ಮಂಗಳೂರು, ಮಾರ್ಚ್. 30: ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 15 ಮಂದಿ ಅಭ್ಯರ್ಥಿಗಳು 24 ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ವೇಳೆ ಒಂದು ನಾಮಪತ್ರ ತಿರಸ್ಕೃತಗೊಂಡಿದ್ದು, 14 ನಾಮಪತ್ರ ಕ್ರಮಬದ್ಧವಾಗಿತ್ತು. ನಾಮಪತ್ರ ವಾಪಸ್‌ಗೆ ಕೊನೆಯ ದಿನವಾದ ಶುಕ್ರವಾರ ಓರ್ವ ನಾಮಪತ್ರ ಹಿಂದೆಗೆದುಕೊಂಡಿದ್ದು, ಅಂತಿಮವಾಗಿ ಕಣದಲ್ಲಿ 13 ಅಭ್ಯರ್ಥಿಗಳಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಅಭ್ಯರ್ಥಿ ಹೆಸರು- ಪಕ್ಷ – ಚಿಹ್ನೆ
ನಳಿನ್ ಕುಮಾರ್ ಕಟೀಲ್- ಬಿಜೆಪಿ- ಕಮಲ / ಮಿಥುನ್ ಎಂ. ರೈ- ಕಾಂಗ್ರೆಸ್- ಕೈ / ಎಸ್.ಸತೀಶ್ ಸಾಲ್ಯಾನ್- ಬಿಎಸ್‌ಪಿ- ಆನೆ / ಮುಹಮ್ಮದ್ ಇಲ್ಯಾಸ್ ತುಂಬೆ- ಎಸ್‌ಡಿಪಿಐ- ಗ್ಯಾಸ್ ಸಿಲಿಂಡರ್ / ವಿಜಯ ಶ್ರೀನಿವಾಸ್ ಸಿ.- ಉತ್ತಮ ಪ್ರಜಾಕೀಯ ಪಾರ್ಟಿ- ಆಟೋ ರಿಕ್ಷಾ / ಸುಪ್ರೀತ್‌ಕುಮಾರ್ ಪೂಜಾರಿ- ಹಿಂದುಸ್ಥಾನ ಜನತಾ ಪಾರ್ಟಿ- ಹೂಕೋಸು / ಅಬ್ದುಲ್ ಹಮೀದ್- ಪಕ್ಷೇತರ -ಚಾವಿ (ಕೀ) / ಅಲೆಗ್ಸಾಂಡರ್- ಪಕ್ಷೇತರ- ವಜ್ರ / ದೀಪಕ್ ರಾಜೇಶ್ ಕುವೆಲ್ಲೊ- ಪಕ್ಷೇತರ- ಡೀಸೆಲ್ ಪಂಪ್ / ಮುಹಮ್ಮದ್ ಖಾಲಿದ್- ಪಕ್ಷೇತರ- ಪ್ರೆಶರ್ ಕುಕ್ಕರ್ / ಮ್ಯಾಕ್ಸಿಂ ಪಿಂಟೊ- ಪಕ್ಷೇತರ- ಮಡಿಕೆ / ವೆಂಕಟೇಶ್ ಬೆಂಡೆ- ಪಕ್ಷೇತರ- ಕಹಳೆ ಊದುತ್ತಿರುವ ಮನುಷ್ಯ / ಎಚ್.ಸುರೇಶ್ ಪೂಜಾರಿ- ಪಕ್ಷೇತರ- ಬ್ಯಾಟ್.
Comments are closed.