ಆರೋಗ್ಯ

ಪರ್ವಾತಾರೋಹಿ ಮತ್ತು ಟ್ರಕ್ಕಿಂಗ್ ಪ್ರಿಯರಿಗೆ ಈ ತರಕಾರಿ ಶಕ್ತಿ ವರ್ಧಕ

Pinterest LinkedIn Tumblr

ಹೌದು ಬೀಟ್ ರೂಟ್ ನಲ್ಲಿರುವ ನೈಟ್ರೇಟ್ ರಕ್ತ ಕಣಗಳನ್ನು ಅಗಲಗೊಳಿಸುತ್ತದೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ .ಎದೆ ನೋವಿನಿಂದ ಬಳಲುವವರು ನೈಟ್ರೇಟ್ ನ್ನು ಬಳಸುತ್ತಾರೆ ಎಂದಿದ್ದಾರೆ ವಿಜ್ಞಾನಿಗಳು.ಎಂದರೆ ಈ ಸಮಸ್ಯೆಯ ಪರಿಹಾರವೂ ಸಹ ಬೀಟ್ ರೂಟ್ನಲ್ಲಿದೆ ಎಂದಾಯಿತು.ಲಂಡನ್ ಮೆಡಿಕಲ್ ಶಾಲೆಗೆ ಸೇರಿರುವ ಬಾರ್ಟ್ ಹೆಲ್ತ್ ಎನ್ ಎಚ್ ಎಸ್ ಟ್ರಸ್ಟ್ ನ ಸಂಶೋಧಕರು ನಡೆಸಿದ ಸಂಶೋಧನೆಯಿಂದ ಈ ಸಂಗತಿ ದೃಢಪಟ್ಟಿದೆ.

ಬ್ರಿಟಿಷ್ ಹಾರ್ಟ್ ಫೌಂಡೇಷನ್ ನ ವೈದ್ಯಕೀಯ ನಿರ್ದೇಶಕರಾದ ಪ್ರೊ.ಪೀಟರ್ ವಿಸ್ಬೆರಗ್ ಹೇಳೋದಿಷ್ಟೆ.. ನಮಗೆ ತರಕಾರಿ ಸೇವನೆಯ ಮಹತ್ವ ತಿಳಿದಿದೆ. ಆದರೆ ಯಾವ ತರಕಾರಿಗಳಲ್ಲಿ ನೈಟ್ರೇಟ್ ಪ್ರಮಾಣಹೆಚ್ಚಿದೆ ಎಂದು ತಿಳಿದು ರಕ್ತದೊತ್ತಡದವನ್ನು ದೂರ ಮಾಡಿಕೊಳ್ಳುವತ್ತ ಗಮನ ನೀಡಬೇಕು.

ಇಷ್ಟು ದಿನಗಳ ಕಾಲ ಈ ತರಕಾರಿ ರಕ್ತಹೀನತೆಯನ್ನು ದೂರ ಮಾಡುತ್ತಿತ್ತು.. ಈಗ ಅಧಿಕ ರಕ್ತದೊತ್ತಡಕ್ಕೂ ಸಹ ಕಡಿವಾಣ ಹಾಕುತ್ತದೆ.

ನಿಮ್ಮ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಲು ಇದು ಸಹಕಾರಿಯಾಗಿದೆ ಅದಲ್ಲದೆ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿಮಟ್ಟವನ್ನು ಚುರುಕುಗೊಳಿಸುತ್ತದೆ.

ನಿಮ್ಮ ದೇಹದ ಮಾಂಸಖಂಡಗಳನ್ನು ಶಕ್ತಿಯುತವಾಗಿ ಮಾಡುತ್ತದೆ ಮತ್ತು ಬಲವೃದ್ಧಿಸುತ್ತದೆ.

ದೇಹಿಕ ಆರೋಗ್ಯಕ್ಕೆ ಈ ಜ್ಯೂಸ್ ತುಂಬಾನೇ ಸಹಕಾರಿಯಾಗಿದೆ ಪರ್ವಾತಾರೋಹಿಗಳು ಮತ್ತು ಟ್ರಕ್ಕಿಂಗ್ ಪ್ರಿಯರಿಗೆ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ.

ಕ್ರೀಡಾ ಪಟುಗಳಿಗೆ ಇನ್ನೂ ಉತ್ತಮ ಪ್ರದರ್ಶನ ನೀಡಬೇಕಾದರೆ ಅಗತ್ಯವಾದ ಶಕ್ತಿ ಒದಗಿಸತ್ತದೆ.

ಮಲಬದ್ಧತೆ ಅಥವಾ ಬಹಿರ್ದೆಸೆ ಸಮಸ್ಯೆಗಳೂ ನಿವಾರಣೆಯಾಗುತ್ತವೆ.

ಜೊತೆಯಲ್ಲಿ ಇದನ್ನು ಓದಿ ಉತ್ತರಾಣಿ ಗಿಡದಲ್ಲಿದೆ ಔಷಧಿಯ ಗುಣ.

ಜಾಂಡೀಸ್ ನಿವಾರಣೆಗೆ : ೧೦ ಗ್ರಾಂ ಉತ್ತರಣೆ ಬೀಜಗಳನ್ನು ರಾತ್ರಿ ನೆನೆಹಾಕಿ ಬೆಳೆಗ್ಗೆ ಚೆನ್ನಾಗಿ ರುಬ್ಬಿ, ಮಜ್ಜಿಗೆಯೊಂದಿಗೆ ಸೇವಿಸಬೇಕು. (ಒಂದು ವಾರ) ಪಥ್ಯ: ತಿಳಿಸಾರು, ಅನ್ನ, ಎಣ್ಣೆ ಸೇವಿಸಕೂಡದು.

ಸರ್ಪ ವಿಷ ನಿವಾರಣೆಗೆ : ಉತ್ತರಣೆಯ ಬೇರು, ಕರಿಮೆಣಸು, ಎರಡನ್ನು ಸಮ ಪ್ರಮಾಣದಲ್ಲಿ ಚೂರ್ಣಿಸಿಕೊಂಡು, ಒಂದು ಚಮಚದಷ್ಟು ನುಣ್ಣನೆಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಸಬೇಕು. ವಿಷವು ನಿವಾರಣೆಯಾಗುವವರೆಗೂ ಆಗಾಗ ಕುಡಿಸುತ್ತಿರಬೇಕು. ಎಂದು ಭಾವಮಿಶ್ರನೆಂಬ ಪ್ರಾಚೀನ ಋಷಿಯು ಹೇಳಿರುತ್ತಾನೆ.

ಬಂಜೆತನದಲ್ಲಿ : ಉತ್ತರಾಣಿ ಗಿಡದ ಹೂಗೊಂಚಲುಗಳನ್ನು ತಂದು ಎಮ್ಮೆ ಹಾಲಿನಲ್ಲಿ ನಯವಾಗಿ ಅರೆದು ಬಟ್ಟೆಯಲ್ಲಿ ಶೋಧಿಸುವುದು. ದಿವಸಕ್ಕೆ 10 ಗ್ರಾಂನಷ್ಟು ಹಾಲನ್ನು ಹೊರಗಾಗಿರುವಾಗ ಐದು ದಿವಸ ಸೇವಿಸುವುದು. ಹಾಲು ಅನ್ನ ಪಥ್ಯ, ಶಾಂತಚಿತ್ತರಾಗಿರುವುದು ಭಗವಂತನ ಕೃಪೆಯಿಂದ ಗರ್ಭವತಿಯಾಗುವರು. ಹೀಗೆ ಕ್ರಮವಾಗಿ ಮೂರು ಮುಟ್ಟಿನಲ್ಲಿ ಮಾಡಬೇಕು.

ಇಸಬಿಗೆ : ಕೆಂಪು ಉತ್ತರಾಣಿ ಗಿಡವನ್ನು ಬೇರು ಸಹಿತ ತಂದು, ಸುಟ್ಟು ಬೂದಿ ಮಾಡುವುದು, 20 ಗ್ರಾಂ ಈ ಬೂದಿಗೆ 5 ಗ್ರಾಂ ವೀಳೆದೆಲೆಗೆ ಹಾಕುವ ಸುಣ್ಣ ಮತ್ತು 5 ಗ್ರಾಂ ಅರಿಶಿಣದ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಶೋಧಿಸಿದ ಗೋಮೂತ್ರದಲ್ಲಿ ಅರೆದು ಹಚ್ಚುವುದು.

ಪೆಟ್ಟು ತಾಗಿ, ರಕ್ತ ಸೋರುತ್ತಿದ್ದರೆ : ಕೆಂಪು ಉತ್ತರಾಣಿ ಗಿಡದ ಸೊಪ್ಪಿನ ರಸವನ್ನು ಗಾಯದ ಮೇಲೆ ಹಿಂಡುವುದು. ತಕ್ಷಣ ರಕ್ತಸ್ರಾವ ನಿಲ್ಲುವುದು ಮತ್ತು ಗಾಯವು ಕ್ರಮೇಣ ವಾಸಿಯಾಗುವುದು.

Comments are closed.