ಆರೋಗ್ಯ

ಜ್ವರ ನಿವಾರಣೆಗೆ.. ರಾಮಬಾಣ ಈ ಸರಳವಾದ ಮನೆ ಮದ್ದು.

Pinterest LinkedIn Tumblr

ಜ್ವರಗಳಲ್ಲಿ ನಾನಾ ರೀತಿಯ ಜ್ವರಗಳು ಇರುತ್ತವೆ. ಇದರಲ್ಲಿ ವೈರಲ್ ಫೀವರ್ ಕೂಡ ಒಂದು. ಇದರ ಗುಣಲಕ್ಷಣ ಗಳೆಂದರೆ, ನಮ್ಮ ದೇಹದ ಒಳ ಭಾಗಗಳಿಗೆ(ಲಿವರ್, ಕರುಳು,ಗಂಟಲು,ಕಿಡ್ನಿ etc) ಸೋಂಕು ತಗುಲಿ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗಿ ಜ್ವರ ಕಾಣಿಸಿಕೊಳ್ಳುತ್ತದೆ. ಮೈ ಕೈ ನೋವು, ಮೂಗು ಸೋರುವುದು, ಶೀತ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಈ ವೈರಲ್ ಫೀವರ್ ಗೆ ಕೇವಲ ಆಂಟಿ ಬಯೋಟಿಕ್ ತೆಗೆದುಕೊಳ್ಳುವುದರಿಂದ ನಾವು ಬಹು ಬೇಗ ಗುಣಮುಖವಾಗಲು ಸಾಧ್ಯವಿಲ್ಲ. ಏಕೆಂದರೆ ಆಂಟಿ ಬಯೋಟಿಕ್ ನಿಂದ ನಮ್ಮ ದೇಹದ ಒಳಗಿರುವ ವೈರಸ್ ಗಳು ಹೊಡೆದು ಹೊಡಿಸಲು ಸಾಧ್ಯವಾಗುವುದಿಲ್ಲ. ನೀವು ಈ ವೈರಲ್ ಫೀವರ್ ಕಾಣಿಸಿಕೊಂಡಾಗ ಸುಮ್ಮನೆ ಆಂಟಿ ಬಯೋಟಿಕ್ ತೆಗೆದುಕೊಳ್ಳುತ್ತಾ ಹೋದರೆ ನಮ್ಮ ದೇಹದಲ್ಲಿರುವ ಉಪಯುಕ್ತ ವೈರಸ್ ಗಳನ್ನು ನಾಶ ಮಾಡಿ ಬಿಡುತ್ತದೆ ಮತ್ತು ಆಂಟಿಬಯಾಟಿಕ್ ಗಳಿಂದ ಅಡ್ಡ ಪರಿಣಾಮಗಳೇ ಹೆಚ್ಚು ಮತ್ತು ನಿಮ್ಮ ಮೂತ್ರಪಿಂಡಗಳಿಗೆ ತಂದರೆ ಆಗುವ ಸಾಧ್ಯತೆಗಳಿರುತ್ತವೆ.

ಆದ್ದರಿಂದ ವೈರಲ್ ಫೀವರ್ ಬಂದಾಗ ಸಾಧ್ಯವಾದಷ್ಟು ಮನೆಮದ್ದುಗಳನ್ನು ಉಪಯೋಗಿಸುವುದು ಉತ್ತಮ.ಇಲ್ಲಿವೆ ನೋಡಿ ವಿವರವಾದ ಮನೆಮದ್ದುಗಳು…

1. ಶುಂಠಿ ನಮ್ಮ ದೇಹದಲ್ಲಿನ ರೋಗಕಾರಕ ವೈರಸ್ ಗಳನ್ನು ಹೊಡೆದೋಡಿಸುವಲ್ಲಿ ಪ್ರಯೋಜನಕಾರಿ. ಒಂದು ಕಪ್ ಬಿಸಿ ನೀರಿನಲ್ಲಿ ಶುಂಠಿಯನ್ನು ಕುದಿಸಿ ಅದು ಸ್ವಲ್ಪ ಆರಿದ ನಂತರ ಅದಕ್ಕೆ ಒಂದು ಮೂರು ಚಮಚ ಜೇನುತುಪ್ಪವನ್ನು ಸೇರಿಸಿ, ಬೆಳಗ್ಗೆ ಮಧ್ಯಾಹ್ನ ಸಂಜೆ ಹೀಗೆ ಮೂರು ಹೊತ್ತು ಕುಡಿದರೆ ವೈರಲ್ ಫೀವರ್ ಕಡಿಮೆಯಾಗುತ್ತದೆ. ಅಥವಾ ಒಣಶುಂಠಿ ಯಲ್ಲಿಗೆ ಜೇನುತುಪ್ಪವನ್ನು ಸೇರಿಸಿ ತಿನ್ನುವುದರಿಂದ ಜ್ವರ ಕಡಿಮೆಯಾಗುತ್ತದೆ.

2. ನಿಂಬೆ ವೈರಲ್ ಫೀವರ್ ಗೆ ನಿಂಬೆ ಪ್ರಯೋಜನಕಾರಿ. ದಿನವೂ ನಿಂಬೆ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ವೈರಲ್ ಫೀವರ್ ಒಂದು ಮಟ್ಟಕ್ಕೆ ನಿಯಂತ್ರಿಸಬಹುದು.

3. ಕೊತ್ತಂಬರಿ ಕೋರಿಯಂಡರ್ ಜೂಸ್ ವೈರಲ್ ಫೀವರ್ ಗೆ ರಾಮಬಾಣ. ದಿನವೂ ಈ ಜೂಸ್ ಕುಡಿದರೆ ಜ್ವರ ಕಡಿಮೆಯಾಗುವುದು ಖಂಡಿತ.

4. ಅರಿಶಿಣ ಅರಿಶಿನವನ್ನು ಅಡುಗೆಯಲ್ಲಿ ಸೇವಿಸುವುದರಿಂದ ವೈರಲ್ ಫೀವರ್ ನಿಂದ ಗುಣಮುಖರಾಗಬಹುದು.ಮಾತ್ರೆಗಳನ್ನು ತೆಗೆದುಕೊಳ್ಳುತ್ತಲೇ ಮೇಲಿನ ಮನೆಮದ್ದು ಗಳನ್ನು ಬಳಸಬಹುದು.ಇಷ್ಟೇ ಅಲ್ಲ ವೈರಲ್ ಫೀವರ್ ಬಡಿದೋಡಿಸಲು ಇನ್ನೂ ಹತ್ತು ಹಲವು ಉಪಾಯಗಳಿವೆ.

Comments are closed.