ಆರೋಗ್ಯ

ಈ ಕೆಟ್ಟ ಚಟ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ, ಇಲ್ಲವಾದರೆ ಏನಾಗುತ್ತೆಂತ ಈ ಲೇಖನ ಓದಿ…

Pinterest LinkedIn Tumblr

ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯೇ ಹಾಗಿದ್ದರೆ ಇದನ್ನು ಓದಿ. ಉಗುರು ಕಚ್ಚುವ ಅಭ್ಯಾಸದಿಂದ ತನ್ನ ಜೀವವನ್ನೇ ಕಳೆದುಕೊಂಡ ವ್ಯಕ್ತಿಯ ಕಥೆ…

ದುರಭ್ಯಾಸಗಳಿಗೆ ಆರಾಮದಾಯಕ ಹಾಸಿಗೆಯಿದ್ದಂತೆ. ಅವುಗಳನ್ನು ಕಲಿಯುವುದು ಸುಲಭ. ಆದರೆ ಅವುಗಳಿಂದ ಮುಕ್ತರಾಗುವುದು ಕಷ್ಟಕರವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಹಲವಾರು ರೂಪ, ದಾರಿಗಳ ಮೂಲಕ ಜನರು ಉಗುರು ಕಚ್ಚುವ ಅಭ್ಯಾಸಕ್ಕೆ ಬಲಿಯಾಗುತ್ತಿದ್ದಾರೆ. ಅವರಲ್ಲಿ ಕೆಲವರು ಅದರಿಂದಾಗುವ ದುಷ್ಪರಿಣಾಮದಿಂದಾಗಿ ಅಭ್ಯಾಸವನ್ನು ಸ್ಥಗಿತಗೊಳಿಸುತ್ತಾರೆ. ಆದರೆ ಮತ್ತೆ ಕೆಲವರು ಕಲಿತ ಅಭ್ಯಾಸ ಚಟವಾಗಿ ಪರಿವರ್ತನೆಗೊಂಡು ಉಗುರು ಕಚ್ಚುವುದನ್ನು ಮುಂದುವರಿಸುತ್ತಾರೆ, ಅದನ್ನೇ ಹಿಂದಿಯಲ್ಲಿ ಆದತ್‍ಸೆ ಮಜ್‍ಬೂರ್ ಎನ್ನುತ್ತಾರೆ.

ಉಗುರು ಕಚ್ಚುವ ಅಭ್ಯಾಸ ಕೇವಲ ಆತಂಕ ಅಥವಾ ಹೆದರಿಕೆಯಿಂದ ಕೂಡಿಲ್ಲ. ಇದರಿಂದ ಪ್ರಮುಖ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ತೊಳೆಯದ ಕೈಬೆರಳನ್ನು ನಾವು ಬಾಯಿಯಲ್ಲಿ ಇಟ್ಟುಕೊಂಡಾಗ, ಶೀತ, ನೆಗಡಿ, ಜ್ವರದಂತಹ ಸಾಂಕ್ರಾಮಿಕ ರೋಗಗಳು ನಮ್ಮನ್ನು ಕಾಡುತ್ತವೆ ಮತ್ತು ಬೆರಳಿನಲ್ಲಿ ಸೋಂಕು ಹತ್ತಲು ಕಾರಣವಾಗುತ್ತದೆ. ನಂತರ ಚರ್ಮದ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಜಾನ್ ಗಾರ್ಡ್‍ನೆಯರ್ ಎನ್ನುವ 40 ವರ್ಷ ವಯಸ್ಸಿನ ವ್ಯಕ್ತಿ ಉಗುರು ಕಚ್ಚುವ ಅಭ್ಯಾಸಕ್ಕೆ ಬಲಿಯಾಗಿರುತ್ತಾನೆ. ವೈದ್ಯರು ಅದರಿಂದಾಗುವ ಪರಿಣಾಮಗ ಕುರಿತು ಅವನಿಗೆ, ಮನವರಿಕೆ ಮಾಡಿಕೊಟ್ಟಿದ್ದರೂ ಅದನ್ನು ಅವನು ಮುಂದುವರಿಸಿರುತ್ತಾನೆ. ಅಂತಿಮವಾಗಿ ಅದು ಅವನನ್ನು ನೋವುಕಾರಕ ಸೋಂಕನ್ನು ಉಂಟುಮಾಡುವುದರೊಂದಿಗೆ ಅವನ ಹೃದಯಾಘಾತಕ್ಕೂ ಕಾರಣವಾಗುತ್ತದೆ.

ವೈದ್ಯರು ತಿಳುವಳಿಕೆ ನೀಡಿದ ನಂತರವೂ ಅವನು ಉಗುರು ಕಚ್ಚುವ ಅಭ್ಯಾಸ ಮುಂದುವರಿಸಿದ್ದರಿಂದ ಆತನ ಉಗುರುಗಳು ಹಾಳಾಗುತ್ತವೆ ಮತ್ತು ನೋವುರಹಿತ ಹಾಗೂ ಸ್ಪರ್ಶಜ್ಞಾನವಿಲ್ಲದಂತಹ ಸಮಸ್ಯೆಯೂ ಆರಂಭವಾಯಿತು.

ಡಾ.ಮೆಮನ್ ಅವರ ಪ್ರಕಾರ ಆತಂಕ ಮತ್ತು ಅಸಂತೋಷ, ಅಸಮಾಧಾನ ಉಗುರು ಕಚ್ಚುವ ಅಭ್ಯಾಸಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಜಾನ್ ಗಾರ್ಡ್‍ನರ್ ಅವನ ಉಗುರುಗಳಲ್ಲಿ ಮೊದಲು ರಕ್ತ ಸೋರುವಿಕೆ ಆರಂಭಿಸಿದೆ. ನಂತರ ಸೋಂಕು ಆರಂಭವಾಗಿದೆ. ಈ ಸಮಸ್ಯೆಗೆ ವೈದ್ಯರು ನೀಡಿದ ಯಾವುದೇ ಚಿಕಿತ್ಸೆಯಿಂದ ಪ್ರಯೋಜನವಾಗಲಿಲ್ಲ. ಕೊನೆಗೆ ಆತ ತನ್ನ 40 ವರ್ಷದ ಹುಟ್ಟುಹಬ್ಬದ ಕೆಲ ದಿನಗಳ ಮೊದಲು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾನೆ.

ಜಾನ್‍ನ ಈ ಕಥೆಯಿಂದ ನೀವು ಪಾಠ ಕಲಿಯುತ್ತೀರಲ್ಲವೇ? ನೀವೂ ಯೋಚಿಸಿ ಉಗುರು ಕಚ್ಚುವುದು ದುರಭ್ಯಾಸ ಅಭ್ಯಾಸ ನಿಮಗಿದ್ದರೆ, ಅದರಿಂದಾಗುವ ಅನಾಹುತಕ್ಕೂ ಮೊದಲು ಅದರಿಂದ ಹೊರಬನ್ನಿ.

Comments are closed.