ಆರೋಗ್ಯ

ಸಿಗರೇಟ್ ಸೇವೆನೆಯಿಂದ ಕಫ ಆಗಿದ್ದರೆ ನಿವಾರಣೆಗಾಗಿ ಹೀಗೆ ಮಾಡಿ….

Pinterest LinkedIn Tumblr

ಸಿಗರೇಟ್ ಸೇದಿದರೆ ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಧೂಮಪಾನದಿಂದ ಆಗುವ ತೊಂದರೆಗಳು ಅಷ್ಟಿಷ್ಟಲ್ಲ. ಎದೆ ನೋವು ಸಾಮಾನ್ಯ. ಜೊತೆಗೆ ಬಹಳಷ್ಟು ಮಂದಿಗೆ ಕಫದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ನಿವಾರಣೆಗೆ ನಮ್ಮ ಪೂರ್ವಿಕರ ಆರೋಗ್ಯ ಸೂತ್ರಗಳಲ್ಲಿ ಪರಿಣಾಮಕಾರಿ ಚಿಕಿತ್ಸೆ ಇದೆ. ಸುಲಭವಾಗಿ ಸಿಗುವ ಕೆಲ ವಸ್ತುಗಳನ್ನು ಬಳಸಿ ಈ ಔಷಧ ತಯಾರಿಸಬಹುದು.

ಏನೇನು ಬೇಕು?
* ವೀಳ್ಯದೆಲೆ 1
* ಪಚ್ಚ ಕರ್ಪೂರ (ಮೆಣಸಿನಕಾಳಿನ ಗಾತ್ರದಷ್ಟು)
* ತುಳಸಿ ಎಲೆ 5
* ಲವಂಗ 1
ಪಚ್ಚ ಕರ್ಪೂರ, ತುಳಸಿ ಎಲೆ ಹಾಗೂ ಲವಂಗವನ್ನು ವೀಳ್ಯದೆಲೆಯೊಳಗೆ ಸೇರಿಸಿ ಅದನ್ನು ಬಾಯಿಯೊಳಗೆ ಹಾಕಿಕೊಳ್ಳಬೇಕು. ರಸವನ್ನು ಆಚೆ ಉಗಿಯಬಾರದು. ಇದನ್ನು ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಬಾಯಿಯಲ್ಲೇ ಇಟ್ಟುಕೊಳ್ಳಬೇಕು. ಹೀಗೇ ನೀವು ಐದಾರು ದಿನ ಮಾಡಿದರೆ ಕಫದ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ.

Comments are closed.