲ್ಲಿ ಅಟೋ-ಆಂಟಿಬಾಡಿಗಳು ಪತ್ತೆಯಾಗಿರುತ್ತವೆ.
ಥೈರಾಯಿಡ್‌ನಿಂದ ಗರ್ಭೀಣಿ ಮಹಿಳೆಗೆ ಅಗುವ ತೊಂದರೆಗಳು :
ಗರ್ಭಧಾರಣೆಯ ಅವಧಿಯ ಹೈಪೋಥೈರಾಯಿಡಿಸಂ ಹಾಗೂ ಗರ್ಭಧಾರಣೆಯ ವೇಳೆಯ ಅಪಾಯಗಳು ಹೆಚ್ಚು – ಅವಧಿ ಪೂರ್ವ ಹೆರಿಗೆ, ಕಡಿಮೆ ತೂಕದ ಶಿಶು ಜನನ, ಗರ್ಭಪಾತ, ಭ್ರೂಣ ನಾಶ, ಗರ್ಭಧಾರಣಾ ಅವಧಿಯ ಅಧಿಕ ರಕ್ತದೊತ್ತಡ, ಭ್ರೂಣದಲ್ಲಿನ ಶಿಶುವಿನ ಮರಣ ಮತ್ತು ಭ್ರೂಣದ ನರ ಮತ್ತು ಗ್ರಹಣ ಸಾಮರ್ಥ್ಯದ ಬೆಳವಣಿಗೆಯ ನ್ಯೂನತೆಗಳು ಕಂಡುಬರುವ ಸಾಧ್ಯತೆ ಹೆಚ್ಚು.
ಸಬ್-ಕ್ಲಿನಿಕಲ್ ಹೈಪೋಥೈರಾಯಿಡಿಸಂಗೂ ಮತ್ತು ಬೆಳೆಯುತ್ತಿರುವ ಭ್ರೂಣದ ನರ ಮತ್ತು ಗ್ರಹಣ ಶಕ್ತಿಗೆ ಸಂಬಂಧಿಸಿದ ನ್ಯೂನತೆಗಳ ಸಾಧ್ಯತೆಗಳಿಗೂ ಸಂಬಂಧವಿದೆ, ಆಂಟಿ-ಥೈರಾಯಿಡ್ ಪರಾಕ್ಸಿಡೇಸ್ ಆಂಟಿಬಾಡಿ ಪಾಸಿಟಿವ್ ಇರುವ ಮಹಿಳೆಯರಲ್ಲಿ ಈ ಸಾಧ್ಯತೆ ಇನ್ನೂ ವಿಶೇಷವಾಗಿರುತ್ತದೆ.
ಸ್ಪಷ್ಟ ಹೈಪೋಥೈರಾಯಿಡಿಸಂಗೆ ಗರ್ಭಧಾರಣೆಯ ಸಂದರ್ಭದಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಆಂಟಿ-ಥೈರಾಯಿಡ್ ಪರಾಕ್ಸಿಡೇಸ್ ಆಂಟಿಬಾಡಿ ಪಾಸಿಟಿವ್ ಇರುವ ಮಹಿಳೆಯರು ಮತ್ತು ಸಬ್ ಕ್ಲಿನಿಕಲ್ ಹೈಪೋಥೈರಾಯಿಡಿಸಂ ಇರುವ ಮಹಿಳೆಯರಿಗೂ ಚಿಕಿತ್ಸೆ ನೀಡಬೇಕಾಗುತ್ತದೆ.
ತಾಯಿಯ ಹೈಪೋಥೈರಾಯಿಡಿಸಂಗೆ ಶಿಫಾರಸು ಮಾಡಲಾದ ಚಿಕಿತ್ಸೆ ಅಂದರೆ, ಬಾಯಿಯ ಮೂಲಕ ನೀಡಲಾಗುವ U4 ಅಂದರೆ IU4 (ಲೆವೋಥೈರಾಕ್ಸಿನ್). ಲೆವೋಥೈರಾಕ್ಸಿನ್‌ನ ಮುಖ್ಯ ಗುರಿ, ಗರ್ಭಧಾರಣೆಯ ತ್ರೆ„ಮಾಸಿಕ ಅವಧಿಗೆ ನಿರ್ದಿಷ್ಟವಾದ ತಾಯಿಯ ಶರೀರದ ಸೀರಮ್ UTF ಅಂಶವನ್ನು ಸಹಜಗೊಳಿಸುವುದು. ಥೈರಾಯಿಡ್ ತೊಂದರೆ ಇರುವ ಮಹಿಳೆಯರಲ್ಲಿ, ಅವರ ಗರ್ಭಧಾರಣೆಯ ಅವಧಿಯಲ್ಲಿ UTF ಮೌಲ್ಯವನ್ನು ಉಪಯೊಗಿಸಿಕೊಂಡು, ನಿಯಮಿತ ಕಾಲಾವಧಿಯಲ್ಲಿ ಥೈರಾಯಿಡ್ ಹಾರ್ಮೋನ್ ಅನ್ನು ಸರಿ ಹೊಂದಿಸಿಕೊಳ್ಳಬೇಕಾಗುತ್ತದೆ.
ಡೋಸ್‌ನಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲು 24 ವಾರಗಳವರೆಗೆ ಪ್ರತೀ 4 ವಾರಗಳಿಗೊಮ್ಮೆ ಥೈರಾಯಿಡ್ ಚಟುವಟಿಕೆಯ ವಿಶ್ಲೇಷಣೆಯನ್ನು ಮಾಡಬೇಕು.
ಹೆರಿಗೆಯಾದ ಅನಂತರ, ಲೆವೋಥೈರಾಕ್ಸಿನ್ ಡೋಸಿಂಗ್ ಅನ್ನು ಗರ್ಭಧಾರಣೆಯ ಅವಧಿಯ ಮಟ್ಟಕ್ಕೆ ಇಳಿಸಬೇಕು ಮತ್ತು 6 ವಾರಗಳ ಅನಂತರ ಸೀರಮ್ ಖೀಖಊಅನ್ನು ವಿಶ್ಲೇಷಣೆ ಮಾಡಬೇಕು.
ಸಾಮಾನ್ಯ ಮಹಿಳೆಯರಲ್ಲಿ, ಯಾರು ಲೆವೋಥೈರಾಕ್ಸಿನ್‌ನ್ನು ಸೇವಿಸುತ್ತಿಲ್ಲವೋ ಅವರು ಮತ್ತು ಆಂಟಿ-ಥೈರಾಯಿಡ್ ಪರಾಕ್ಸಿಡೇಸ್ ಆಂಟಿಬಾಡಿ ಪಾಸಿಟಿವ್ ಆಗಿರುವವರು, ತಮ್ಮ ಗರ್ಭಧಾರಣಾ ಅವಧಿಯಲ್ಲಿ ಹೈಪೋಥೈರಾಯಿಡಿಸಂ ನಿಗಾವಣೆಯಲ್ಲಿ ಇರಬೇಕು. ಆಂಟಿ-ಥೈರಾಯಿಡ್ ಪರಾಕ್ಸಿಡೇಸ್ ಆಂಟಿಬಾಡಿ ಪಾಸಿಟಿವ್ ಆಗಿರುವುದೆಂದರೆ ಅದು ಗರ್ಭಸ್ರಾವ, ಅವಧಿಪೂರ್ವ ಹೆರಿಗೆ, ಗರ್ಭದಲ್ಲೇ ಶಿಶು ಮರಣ, ಹೆರಿಗೆಯ ನಂತರದ ಕಾರ್ಯವೈಫಲ್ಯ ಮತ್ತು ಮಗುವಿನ ಚಲನೆ ಹಾಗೂ ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳುವಿಕೆಯಂತಹ ಅಪಾಯಕಾರಿ ಅಂಶಗಳನ್ನು ಒಳಗೊಂಡಿರುವ ಒಂದು ಪರಿಸ್ಥಿತಿ ಎಂಬುದನ್ನು ವಿವರಿಸುತ್ತದೆ.
ಗರ್ಭಧಾರಣಾ ಅವಧಿಯ ಹೈಪರ್‌ಥೈರಾಯಿಡಿಸಂ: ಹೈಪರ್‌ಥೈರಾಯಿಡಿಸಂ ಅಂದರೆ ಹೈಪರ್‌ವೆುಟಬಾಲಿಸಂ ಮತ್ತು U4 ಮತ್ತು U3ಗಳ ಸಾಂದ್ರತೆ ಹೆಚ್ಚಾಗಿರುವ ಕಾರಣದ ಪರಿಣಾಮದಿಂದ ಉಂಟಾದ ಅತಿಸಕ್ರಿಯತೆಯ ಲಕ್ಷಣಗಳ ಕಾಯಿಲೆ. ಗರ್ಭಧಾರಣಾ ಅವಧಿಯಲ್ಲಿ ಹೈಪರ್‌ಥೈರಾಯಿಡಿಸಂ ಕಂಡುಬರಲು ಇರುವ ಬಹಳ ಮುಖ್ಯ ಕಾರಣ ಅಂದರೆ, ಗ್ರೇವ್ಸ್ ಕಾಯಿಲೆ. ಇದು ಗರ್ಭಧಾರಣಾ ಅವಧಿಯಲ್ಲಿ ಮೊದಲ ಬಾರಿಗೆ ಪತ್ತೆಯಾಗಬಹುದು, ಇದು ಹಿಂದೆ ಇದ್ದ ಹೈಪರ್‌ಥೈರಾಯಿಡಿಸಂ ಹಿನ್ನೆಲೆಯ ಕಾರಣದಿಂದಾಗಿ ಮತ್ತೆ ಕಾಣಿಸಿಕೊಂಡಿರಬಹುದು.
ಥೈರೋಟಾಕ್ಸಿಕೋಸಿಸ್ ಕಾಣಿಸಿಕೊಳ್ಳಲು ಇರುವ ಅಪರೂಪದ ಕಾರಣ ಅಂದರೆ ಮಲ್ಟಿನೋಡ್ಯುಲಾರ್ ಗಾಯಟರ್ ಮತ್ತು ಟಾಕ್ಸಿಕ್ ಅಡೆನೋಮಾ. ಸುಮಾರು 1%-3% ಗರ್ಭಧಾರಣೆಗಳಲ್ಲಿ, ಗರ್ಭಧಾರಣಾ ಅವಧಿಯ ಹೈಪರ್ಥೈರಾಯಿಡಿಸಂ ಆಗಾಗ ಕಾಣಿಸಿಕೊಳ್ಳುತ್ತದೆ, ಇದು ಅಲ್ಪಕಾಲಿಕ ಹೈಪರ್‌ಥೈರಾಯಿಡಿಸಂ ಆಗಿದ್ದು, ಗರ್ಭಧಾರಣೆಯ ಮೊದಲ ಅರ್ಧದ ಅವಧಿಗೆ ಸೀಮಿತವಾಗಿರುತ್ತದೆ, ಏರಿಸುವ ಮತ್ತು ಖೀಖಊ ತಗ್ಗಿರುವ ಲಕ್ಷಣವನ್ನು ಹೊಂದಿರುತ್ತದೆ.
ಚಿಕಿತ್ಸೆ ನೀಡದ ಥೈರೋಟಾಕ್ಸಿಕೋಸಿಸ್‌ಗೂ- ಗರ್ಭಸ್ರಾವ, ಗರ್ಭಧಾರಣೆಯ ರಕ್ತದೊತ್ತಡ, ಅವಧಿಪೂರ್ವ ಹೆರಿಗೆ, ಕಡಿಮೆ ತೂಕದ ಶಿಶು ಜನನ, ಗರ್ಭದಲ್ಲಿ ಶಿಶುವಿನ ಬೆಳವಣಿಗೆ ಕುಂಠಿತಗೊಳ್ಳುವುದು, ಮಗುವು ಸತ್ತು ಹೊರಬರುವುದು (ಸ್ಟಿಲ್ ಬರ್ತ್), ಥೈರಾಯ್ಡ ಸ್ಟಾರ್ಮ್ ಮತ್ತು ಹೆರಿಗೆಯಲ್ಲಿ ಕಂಜೆಸ್ಟಿವ್ ಹೃದಯ ವೈಫಲ್ಯಗಳಿಗೂ ಸಂಬಂಧವಿದೆ.
ಅಯೋಡಿನ್ ಮತ್ತು ಗರ್ಭಧಾರಣೆ:
ಭ್ರೂಣದ ಮೆದುಳಿನ ಸಹಜ ಬೆಳವಣಿಗೆ ಆಗಬೇಕಾದರೆ, ಥೈರಾಯಿಡ್ ಹಾರ್ಮೋನ್ ಸಹಜ ಮಟ್ಟದಲ್ಲಿ ಇರಬೇಕಾದುದು ಬಹಳ ಆವಶ್ಯಕ.ಗರ್ಭಧಾರಣೆಯ ಅವಧಿಯಲ್ಲಿ ತಾಯಿ ಮತ್ತು ಭ್ರೂಣದಲ್ಲಿನ ಶಿಶುವಿನಲ್ಲಿನ ಅಯೋಡಿನ್ ಕೊರತೆಯು, ಮಗುವಿನ ಗ್ರಹಿಕೆ ಅಥವಾ ಬುದ್ಧಿಶಕ್ತಿಯ ಚಟುವಟಿಕೆಯ ಮೇಲೆ ಅಡ್ಡಪರಿಣಾಮವನ್ನು ಉಂಟು ಮಾಡುತ್ತದೆ. ಯಾವ ಮಕ್ಕಳ ತಾಯಿಗೆ ಗರ್ಭಧಾರಣೆಯ ಅವಧಿಯಲ್ಲಿ ವಿಶೇಷವಾದ ಅಯೋಡಿನ್ ಕೊರತೆ ಎದುರಾಗಿತ್ತೋ, ಅಂತಹ ಮಕ್ಕಳಲ್ಲಿ ಕ್ರೆಟಿನಿಸಂ, ಅಂದರೆ ವಿಶೇಷವಾದ ಬುದ್ಧಿಮಾಂದ್ಯತೆಯ ಲಕ್ಷಣ, ಕಿವುಡುತನ, ಮತ್ತು ಚಲನವಲನದ ಸೆಡೆತ ದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಜಗತ್ತಿನಾದ್ಯಂತ ಇರುವ ತಡೆಯಬಹುದಾದ ಬುದ್ಧಿಮಾಂದ್ಯತೆಗಳಿಗೆ ಪ್ರಮುಖ ಕಾರಣವಾಗಿರುವುದು ಅಯೋಡಿನ್ ಕೊರತೆ.
ಅಯೋಡಿನೈಸ್ಡ್ ಉಪ್ಪನ್ನು ಸೇವಿಸುವುದು ಜಗತ್ತಿನಾದ್ಯಂತ ಅಯೋಡಿನ್ ಕೊರತೆಯನ್ನು ನಿವಾರಣೆಯ ಪ್ರಮುಖ ಅಂಶವಾಗಿದೆ. ಅಯೋಡಿನ್ ಅನ್ನು ಹೊಂದಿರುವ ಆಹಾರ ಪದಾರ್ಥಗಳು ಅಂದರೆ, ಸಮುದ್ರಾಹಾರಗಳು, ಮೊಟ್ಟೆ, ಮಾಂಸ ಮತ್ತು ಪೌಲಿó ಉತ್ಪನ್ನಗಳು. ಸಮುದ್ರ ಮೂಲದ ಆಹಾರಗಳಲ್ಲಿ ಅಯೋಡಿನ್ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ, ಈ ಜೀವಿಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಅಧಿಕ ಪ್ರಮಾಣದ ಅಯೋಡಿನ್ ಪೂರೈಕೆಯಾಗುತ್ತದೆ. ಗರ್ಭಿಣಿ ಮಹಿಳೆಯರು ಮತ್ತು ಹಾಲೂಡಿಸುತ್ತಿರುವ ಮಹಿಳೆಯರು ದಿನ ಒಂದಕ್ಕೆ 250 ಮಿ. ಗ್ರಾಂ ಅಯೋಡಿನ್ ಅನ್ನು ಸೇವಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡುತ್ತದೆ.
ಗರ್ಭಧಾರಣಾ ಅವಧಿಯ ಇತರ ಥೈರಾಯಿಡ್ ಕಾಯಿಲೆಗಳು
ಗರ್ಭಧಾರಣಾ ಅವಧಿಯಲ್ಲಿ ಪತ್ತೆಯಾಗುವ ಥೈರಾಯಿಡ್ ಗಡ್ಡೆಗಳು ಮತ್ತು ಥೈರಾಯಿಡ್ ಕ್ಯಾನ್ಸರ್ – ವೈದ್ಯರು ಮತ್ತು ಗರ್ಭಧರಿಸಿರುವ ತಾಯಿಗೆ ಬಹಳ ಸವಾಲಿನದಾಗಿರುತ್ತವೆ. ಇಲ್ಲಿ ಗರ್ಭಿಣಿ ತಾಯಿ, ಬೆಳೆಯುತ್ತಿರುವ ಭ್ರೂಣ ಅಥವಾ ಗರ್ಭಧಾರಣೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ, ತಪಾಸಣೆಯ ನಿಖರತೆ ಮತ್ತು ಚಿಕಿತ್ಸೆಯ ಅಳವಡಿಕೆಯ ನಡುವೆ ಒಂದು ಎಚ್ಚರಿಕೆಯ ಸಮತೋಲನ ಇರಬೇಕಾಗುತ್ತದೆ.
ಥೈರಾಯಿಡ್ ಗಡ್ಡೆಗಳನ್ನು ತಪಾಸಣೆ ಮಾಡಲು, ಅವುಗಳ ಗುಣಲಕ್ಷಣಗಳನ್ನು ಪತ್ತೆ ಮಾಡಲು, ಅದರ ಬೆಳವಣಿಗೆ ಮತ್ತು ಕುತ್ತಿಗೆಯ ದುಗ್ಧಗ್ರಂಥಿಯನ್ನು ವಿಶ್ಲೇಷಿಸಲು ಥೈರಾಯಿಡ್ ಗ್ರಂಥಿಯ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಮಾಡುತ್ತಾರೆ.
ಇದು ಗರ್ಭಧಾರಣಾ ಅವಧಿಯ ಯಾವುದೇ ತ್ರೆ„ಮಾಸಿಕದಲ್ಲಿಯಾದರೂ ನಡೆಸಬಹುದಾದ ಸುರಕ್ಷಿತ ತಪಾಸಣಾ ಸಾಧನಾ ಪ್ರಕ್ರಿಯೆ. ಹಾಗಿದ್ದರೂ ಸಹ ಗರ್ಭಧಾರಣೆಯ ಅವಧಿಯಲ್ಲಿ ರೇಡಿಯೋನ್ಯೂಕ್ಲಿಯೈಡ್ ಸ್ಕ್ಯಾನಿಂಗ್ ಬಳಕೆಯು ವ್ಯತಿರಿಕ್ತ ಪರಿಣಾಮವನ್ನೂ ಉಂಟುಮಾಡಬಹುದು.
ಈಗಾಗಲೇ ಥೈರಾಯಿಡ್ ಕ್ಯಾನ್ಸರ್ ಇದೆ ಎಂದು ಗುರುತಿಸಲಾಗಿರುವ ಮಹಿಳೆಯರಲ್ಲಿ ಗರ್ಭಧಾರಣೆ ಆಗುವುದರಿಂದಾಗಿ ಕಾಯಿಲೆಯ ಪರಿಸ್ಥಿತಿ ಇನ್ನಷ್ಟು ಹದಗೆಡುವುದಿಲ್ಲ. ಗರ್ಭಧಾರಣೆಯ ಹಂತದಲ್ಲಿ ತಪಾಸಣೆಯಾದ ಕೆಲವು ಥೈರಾಯಿಡ್ ಕ್ಯಾನ್ಸರ್‌ಗಳ ಶಸ್ತ್ರಚಿಕಿತ್ಸೆಯನ್ನು ಪ್ರಸವಾನಂತರದವರೆಗೂ ಮುಂದೂಡಬಹುದು. ಇದರಿಂದ ಕ್ಯಾನ್ಸರ್ ಗಡ್ಡೆಯ ಮರುಕಳಿಕೆ ಅಥವಾ ಮರಣ ಸಾಧ್ಯತೆಯ ಮೇಲೆ ಯಾವ ಪರಿಣಾಮವೂ ಉಂಟಾಗುವುದಿಲ್ಲ. ಒಂದು ವೇಳೆ ದೊಡ್ಡ ಗಾತ್ರದ ಪ್ರ„ಮರಿ ಟ್ಯೂಮರ್ ಆಗಿದ್ದರೆ, ಅಥವಾ ದುಗ್ಧರಸ ಗ್ರಂಥಿಯ ವ್ಯಾಪಕ ಮೆಟಾಸ್ಟೇಸಸ್ ಸಂದರ್ಭಗಳಲ್ಲಿ ಮಾತ್ರವೇ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.